ಸಿನಿಮಾ ನೋಡಲು ಮುರಳಿ ಆ್ಯಪ್

ಶನಿವಾರ, ಏಪ್ರಿಲ್ 20, 2019
28 °C

ಸಿನಿಮಾ ನೋಡಲು ಮುರಳಿ ಆ್ಯಪ್

Published:
Updated:

‘ಒಗ್ಗರಣೆ ಡಬ್ಬಿ’ ಖ್ಯಾತಿಯ ಮುರಳಿ ಅವರು ಕನ್ನಡ ಸಿನಿಮಾ ನಿರ್ಮಾಪಕರು ಹಾಗೂ ಸಿನಿಮಾ ವೀಕ್ಷಕರಿಗಾಗಿ ಒಂದು ಆ್ಯಪ್‌ ಸಿದ್ಧಪಡಿಸಿದ್ದಾರೆ. ಇದರ ಮೂಲಕ ಕನ್ನಡ ಸಿನಿಮಾಗಳನ್ನು ₹30 ಕೊಟ್ಟು ವೀಕ್ಷಿಸಬಹುದು!

ಈ ಬಗ್ಗೆ ಮಾಹಿತಿ ನೀಡಿದ್ದು ಮುರಳಿ. ಆದರೆ ಅವರ ಉದ್ದೇಶ ಆ್ಯಪ್‌ ಬಗ್ಗೆ ಮಾಹಿತಿ ನೀಡುವುದಾಗಿರಲಿಲ್ಲ! ‘ಕೂಗಿ ಕರೆದೆನಲ್ಲೋ ಮಾದೇವ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಮುರಳಿ ಅವರು, ಈ ಆ್ಯಪ್‌ ಸಿದ್ಧಪಡಿಸಿರುವ ವಿಚಾರ ಬಿಟ್ಟುಕೊಟ್ಟರು.

‘ನಾವು ಒಂದು ತಿಂಗಳಿಗೆ ನಾಲ್ಕು ಸಿನಿಮಾ ತೋರಿಸುತ್ತೇವೆ. ಮೊಬೈಲ್‌ನಲ್ಲಿ ಈ ಆ್ಯಪ್‌ ಹಾಕಿಕೊಂಡು, ತಿಂಗಳಿಗೆ ₹120 ಶುಲ್ಕ ಪಾವತಿಸಬೇಕು. ಇದೊಂದು ಸಣ್ಣ ಪ್ರಯತ್ನ. ಕಡಿಮೆ ಬಜೆಟ್‌ ಸಿನಿಮಾಗಳಿಗೆ ಕೆಲವೊಮ್ಮೆ ಸಿನಿಮಾ ಮಂದಿರಗಳು ಕೂಡ ಸಿಗುವುದಿಲ್ಲ. ಆದರೆ, ಈ ಆ್ಯಪ್‌ ಮೂಲಕ ವೀಕ್ಷಕರನ್ನು ನೇರವಾಗಿ ತಲುಪಬಹುದು’ ಎಂದರು ಮುರಳಿ.

ಪ್ರತಿ ಸಿನಿಮಾಕ್ಕೆ ಪಡೆಯುವ ₹30ರಲ್ಲಿ ಅರ್ಧದಷ್ಟು ಮೊತ್ತ ನಿರ್ಮಾಪಕರಿಗೆ, ಇನ್ನರ್ಧ ಮೊತ್ತ ತಮಗೆ ಬರಲಿದೆ ಎಂದು ಮುರಳಿ ಹೇಳಿದರು. ಈ ಆ್ಯಪ್‌ ಬಗ್ಗೆ ಅವರು ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಮಾಹಿತಿ ನೀಡಲಿದ್ದಾರಂತೆ.

‘ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಲು ತಿಂಗಳಿಗೆ ₹120 ಖರ್ಚು ಮಾಡಬಲ್ಲವರು ಸಾಕಷ್ಟು ಜನ ಇದ್ದಾರೆ’ ಎಂದೂ ಅವರು ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !