‘ಬಿಗ್ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ನಟಿಸಿರುವ ಕಾದಂಬರಿ ಆಧಾರಿತ ಸಿನಿಮಾವಿದು. ಭೂಮಿ ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಕಿ ಸೋಮ್ಲಿ ನಿರ್ದೇಶನವಿದೆ. ಮಾಲಾಶ್ರೀ ಪೊಲೀಸ್ ಅಧಿಕಾರಿ ಪಾತ್ರದಲ್ಲಿದ್ದಾರೆ. ‘ಸಾಮಾಜಿಕ ಸಂದೇಶ ಹೊಂದಿರುವ ಕ್ರೈಂ ಜಾನರ್ ಚಿತ್ರ. ಮಹಿಳೆಯ ಆತ್ಮಗೌರವ ಮತ್ತು ಹೋರಾಟದ ಕಥೆಯ ಜೊತೆಗೆ ಇಂದಿನ ಸಮಾಜದಲ್ಲಿ ಯುವತಿಯರಿಗೆ ಆಗುತ್ತಿರುವ ಮೋಸ ಮತ್ತು ಅಪಾಯಗಳನ್ನು ತೋರಿಸಲಾಗಿದೆ’ ಎಂದಿದೆ ಚಿತ್ರತಂಡ.

ಶ್ರೀ ಮುತ್ತು ಟಾಕೀಸ್ ಬ್ಯಾನರ್ನಲ್ಲಿ ಕೋಟ್ರೆಶ್ ಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ಶೋಭಿತ, ಪ್ರತಿಮಾ ಠಾಕೂರ್, ಮೋಹನ್ ಕುಮಾರ್, ವರ್ಧನ್, ಯಶ್ ಶೆಟ್ಟಿ, ಸಿಂಧು ಲೋಕನಾಥ್, ಹರೀಶ್ ಅರಸು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿಪಿನ್ ಛಾಯಾಚಿತ್ರಗ್ರಹಣ, ವೀರೇಶ್ ಕಂಬಳಿ ಸಂಗೀತ ನಿರ್ದೇಶನವಿದೆ.

ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸಿರುವ ಚಿತ್ರವಿದು. ಮರ್ಡರ್ ಮಿಸ್ಟರಿ, ಸಸ್ಪೆನ್ಸ್, ಥ್ರಿಲ್ಲರ್ ಜಾನರ್ನ ಚಿತ್ರಕ್ಕೆ ಕಾರ್ತಿಕ್ ಕೆ. ಮೂರ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಿಷಾ ಗೌಡ ಮತ್ತು ಅನುಷಾ ರೈ ನಾಯಕಿಯರು. ಶಶಿಕುಮಾರ್ ಚಿತ್ರದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಈ ಸಿನಿಮಾದಲ್ಲಿ ಪೋಷಕರಿಗೆ ಒಂದು ಸಂದೇಶವಿದೆ. ಜತೆಗೆ ಕಮರ್ಷಿಯಲ್ ಅಂಶಗಳಿವೆ. ಸಸ್ಪೆನ್ಸ್, ಥ್ರಿಲ್ಲರ್ನೊಂದಿಗೆ ಮನರಂಜನೆಯನ್ನು ಹೊಂದಿರುವ ಚಿತ್ರ’ ಎಂದಿದ್ದಾರೆ ನಿರ್ದೇಶಕ.

ವೆಂಕಟೇಶಮೂರ್ತಿ ಬಂಡವಾಳ ಹೂಡಿದ್ದಾರೆ. ಬಲ ರಾಜವಾಡಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಪಂಚಾಕ್ಷರಿ ಛಾಯಾಚಿತ್ರಗ್ರಹಣ, ಅಸಿಫ್ ಎ. ಖಾದರ್, ಅರವಿಂದ್ ಮುರಳಿ ಸಂಗೀತ, ಕುಮಾರ್ ಸಿ.ಕೆ ಸಂಕಲನವಿದೆ.

ಇದರೊಂದಿಗೆ ಹೊಸಬರ ‘ಊರಬ್ಬ’ ಚಿತ್ರ ಕೂಡ ಇಂದೇ ತೆರೆ ಕಾಣುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-51-579029750

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.