ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಹೊಂದಿರುವ ಚಿತ್ರವಿದು. ಜಾವೇದ್ ತಿಪ್ಪನಹಟ್ಟಿ ಸಿನಿಮಾಕ್ಕೆ ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ.

‘ಲಾಕ್ಡೌನ್’ ಪದ ಕೇಳಿದರೆ ಹಲವರಿಗೆ ಈಗಲೂ ಭಯವಾಗುತ್ತದೆ.ಈ ಅವಧಿ ಕೆಲವರಿಗೆ ಖುಷಿ ತಂದುಕೊಟ್ಟಿದೆ. ಹೀಗಾಗಿಯೇ ಚಿತ್ರಕ್ಕೆ ವಿಷಾದ ಆ್ಯಂಡ್ ರಂಜನೆ ಎಂಬ ಅಡಿಬರಹವಿದೆ. ಬಳ್ಳಾರಿಯಲ್ಲಿ ನಡೆದ ಒಂದಷ್ಟು ಕಹಿ ಘಟನೆಗಳನ್ನು ಇಟ್ಟುಕೊಂಡು ಚಿತ್ರ ಸಿದ್ಧಗೊಂಡಿದೆ. ಜತೆಗೆ ಯುವ ಪ್ರೇಮಿಗಳು ಹಾಗೂ ಮಧ್ಯ ವಯಸ್ಕ ದಂಪತಿಯ ಹಾಸ್ಯ ಸನ್ನಿವೇಶಗಳಿವೆ’ ಎಂದಿದ್ದಾರೆ ನಿರ್ದೇಶಕ.

ಅಭಿನವ ಪ್ರೊಡಕ್ಷನ್ ಅಡಿಯಲ್ಲಿ ಮಂಜು ಮುದ್ಗಲ್ ಚಿತ್ರ ನಿರ್ಮಾಣ ಮಾಡುವ ಜತೆಗೆ, ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿಜಯ್ ವಿಘ್ನೇಶ್ ನಾಯಕ. ದಾವಣಗೆರೆ ಮೂಲದ ವಾಣಿಶ್ರೀ ಶ್ರೀನಿವಾಸ್ ನಾಯಕಿ. ಇವರೊಂದಿಗೆ ಶ್ರಾವಣಿ, ಅಶ್ವಿನಿ ಮುದ್ಗಲ್, ಮಮತಾ, ಗೋವಿಂದರಾಜು-ವೈಲಾ ಮುಂತಾದವರು ನಟಿಸಿದ್ದಾರೆ. ನಿರ್ದೇಶಕರೇ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದಾರೆ. ಶರಣಪ್ಪ ಸುಗ್ಗನಹಳ್ಳಿ ಛಾಯಾಚಿತ್ರಗ್ರಹಣ, ಶಿವರಾಜ್ ಮೆಹೂ ಸಂಕಲನ ಚಿತ್ರಕ್ಕಿದೆ.

ಈಗಾಗಲೇ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಗಮನ ಸೆಳೆದಿರುವ ಕಲಾತ್ಮಕ ಚಿತ್ರವಿದು. ಕರೆನ್ ಕ್ರಿಸ್ಟಿ ಸುವರ್ಣ ನಿರ್ದೇಶನದ ಈ ಚಿತ್ರ ಕಾನ್ ಚಿತ್ರೋತ್ಸವದ ಮಾರಾಟ ವಿಭಾಗದಲ್ಲಿಯೂ ಪ್ರದರ್ಶನಗೊಂಡಿದೆ.

ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮೊದಲ ಬಾರಿಗೆ ಮಧ್ಯಮ ವರ್ಗದ ಮಹಿಳೆಯ ಪಾತ್ರ ಮಾಡಿದ್ದಾರೆ. 22ರ ಹರೆಯದ ಕರೆನ್ ಕ್ರಿಸ್ಟಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಿದು. ಮುಖ್ಯ ಪಾತ್ರದಲ್ಲಿ ಪ್ರವೀಣ್ ಸಿಂಗ್ ಸಿಸೋಡಿಯ, ಝರಿನ ವಾಹಬ್, ಅಮಿತ್ ಬೇಲ್, ಅಜಿತ್ ಶಿದಾಯೆ, ಸಚಿನ್ ಪಾಟೇಕರ್ ನಟಿಸಿದ್ದಾರೆ.

‘ರೋಗಿಗಿಂತ ಅವನ ಪಾಲನೆ ಮಾಡುವವರು ತೆಗೆದುಕೊಳ್ಳುವ ನಿರ್ಧಾರ ತುಂಬಾ ಮುಖ್ಯ’ ಎಂಬುದು ಚಿತ್ರದ ಅಡಿಬರಹವಾಗಿದೆ. ರಾಜಶೇಖರ್ ಕಥೆ, ವಿನಯ್ ಚಂದ್ರ ಸಂಗೀತವಿದ್ದು, ಅನಿಲ್ ಕುಮಾರ್ ಛಾಯಾಚಿತ್ರಗ್ರಹಣವಿದೆ.

ಪ್ರಮೋದ್ ಶೆಟ್ಟಿ ಹಾಗೂ ಪ್ರದೀಪ್ ಪೂಜಾರಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕರಾಗಿ ಕಾರ್ತಿಕ್, ಯಶ್ ಶೆಟ್ಟಿ ನಟಿಸಿದ್ದಾರೆ. ತೇಜಸ್ವಿ ವಿಘ್ನೇಶ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಮೀಕ್ಷಾ ಪಿಚ್ಚರ್ ಸಂಸ್ಥೆ ನಿರ್ಮಾಣ ಮಾಡಿದೆ.

‘ಅಸುರರ ಕೈಯಲ್ಲಿ ಪಾರಿಜಾತ ಎಂಬ ಜೀವನದ ಹೂವು ಹೇಗೆ ಸಿಲುಕಿಕೊಳ್ಳುತ್ತದೆ ಎನ್ನುವುದೇ ಚಿತ್ರದ ಕಥೆ. ಮನುಷ್ಯ ಜೀವನದಲ್ಲಿ ತನಗೆ ಬೇಕಾದ ವಸ್ತು ಸಿಗದೇ ಇದ್ದಾಗ ಯಾವ ರೀತಿ ಮನುಷ್ಯತ್ವವನ್ನು ಮರೆತು ರಾಕ್ಷಸ ಗುಣವನ್ನು ತಾಳುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ’ ಎಂದಿದ್ದಾರೆ ನಿರ್ದೇಶಕ.

ರಜನಿ ನಾಯಕಿಯಾಗಿ ನಟಿಸಿದ್ದಾರೆ. ಕೆ.ಎಸ್. ಶ್ರೀಧರ್, ಮಂಜುನಾಥ್ ಹೆಗಡೆ, ಮಮತಾ, ಡಾಕ್ಟರ್ ಲೀಲಾ ಮೋಹನ್, ವಿಮರ್ಶ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.

ರಾಕೇಶ್ ಸಿ ತಿಲಕ್ ಛಾಯಾಚಿತ್ರಗ್ರಹಣ, ಕ್ರಿಸ್ಟೋಫರ್ ಜಾಯ್ಸನ್ ಸಂಗೀತವಿದೆ.

ಇವುಗಳೊಂದಿಗೆ ‘ಉಗ್ರಮರ್ದಿನಿ’, ‘ಕುಚುಕು’ ಸಿನಿಮಾಗಳೂ ತೆರೆ ಕಾಣಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-679158626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.