ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಪಕ್ಕೆ ಮೂಳೆ, ಬಲತೊಡೆಗೆ ಬಲವಾದ ಪೆಟ್ಟು ಬಿದ್ದಿದೆ: ಜಗ್ಗೇಶ್‌ ಟ್ವೀಟ್‌

ಅಕ್ಷರ ಗಾತ್ರ

ಬೆಂಗಳೂರು: ನವರಸನಾಯಕ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಪ್ರಯಾಣಿಸುತ್ತಿದ್ದ ಕಾರು ಗುರುವಾರ ಅಪಘಾತಕ್ಕೀಡಾಯಿತು. ಈ ಕುರಿತು ಮಾಹಿತಿ ನೀಡಿರುವ ಜಗ್ಗೇಶ್, ಮಗನಿಗೆ ಬಹಳ ಏಟು ಬಿದ್ದಿದೆ. ಪಕ್ಕೆ ಮೂಳೆ ಬಲತೊಡೆಗೆ ಬಲವಾದ ಪೆಟ್ಟು ಬಿದ್ದಿದೆ. ಚಿಕಿತ್ಸೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, 'ಜೀವನದಲ್ಲಿ ಸಂಸಾರದ ಸರ್ವ ಸದಸ್ಯರ ಭಾರಹೊತ್ತು, ತನಗಾಗಿ ಏನು ಬಯಸದೆ! ತನ್ನವರಿಗಾಗಿ ಬಂದದ್ದೆಲ್ಲಾ ಸಹಿಸಿ ನೋವು ನುಂಗಿ ಹೆಜ್ಜೆಹಾಕುವ ಮೌನಯೋಗಿ ಅಪ್ಪ. ಇಂದು ಬಹಳ ನೆನಪಾದ ನನ್ನ ಅಪ್ಪ. ಅವನ ತ್ಯಾಗದ ಮುಂದೆ ಇಂದು ನಾನು ತೃಣ ಎನ್ನಿಸಿತು. ಮಗನಿಗೆ ಬಹಳ ಒಳ ಏಟು ಬಿದ್ದಿದೆ, ಪಕ್ಕೆ ಮೂಳೆ ಬಲ ತೊಡೆ ಲಿಗಮೆಂಟ್‌ಗೆ ಬಲವಾದ ಪೆಟ್ಟು, ಚಿಕಿತ್ಸೆ ನಡೆಯುತ್ತಿದೆ' ಎಂದು ಹೇಳಿದ್ದಾರೆ.

ಈ ಮೊದಲು ಟ್ವೀಟ್ ಮಾಡಿದ್ದ ಜಗ್ಗೇಶ್, 'ಕೊರೊನಾ ಬಂದಾಗಿನಿಂದ ಹೊರ ಹೋಗಿಲ್ಲಾ ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ, ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆ ಬಿದ್ದಿದೆ!. ರಾಯರ ದಯೇ ಹಾಗೂ ನಿಮ್ಮ ಶುಭಹಾರೈಕೆ, ಯತಿರಾಜನಿಗೆ ಸಣ್ಣ ಗಾಯವು ಇಲ್ಲ!' ಎಂದು ಟ್ವೀಟಿಸಿದ್ದರು.

ಬಳಿಕ ಈ ಟ್ವೀಟ್ ಡಿಲೀಟ್ ಮಾಡಿದ್ದರು. ಈ ಕುರಿತು ಸ್ಪಷ್ಟನೆ ನೀಡಿ, 'ಮಗನ ಕಾರ್ ಅಪಘಾತದ ಚಿತ್ರ ನೋಡಿದರೆ ನನಗೆ ಹೃದಯದ ಬಡಿತ ಹೆಚ್ಚಾಗುತ್ತಿದೆ. ಕೆಟ್ಟ ಭಯ ಆವರಿಸುತ್ತದೆ. ಬೆಳಿಗ್ಗೆಯಿಂದ ಏನು ತಿನ್ನಲಾಗದೆ ಕೆಟ್ಟ ಕಲ್ಪನೆಗಳು ನನ್ನ ಕಾಡುತ್ತಿದೆ, ಮನೆಯವರು ಅದ ನೋಡದಂತೆ ವಿನಂತಿ ಮಾಡಿದರು! ಹಾಗಾಗಿ ಹಾಕಿದ ವಿಷಯ ಡಿಲೀಟ್ ಮಾಡಿದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT