ಪ್ರಶ್ನೆ: ನಾಯಕನಾಗಿ ಮೊದಲ ಸಿನಿಮಾ ತೆರೆಗೆ ಬರುತ್ತಿರುವ ಸಂದರ್ಭದಲ್ಲಿ ನಿಮ್ಮ ಆತ್ಮವಿಶ್ವಾಸ ಹೇಗಿದೆ?

ಚಿತ್ರದಲ್ಲಿನ ಏಳು ಹಾಡುಗಳ ಪೈಕಿ ನಾಲ್ಕು ಹಾಡುಗಳನ್ನು ಬಿಡುಗಡೆಗೊಳಿಸಿದ್ದೆವು. ಅವು ಸೂಪರ್ ಹಿಟ್ ಆಗಿವೆ. ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿವೆ. ಟ್ರೈಲರ್ಗೆ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರ ಮಧ್ಯೆಯೂ ಚಿತ್ರದ ಬಗ್ಗೆ ಒಳ್ಳೆಯ ಚರ್ಚೆ ನಡೆಯುತ್ತಿದೆ. ಇದನ್ನೆಲ್ಲ ಗಮನಿಸಿದಾಗ, ಸಿನಿಮಾ ಖಂಡಿತ ಪ್ರೇಕ್ಷಕರಿಗೆ ಹಿಡಿಸಲಿದೆ ಎಂಬ ಭರವಸೆ ಮೂಡಿದೆ.

ಪ್ರಶ್ನೆ: ಸಿನಿಮಾದಿಂದ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು?

ಇದು ಗ್ರಾಮೀಣ ಸೊಗಡಿನ, ನೂರಕ್ಕೆ ನೂರು ಮನರಂಜನೆ ನೀಡುವ ಸಿನಿಮಾ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಎರಡು ಗಂಟೆ ಭರಪೂರ ರಂಜನೆ ಸಿಗಲಿದೆ. ನಾವು ಬದುಕಿನಲ್ಲಿ ನೋಡಿದ, ಕೇಳಿದ ಘಟನೆಗಳನ್ನೇ ಸೇರಿಸಿ ಹೆಣೆದಿರುವ, ನೈಜತೆಗೆ ಹತ್ತಿರವಾದ ಕಥೆ ಇದು. ಹಾಸ್ಯ, ಪ್ರೇಮ, ಭಾವುಕತೆ–ಎಲ್ಲದರ ಹೂರಣ ಚಿತ್ರದಲ್ಲಿದೆ.

ಮೊಬೈಲ್ ಪಕ್ಕಕ್ಕಿಟ್ಟು ಮನಸಾರೆ ನೋಡಬಹುದಾದ ಸಿನಿಮಾ ಎನ್ನುವ ವಿಶ್ವಾಸ ನನಗಿದೆ. ಯಾರೇ ನೋಡಿದರೂ ತಮ್ಮ ಬದುಕಿನ ಯಾವುದೋ ಒಂದು ಕ್ಷಣಕ್ಕೆ ಕನೆಕ್ಟ್ ಆಗುವಂತಹ ಅಂಶಗಳು ಇಲ್ಲಿವೆ. ಕೆಲವು ದೃಶ್ಯಗಳು ಪ್ರೇಕ್ಷಕರನ್ನು ತಮ್ಮದೇ ನೆನಪುಗಳ ಲೋಕಕ್ಕೆ ಕರೆದೊಯ್ಯುತ್ತವೆ.

ಪ್ರಶ್ನೆ: ಗಾಯಕನಿಂದ ನಾಯಕನಾಗುವ ಪಯಣಕ್ಕೆ ಸಿದ್ಧತೆ ಹೇಗಿತ್ತು?

ನಾನು ಮೂಲತಃ ರಂಗಭೂಮಿಯಿಂದ ಬಂದವನು. ಮೈಸೂರಿನ ನಿರಂತರ ರಂಗತಂಡದಲ್ಲಿ ನಟನೆಯ ಪಾಠ ಕಲಿಯುತ್ತಿದ್ದಾಗಲೇ, ನನ್ನೊಳಗೆ ಒಬ್ಬ ಗಾಯಕನೂ ಇದ್ದಾನೆ ಎಂಬುದು ಗೊತ್ತಾಯಿತು. ಆರ್ಕೆಸ್ಟ್ರಾಗಳಲ್ಲಿ ಹಾಡುವುದರಿಂದ ಆರಂಭವಾದ ಪಯಣ, ಗಾಯಕನಾಗಿ ಮತ್ತು ಸಂಗೀತ ನಿರ್ದೇಶಕನಾಗಿ ಬೆಳೆಯುವ ತನಕ ಬರಲು ಒಂದು ದಶಕವೇ ಹಿಡಿದಿದೆ.

ಆದರೆ ಅದರಾಚೆಗೂ ನನ್ನೊಳಗೆ ಒಬ್ಬ ನಟ ಸದಾ ಜೀವಂತವಾಗಿದ್ದ. ಈಗ ಆ ನಟನಿಗೆ ವೇದಿಕೆ ಸಿಕ್ಕಿದೆ. ಅದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೇನೆ. ಪರಿಶ್ರಮವೂ ಹಾಕಿದ್ದೇನೆ.

