ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಕನಾಯಕ’ನ ಚಿತ್ರಯಾತ್ರೆ

Last Updated 23 ಫೆಬ್ರುವರಿ 2019, 10:22 IST
ಅಕ್ಷರ ಗಾತ್ರ

ಮೂಕ ಕಲಾವಿದನೊಬ್ಬನ ಕುಂಚಕಥನವನ್ನು ಬರಗೂರು ರಾಮಚಂದ್ರಪ್ಪ ‘ಮೂಕನಾಯಕ’ ಎಂಬ ಹೆಸರಿನಲ್ಲಿ ಸಿನಿಮಾ ರೂಪದಲ್ಲಿ ತಂದಿದ್ದಾರೆ. ಪ್ರಶಂಸೆಗೂ ಪ್ರತಿಭಟನೆಗೂ ಕುಂಚವೇ ಅಭಿವ್ಯಕ್ತಿ ಮಾಧ್ಯಮವಾಗಿರುವವನ ಜಗತ್ತು ಹೇಗಿರಬಹುದು? ಅವನ ಕಣ್ಣಿನ ಮೂಲಕ ಜಗದ ಕ್ರೌರ್ಯಗಳನ್ನು ಅನಾವರಣಗೊಳಿಸುವ ಪ್ರಯತ್ನವಿದು. ಮೆಕ್ಸಿಕೊ, ಮುಂಬೈ, ನೋಯಿಡಾ, ಕೇರಳ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ‘ಮೂಕನಾಯಕ’ ಚಿತ್ರವನ್ನು ಪರ್ಯಾಯ ಮಾರ್ಗದ ಮೂಲಕ ಜನರಿಗೆ ತಲುಪಿಸುವ ವಿಭಿನ್ನ ಯತ್ನಕ್ಕೆ ಬರಗೂರು ಮುಂದಾಗಿದ್ದಾರೆ.

‘ಸಮುದಾಯದತ್ತ ಸಿನಿಮಾ’ ಎಂಬ ಪರಿಕಲ್ಪನೆಯೊಂದಿಗೆ ವಿವಿಧ ಸ್ಥಳಗಳಿಗೆ ತೆರಳಿ ಜನರಿಗೆ ಚಿತ್ರವನ್ನು ಪ್ರದರ್ಶಿಸುವ ಯೋಜನೆಯಿದು. ಚಿತ್ರ ಪ್ರದರ್ಶನ ನಡೆಸುವ ಸ್ಥಳದಲ್ಲಿ ಮೊದಲೇ ಪ್ರೋತ್ಸಹಧನ ಅಥವಾ ಪ್ರವೇಶ ಧನವನ್ನು ಸಂಗ್ರಹಿಸಿ ಅವುಗಳ ಆಧಾರದ ಮೇಲೆ ಚಿತ್ರ ಪ್ರದರ್ಶನ ಏರ್ಪಾಡು ಮಾಡುವುದು ಈ ಯೋಜನೆಯ ಉದ್ದೇಶ. ಫೆ. 17ರಿಂದ ಬೆಂಗಳೂರಿನಿಂದ ಆರಂಭವಾಗಿರುವ ಈ ಸಿನಿಮಾ ಯಾತ್ರೆಯಲ್ಲಿ ‘ಮೂಕನಾಯಕ’ ನೂರು ಪ್ರದರ್ಶನಗಳನ್ನು ಕಾಣಲಿದೆ.

ಕುಮಾರ್‌ ಗೋವಿಂದ, ಸುಂದರರಾಜ್‌, ರೇಖಾ, ಶೀತಲ್‌ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಬಾಲರಾಜ್‌ ಎಂ. ಸಂಜೀವ್‌ ಹಣ ಹೂಡಿದ್ದಾರೆ. ಕತೆ ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿಯನ್ನೂ ಬರಗೂರು ರಾಮಚಂದ್ರಪ್ಪ ನಿರ್ವಹಿಸಿದ್ದಾರೆ. ನಾಗರಾಜ ಅದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್‌ ಸಂಗೀತ ಚಿತ್ರಕ್ಕಿದೆ.

ಗಾಂಧಿ ನಗರದ ‘ವಿತರಣಾ ಮಾಫಿಯಾ’ದ ಆಚೆ ಹೊಸ ದಾರಿಯನ್ನು ತೆರೆಯುವ ಬರಗೂರರ ಈ ಪ್ರಯತ್ನ ಯಶಸ್ವಿಯಾದರೆ ಹಲವು ಪರ್ಯಾಯ ಸಿನಿಮಾಗಳಿಗೆ ಜನಸ್ಪರ್ಶ ಸಿಗುವುದರಲ್ಲಿ ಅನುಮಾನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT