ಬಾಳಿನಲಿ ಬಣ್ಣದ ಬಣ್ಣದ ವೇಷ

7

ಬಾಳಿನಲಿ ಬಣ್ಣದ ಬಣ್ಣದ ವೇಷ

Published:
Updated:
Deccan Herald

ಪ್ರತಿದಿನ ಹೊಟ್ಟೆಪಾಡಿಗಾಗಿ ಜನರು ಬಣ್ಣ ಬಣ್ಣದ ವೇಷ ಹಾಕುತ್ತಾರೆ. ಆದರೆ, ಅವರ ಅಸಲಿ ಮುಖವಾಡವೇ ಬೇರೆ ಇರುತ್ತದೆ. ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ಮುಖವಾಡ ಧರಿಸಿಯೇ ಬದುಕುತ್ತಿರುತ್ತೇವೆ. 

ಇಷ್ಟು ಪೀಠಿಕೆ ಹಾಕಲು ಕಾರಣವೊಂದು ಇದೆ. ಅಸಲಿ ಮುಖವಾಡದ ಬಗ್ಗೆ ಹೇಳಲು ಹೊರಟಿರುವ ಚಿತ್ರ ‘ವೇಷಧಾರಿ’ ಸದ್ದಿಲ್ಲದೆ ಬೆಳಗಾವಿ, ಬೆಂಗಳೂರು, ಮಂಡ್ಯ, ಕೊಡಗು, ಮಂಗಳೂರು, ಗೋಕಾಕ್ ಫಾಲ್ಸ್ ಸುತ್ತಮುತ್ತ ಶೂಟಿಂಗ್ ಮುಗಿಸಿದೆ.

ಆಡಿಯೊ ಬಿಡುಗಡೆಗಾಗಿ ಪತ್ರಕರ್ತರ ಮುಂದೆ ಚಿತ್ರತಂಡ ಹಾಜರಾಗಿತ್ತು. ವಿಕ್ರಮಾದಿತ್ಯ ಬಿ. ಭುಷಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಾಲ್ಕು ಹಾಡುಗಳಿಗೆ ಸಾಹಿತ್ಯ ರಚಿಸಿರುವ ಅವರು, ಚಿತ್ರವನ್ನು ನಿರ್ದೇಶನ ಕೂಡ ಮಾಡಿದ್ದಾರೆ.

‘ಸಾಮಾಜಿಕ ವಿಡಂಬನೆವುಳ್ಳ ಕತೆಯಲ್ಲಿ ನಾಯಕ ತನ್ನ ಆಸೆ ತೀರಿಸಿಕೊಳ್ಳಲು ವಿವಿಧ ವೇಷಗಳನ್ನು ಹಾಕಿಕೊಳ್ಳುತ್ತಾನೆ. ಆದರೆ, ಆಸೆ ಈಡೇರುವುದಿಲ್ಲ. ಕೊನೆಗೆ ಜಿಗುಪ್ಸೆ ಹೊಂದಿ ಎಲ್ಲವನ್ನು ತ್ಯಜಿಸಲು ಮುಂದಾಗುತ್ತಾನೆ. ಆಗ ಬಯಕೆಗಳು ಬೆನ್ನಟ್ಟಿ ಬರುತ್ತವೆ. ಅಂತಿಮವಾಗಿ ಇದರಿಂದ ಬದುಕುತ್ತಾನೆಯೇ, ಇಲ್ಲವೇ ಎನ್ನುವುದೇ ಕಥಾಹಂದರ’ ಎಂದರು.

ಆರ್ಯನ್‌ ಚಿತ್ರದ ನಾಯಕ. ‘ಬದುಕಿನಲ್ಲಿ ಆಸೆಗಳನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸಬಹುದು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ನಾಯಕಿ ಶ್ರುತಿ ರಾಜೇಂದ್ರ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಶಾಸಕರ ಮಗಳಾಗಿ ದರ್ಪ ತೋರಿಸುವ ಪಾತ್ರಕ್ಕೆ ಮತ್ತೊಬ್ಬ ನಾಯಕಿ ಸೋನಂ ರೈ ಬಣ್ಣಹಚ್ಚಿದ್ದಾರೆ. ಸಂಗೀತ ಸಂಯೋಜನೆ ವಿ. ಮನೋಹರ್ ಅವರದ್ದು. ಹುಕ್ಕೇರಿಯ ಅನಿಲ್ ಎಚ್. ಅಂಬಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !