ಚಿತ್ರಮಂದಿರಗಳಲ್ಲಿ ‘KD’ ಪ್ರದರ್ಶನ ಮುಂದುವರಿದಿರುವ ಸಂದರ್ಭದಲ್ಲೇ ಐದು ಹೊಸ ಕನ್ನಡ ಸಿನಿಮಾಗಳು ಇಂದು(ಮೇ 8) ತೆರೆಕಂಡಿವೆ.

ಜಗದೀಶ್ ಎಂ. ಮೊದಲ ಬಾರಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸಿನಿಮಾವಿದು. ಚಿತ್ರವನ್ನು ಅವರೇ ನಿರ್ಮಾಣ ಮಾಡಿದ್ದು, ಛಾಯಾಚಿತ್ರಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ. ಶೋಷಣೆಗೆ ಒಳಗಾದ ಹೆಣ್ಣುಮಗಳೊಬ್ಬಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ‘ಚಿತ್ರದಲ್ಲಿ ಶೋಷಣೆಯನ್ನು ವಿಜೃಂಭಿಸಿಲ್ಲ. ಬದಲಾಗಿ ಸಮಸ್ಯೆಗೆ ಪರಿಹಾರವನ್ನು ಹೇಳಿದ್ದೇವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಲಿದೆ’ ಎಂದಿದೆ ಚಿತ್ರತಂಡ. ಪ್ರಸನ್ನ ಕುಮಾರ್ ಸಂಗೀತ ನಿರ್ದೇಶನ, ಶಶಾಂಕ್ ಮುರಳಿಧರನ್ ಸಂಕಲನ ಚಿತ್ರಕ್ಕಿದೆ. ಆಂಚಲ್ ಗೌಡ, ಪ್ರಶಾಂತ್ ಸೊಪ್ಪಿಮಠ, ಭಾವನಾ ರೆಡ್ಡಿ, ಮನೋಜ್ ಕುಮಾರ್, ಧನುಷ್, ಪ್ರದೀಪ್, ದೀಪಕ್, ಮಧು ಮಂದಗೆರೆ ತಾರಾಬಳಗದಲ್ಲಿದ್ದಾರೆ.

ಪ್ರಸಾದ್ ಪುತ್ತೂರು ನಿರ್ದೇಶನದ ಚಿತ್ರ ಇದಾಗಿದೆ. ಸಿನಿಮಾವನ್ನು ಪುತ್ತೂರು ಬ್ರದರ್ಸ್ ಎಂಟರ್ಟೇನ್ಮೆಂಟ್ ನಿರ್ಮಾಣ ಮಾಡಿದೆ. ಇದು ಒಂದು ದಿನದಲ್ಲಿ ನಡೆಯುವ ಕಥಾಹಂದರ ಹೊಂದಿದ್ದು, ಒಂದೇ ಸ್ಥಳದಲ್ಲಿ ಚಿತ್ರೀಕರಣಗೊಂಡಿದೆ. ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಯುವಕನೊಬ್ಬ ಲಾಡ್ಜ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ಶಾಸಕರೊಬ್ಬರಿಗೆ ಸೇರಿದ ಹಣದ ಬ್ಯಾಗ್ ಕಳವಾಗುವುದರೊಂದಿಗೆ ಕಥೆ ತೆರೆದುಕೊಳ್ಳುತ್ತದೆ. ಚಿತ್ರದಲ್ಲಿ ರಂಜನ್ ಶೆಟ್ಟಿ, ರಾಧೇಶ್ ಶೆಣೈ ಉಡುಪಿ, ಪ್ರಕಾಶ್ ಶೆಣೈ ಮೈಸೂರು, ಪ್ರಸನ್ನ ಪುತ್ತೂರು, ಮಹಮ್ಮದ್ ಹನೀಫ್ ಹೂಟಗಳ್ಳಿ ಮುಂತಾದವರು ನಟಿಸಿದ್ದಾರೆ. ವಿಷ್ಣು ಪ್ರಸಾದ್ ಪಿ. ಛಾಯಾಚಿತ್ರಗ್ರಹಣ, ನಿಶಾನ್ ರೈ ಸಂಗೀತ, ಸಿಕೆ ಕುಮಾರ್ ಸಂಕಲನ ಚಿತ್ರಕ್ಕಿದೆ.

ಪರಮ್ ಗುಬ್ಬಿ ನಿರ್ದೇಶಿಸಿರುವ ಸಿನಿಮಾ ಇದಾಗಿದೆ. ಎರಡು ಕಾಲಘಟ್ಟಗಳ ಪ್ರೇಮಕಥೆಯನ್ನು ಚಿತ್ರವು ಹೊಂದಿದೆ. ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸುಮ ಬಂಡವಾಳ ಹೂಡಿದ್ದಾರೆ. ಕಬ್ಬಡಿ ನರೇಂದ್ರ ಬಾಬು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ಜಿ.ಲಿಖಿತ್, ಜಯವರ್ಧನ್, ಸುಲಕ್ಷ ಖೈರ, ಭೂಮಿಕ ಗೌಡ ಮುಖ್ಯಭೂಮಿಕೆಯಲ್ಲಿದ್ದಾರೆ. ಚಂದ್ರಶೇಖರ ರೆಡ್ಡಿ ಎ.ಎಂ, ಪ್ರಕಾಶ್ಮೂರ್ತಿ, ಕುಮಾರಿ ಸ್ವರ್ಣ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಅತಿಶಯ ಜೈನ್ ಸಂಗೀತ, ಶಾಂತಾರಾವ್ ಇಪಿಲಿ ಛಾಯಾಚಿತ್ರಗ್ರಹಣ, ಧನುಷ್ ವೀರ್ ಸಂಕಲನವಿದೆ.

ಯಶವಂತ ಹಾಸನ್ ನಿರ್ದೇಶನದ ‘ಲೂಪ್’, ತಿರುಮಲೇಶ್ ವಿ.ನಿರ್ದೇಶನದ ‘ಆಪರೇಷನ್ ಡಿ’ ಸಿನಿಮಾವೂ ತೆರೆಕಂಡಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-888850860

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.