ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಪಯಣದಲ್ಲಿ ತಲೆಮಾರುಗಳ ಕಥೆ ಹೇಳುವ ಹೊಸಬರ ಸಿನಿಮಾ 'ಜಿಲ್ಕ' 

Last Updated 26 ಡಿಸೆಂಬರ್ 2019, 7:36 IST
ಅಕ್ಷರ ಗಾತ್ರ

ಇದು ಹೊಸಬರ ‘ಜಿಲ್ಕ’. ದಕ್ಷಿಣ ಕನ್ನಡ ಜಿಲ್ಲೆಯ ಉದಯೋನ್ಮುಖ ಪ್ರತಿಭೆಗಳೆಲ್ಲರೂ ಸೇರಿ ಮಾಡಿರುವ ಚಿತ್ರವಿದು. ಹೊಸಬರಿಂದಲೇ ಕೂಡಿರುವ ತಂಡದ ಎರಡು ವರ್ಷಗಳ ಪರಿಶ್ರಮದಿಂದ ಚಿತ್ರ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

‘ಜಿಲ್ಕ’ ಎಂದರೆಆಫ್ರಿಕಾದ ಸೋಮಾಲಿ ಭಾಷೆಯಲ್ಲಿ ‘ಪೀಳಿಗೆ’ ಎನ್ನುವ ಅರ್ಥವಿದೆಯಂತೆ. ಶೀರ್ಷಿಕೆ ಆಕರ್ಷಕವಾಗಿರಲೆಂದು ಈ ಹೆಸರು ಇಡಲಾಗಿದೆ.ಪಯಣದ ತಲೆಮಾರುಗಳು ಎಂದು ಇಂಗ್ಲಿಷ್‌ನಲ್ಲಿ ಅಡಿಬರಹ ಕೊಡಲಾಗಿದೆಎನ್ನುವ ಸಮಜಾಯಿಷಿಯೊಂದಿಗೆ ಚಿತ್ರದ ನಿರ್ದೇಶಕ ಮತ್ತು ನಾಯಕ ನಟಕವೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತಿಗಾರಂಭಿಸಿದರು.

ಬಡತನದಲ್ಲೇ ಬೆಳೆದು, ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಮುಂಬೈಗೆ ಹೋಗಿದ್ದ ಕವೀಶ್‌ ಶೆಟ್ಟಿ ಅಲ್ಲಿ ಫಿಲಂ ಕೋರ್ಸ್‌ ಓದಿ ಬಂದಿದ್ದಾರೆ. ‘ಮುಂಗಾರುಮಳೆ 2’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ದುಡಿದು, ಒಂದಿಷ್ಟು ಅನುಭವ ಗಳಿಸಿಕೊಂಡಿದ್ದಾರೆ. ಅದರ ಫಲವೇ ‘ಜಿಲ್ಕ’ದಲ್ಲಿ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಲು ಹೊರಟಿದ್ದಾರೆ. ಈ ಚಿತ್ರದಲ್ಲಿ ನಟನೆ ಜತೆಗೆ ಚಿತ್ರದ ನಿರ್ದೇಶನ, ನಿರ್ಮಾಣ,ಕಥೆ, ಚಿತ್ರಕಥೆ, ಸಾಹಿತ್ಯ ರಚನೆಯನ್ನು ಮಾಡಿದ್ದಾರೆ. ಅವರ ಈ ತುಡಿತ, ಕನಸು ನನಸು ಮಾಡಲುಹದಿಮೂರು ಮಂದಿ ಸ್ನೇಹಿತರು ಕ್ರೌಡ್‌ಫಂಡ್‌ ಮೂಲಕ ‘ಜಿಲ್ಕ’ಕ್ಕೆ ಕೈಜೋಡಿಸಿದ್ದಾರೆ.ಮುಂಬೈ, ಕುಂದಾಪುರ, ಕಾರವಾರ ಮತ್ತು ಕರಾವಳಿ ತೀರದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಪ್ರಾರಂಭದಲ್ಲಿ ಹಿಂದಿ, ಮರಾಠಿ ಭಾಷೆಗಳಲ್ಲೂಚಿತ್ರ ನಿರ್ಮಿಸಲು ಯೋಜಿಸಿದ್ದ ಚಿತ್ರತಂಡ, ಮೊದಲು ಕನ್ನಡದಲ್ಲಿ ಪ್ರದರ್ಶನ ಮಾಡಿ ನಂತರ ಬೇರೆ ಭಾಷೆಗಳಲ್ಲಿನಿರ್ಮಿಸಲು ನಿರ್ಧರಿಸಿದೆ.

‘ಯುವ ಪೀಳಿಗೆಗಳ ಮನಸ್ಸಿನ ಒಳ ಹೊರ ನೋಟದ ಪ್ರೇಮಕಥೆ ಮತ್ತು ಎರಡು ಕಾಲಘಟ್ಟದ ನಡುವಿನ ಅಂತರದಲ್ಲಿ ಹುಟ್ಟುವ ವಿನೂತನ ತಿರುವುಗಳ ವ್ಯತ್ಯಾಸಗಳು ಚಿತ್ರದ ಹೂರಣ.ಮಾನವೀಯ ಮೌಲ್ಯಗಳ ಅನಾವರಣ, ಭಾವನೆಗಳ ಅಭಿವ್ಯಕ್ತಿ ಎತ್ತಿ ಹಿಡಿಯುತ್ತದೆ ಚಿತ್ರದ ಕಥೆ. ಪ್ರೌಢಶಾಲೆ, ಕಾಲೇಜು ದಿನಗಳು, ಬದುಕಿನ ಜವಾಬ್ದಾರಿ ಹೊರುವ ಹುಡುಗ ಹೀಗೆ ನನ್ನ ಪಾತ್ರ ಮೂರು ಶೇಡ್‌ಗಳಲ್ಲಿದೆ’ ಎಂದರುಕವೀಶ್‌.

ನಾಯಕಿಯಾಗಿ ಪ್ರಿಯಾ ಹೆಗಡೆ ಕಾಣಿಸಿಕೊಂಡಿದ್ದು, ಇವರ ತಂದೆ ಪಾತ್ರದಲ್ಲಿ ರಂಗಕರ್ಮಿಕೃಷ್ಣಮೂರ್ತಿ ಕವತಾರ್ ಬಣ್ಣ ಹಚ್ಚಿದ್ದು, ಶಿಸ್ತಿನ ಮುಖ್ಯ ಪ್ರಾಧ್ಯಾಪಕನ ಪಾತ್ರ ನಿರ್ವಹಿಸಿದ್ದಾರೆ. ಲಕ್ಷ್ಯಶೆಟ್ಟಿ, ದಿನೇಶ್‍ ಶೆಟ್ಟಿ, ದೀಪಿಕಾ ದಿನೇಶ್, ಪ್ರತೀಕ್‍ ಶೆಟ್ಟಿ, ಪೂರ್ಣ, ಅರುಣ್‍ ಸೇವಿ ತಾರಾಗಣವಿದೆ.ನಾಲ್ಕು ಗೀತೆಗಳಿಗೆ ಪ್ರಾಂಶುಜಾಹ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ವಿಶ್ವಜಿತ್‍ ರಾವ್- ಅಜಯ್‍ಪಾಲ್ ಸಿಂಗ್, ಸಂಕಲನ ಗಿರಿಮಹೇಶ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT