‘ಪ್ರೇಮ್ ಉತ್ತಮ ಸೈಕಿಯಾಟ್ರಿಸ್ಟ್’
‘ಪ್ರೇಮ್ ಉತ್ತಮ ಸೈಕಿಯಾಟ್ರಿಸ್ಟ್. ಎಲ್ಲರ ಸೈಕಾಲಜಿಯನ್ನೂ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಾರೆ. ಒಂದು ಕಡೆ ಸಂಜಯ್ ದತ್, ಇನ್ನೊಂದು ಕಡೆ ರವಿಚಂದ್ರನ್, ಮತ್ತೊಂದು ಕಡೆ ರಮೇಶ್ ಅರವಿಂದ್... ಹೀಗೆ ಆರೆಂಟು ದೊಡ್ಡ ಕಲಾವಿದರನ್ನು ಒಂದೆಡೆ ಸೇರಿಸಿ, ಯಾರಿಗೂ ಬೇಸರ, ವೈಮನಸ್ಸು ಆಗದಂತೆ ನಿಭಾಯಿಸುವುದು ಇವತ್ತಿನ ಕಾಲದಲ್ಲಿ ಬಹಳ ಕಷ್ಟ. ಆ ವಿಷಯದಲ್ಲಿ ಪ್ರೇಮ್ ಜಾಣರು. ಎರಡು–ಮೂರು ವರ್ಷ ಎಲ್ಲ ಕಲಾವಿದರನ್ನು ಅವರು ನಿಭಾಯಿಸಿದ್ದಾರೆ’ ಎಂದು ಪ್ರೇಮ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.