ನಾವು ಏನೇ ಮಾಡಿದರೂ ಅದು ಜನರಿಗೆ ಹಿಡಿಸಬೇಕು. ನಾನು ಹೀರೊಯಿಸಂ ಮಾಡಲು ಹೋಗಿದ್ದರೆ ಅದು ಯಶ ಕಾಣುವುದಿಲ್ಲ ಎಂಬ ಅರಿವು ನನಗಿತ್ತು. ಹೀಗಾಗಿ ನನಗೆ ತಕ್ಕಂತಹ ಕಥೆಯನ್ನು ಹುಡುಕಿಕೊಳ್ಳಲು, ಅದಕ್ಕೆ ಸರಿಯಾದ ತಂಡವನ್ನು ಕಟ್ಟಿಕೊಳ್ಳಲು ಎರಡು–ಮೂರು ವರ್ಷಗಳ ಕಾಲ ಹಿಡಿಯಿತು.

ಪ್ರಶ್ನೆ: ನಾಯಕನಾಗಿ ಮುಂದಿನ ಯೋಜನೆಗಳು?

ಸಾಕಷ್ಟು ಯೋಜನೆಗಳಿವೆ. ಆದರೆ ಎಲ್ಲವೂ ಈ ಚಿತ್ರದ ಯಶಸ್ಸಿನ ಮೇಲೆ ನಿರ್ಧಾರವಾಗಲಿದೆ. ಪ್ರೇಕ್ಷಕರು ಒಂದು ಸಿನಿಮಾವನ್ನು ಕೈಹಿಡಿದು ಎತ್ತಿಕೊಂಡರೆ, ಅದು ಕಲಾವಿದನಿಗೆ ಹತ್ತು ಸಿನಿಮಾಗಳ ಶಕ್ತಿ ಕೊಡುತ್ತದೆ. ಜನ ಖಂಡಿತ ಈ ಸಿನಿಮಾವನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ.

ಈಚಿನ ದಿನಗಳಲ್ಲಿ ಜನರು ಚಿತ್ರಮಂದಿರಕ್ಕೆ ಬರುವ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಅದಕ್ಕಾಗಿಯೇ ಮೊದಲು ಹಾಡುಗಳನ್ನು ಬಿಡುಗಡೆ ಮಾಡಿ, ಜನರ ನಡುವೆ ಚಿತ್ರದ ಬಗ್ಗೆ ಕುತೂಹಲ ಮೂಡಿಸಿ, ನಂತರ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ.

ಪ್ರಶ್ನೆ: ಲೂಸಿಯಾ ಚಿತ್ರದ ನಿಮ್ಮ ಮೊದಲ ಹಾಡೇ ದೊಡ್ಡ ಯಶಸ್ಸು ಕಂಡಿತ್ತು. ಈಗ ನಾಯಕನಾಗಿಯೂ ಅದೇ ರೀತಿಯ ಯಶಸ್ಸಿನ ನಿರೀಕ್ಷೆಯಿದೆಯೇ?

ಖಂಡಿತ ಇದೆ. ಮೊದಲ ಸಿನಿಮಾದ ಹಾಡಿನಿಂದ ನನಗೆ ಯಾವ ರೀತಿಯ ಯಶಸ್ಸು ಸಿಕ್ಕಿತೋ, ಅದೇ ರೀತಿಯ ಫಲಿತಾಂಶ ಈ ಸಿನಿಮಾದಿಂದಲೂ ಸಿಗಬಹುದು ಎಂಬ ನಿರೀಕ್ಷೆ ಇದೆ. ಈ ಚಿತ್ರದ ಹಾಡುಗಳಿಗೆ ಸಿಕ್ಕಿರುವ ಪ್ರತಿಕ್ರಿಯೆಯೇ ಅದನ್ನು ಹೇಳುತ್ತಿದೆ. ಒಟ್ಟಾರೆ ಸಿನಿಮಾದ ಸುತ್ತ ಪಾಸಿಟಿವ್ ವೈಬ್ ನಿರ್ಮಾಣವಾಗಿದೆ.

ನಾನು ಹಾಡುಗಾರನಾಗಿಯೇ ಮುಂದುವರಿಯಬಹುದಿತ್ತು. ಆದರೆ ಅದರಾಚೆಗೆ ಹೋಗಿ ಬೆವರು ಹರಿಸಿದಾಗ ಮಾತ್ರ ಹೊಸ ಯಶಸ್ಸು ಸಿಗುತ್ತದೆ. ನಾಯಕನಾಗಲು ನಾನು ಹತ್ತು ವರ್ಷಗಳ ಪರಿಶ್ರಮ ಪಟ್ಟಿದ್ದೇನೆ. ಮುಂದೆ ನಟನೆ ಮತ್ತು ಸಂಗೀತ ನಿರ್ದೇಶನ ಎರಡನ್ನೂ ಸಮತೋಲನದಿಂದ ಮುಂದುವರಿಸಿಕೊಂಡು ಹೋಗುವ ಆಸೆಯಿದೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-2117505051

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.