‘ರೋಸ್ಸಿ’, ‘ದೊನ್ನೆ ಬಿರಿಯಾನಿ’, ‘ರ್ಯಾಂಡಿ’, ‘ಕೇಬಲ್’, ‘ಮ್ಯಾಗಿ’, ‘7ಅಪ್’, ‘ಎಸ್ಎಂಎಸ್’, ‘ಮನು’, ‘ಬ್ಯಾಂಡ್ ಏಡ್’, ‘ಜಿಲೇಬಿ’, ‘ಅನಾರ್ಕಲಿ’, ‘ಗುಲ್ಕನ್’, ‘ಬ್ಲುಟೂತ್’....

ಇದ್ಯಾವುದೂ ಅಂಗಡಿಯಲ್ಲಿ, ಬೇಕರಿಯಲ್ಲಿ ಸಿಗೋ ವಸ್ತುಗಳಲ್ಲ. ಇವು ಪೂರ್ಣಚಂದ್ರ ಮೈಸೂರು ನಿರ್ದೇಶನದ ‘ಮದರ್ ಪ್ರಾಮಿಸ್’ ಸಿನಿಮಾದೊಳಗಿನ ಪಾತ್ರಗಳ ಹೆಸರು. ‘ಆರ್ಕೆಸ್ಟ್ರಾ ಮೈಸೂರು’, ‘ಬಡವ ರಾಸ್ಕಲ್’, ‘ಮರ್ಯಾದೆ ಪ್ರಶ್ನೆ’, ‘ಎಕ್ಕ’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಪೂರ್ಣಚಂದ್ರ ಮೈಸೂರು ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾದ ‘ಗ್ಯಾಂಗ್ಸ್ಟರ್’ಗಳನ್ನು ಪರಿಚಯಿಸಿದ್ದಾರೆ. ‘ಗ್ಯಾಂಗ್ಸ್ಟರ್ ಕಾಮಿಡಿ’ ಜಾನರ್ನಲ್ಲಿರುವ ಈ ಸಿನಿಮಾದ ಪಾತ್ರಗಳನ್ನು ಚಿತ್ರತಂಡ ಭಿನ್ನವಾಗಿ ಪರಿಚಯಿಸಿದೆ. ಧನಂಜಯ, ನಾಗಭೂಷಣ್, ಶ್ರೀವತ್ಸ, ಗುರುದತ್ ಸೇರಿದಂತೆ ಪ್ರತಿ ಪಾತ್ರಕ್ಕೂ ಹೊಸ ಲುಕ್ ನೀಡಿದ್ದಾರೆ ಪೂರ್ಣ.

‘ಸಿನಿಮಾದ ಮೊದಲ ಪೋಸ್ಟರ್ನಲ್ಲೇ ಕಥೆಯೊಳಗಿರುವ ಪಾತ್ರಗಳೆಲ್ಲವನ್ನೂ ತೋರಿಸಿದ್ದೆವು. ಶಾಲೆಯ ಕೊನೆಯ ದಿನ ಎಲ್ಲಾ ವಿದ್ಯಾರ್ಥಿಗಳು ಒಂದೆಡೆ ಸೇರಿದಂತೆ ಆ ಚಿತ್ರವಿತ್ತು. ಈ ಪಾತ್ರಗಳೆಲ್ಲವೂ ಮುಖ್ಯವಾದುದ್ದೇ. ಕಥೆಗೆ ಇವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಾರೆ. ಈ ಹಾಸ್ಯಭರಿತ ಸಿನಿಮಾವನ್ನು ಮಕ್ಕಳೂ ನೋಡಬಹುದು. ಮನರಂಜನಾತ್ಮಕವಾಗಿ ತೋರಿಸಿದರೆ ಜನರ ಮನಸ್ಸಿನಲ್ಲೂ ಸಿನಿಮಾ ಉಳಿಯಲಿದೆ. ಪ್ರತಿ ಪಾತ್ರದ ಹೆಸರುಗಳೂ ವಿಭಿನ್ನವಾಗಿವೆ. ಇದೊಂದು ಕಲ್ಪನಾ ಲೋಕವಾಗಿದ್ದು, ಪಾತ್ರಗಳು ಸೇರಿದಂತೆ ಹೆಸರೂ ಸಾಮಾನ್ಯವಾಗಿಲ್ಲ. ಪ್ರತಿ ಪಾತ್ರಗಳೂ ನೀಡಿದ ಭರವಸೆಗಳೆಷ್ಟು? ಅವುಗಳಲ್ಲಿ ಎಷ್ಟನ್ನು ಉಳಿಸಿಕೊಂಡಿವೆ ಎನ್ನುವುದನ್ನು ನಾವು ಹೇಳಿದ್ದೇವೆ. ಇದು ಪಾತ್ರದ ಗುಣಲಕ್ಷಣಗಳನ್ನೂ ಹೇಳುತ್ತದೆ’ ಎಂದಿದ್ದಾರೆ ಪೂರ್ಣಚಂದ್ರ.

‘ನಿರ್ಮಾಪಕರು ಶೀಘ್ರದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಾರೆ. ‘ಮದರ್ ಪ್ರಾಮಿಸ್’ ಈ ವರ್ಷದ ದ್ವಿತೀಯಾರ್ಧದಲ್ಲೇ ಬರುತ್ತೇವೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.