‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ನಾಯಕರಾಗಿ ನಟಿಸಿರುವ ಎರಡನೇ ಸಿನಿಮಾ ‘ವಿಚಾರಣೆ’ಯ ಡಬ್ಬಿಂಗ್ ಪೂರ್ಣಗೊಂಡಿದೆ.

ಯಶಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಸ್.ರಮೇಶ್ ಅರ್ಪಿಸಿರುವ, ಭಾಗ್ಯ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅಕುಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ‘ನಾಲ್ಕು ವರ್ಷಗಳ ಹಿಂದೆ ನಾನೇ ಕಂಡ ಘಟನೆಗೆ ಚಿತ್ರರೂಪ ನೀಡಿದ್ದೇನೆ. ಯುವಕನೊಬ್ಬ ಬದುಕು ಅರಸಿಕೊಂಡು ನಗರಕ್ಕೆ ಬರುತ್ತಾನೆ. ಅಲ್ಲಿ ಅವನಿಗೆ ಎದುರಾಗುವ ಸಮಸ್ಯೆಗಳು, ಅದರಿಂದ ಹೊರಬರಲು ಆತ ಯಾವ ರೀತಿ ಹೋರಾಟ ಮಾಡುತ್ತಾನೆ. ಅದರಿಂದ ಹೊರಬರುವಲ್ಲಿ ಸಫಲನಾಗುತ್ತಾನೆಯೇ ಎನ್ನುವುದನ್ನು ಕ್ರೈಂ ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ’ ಎಂದರು ಅಕುಲ್.

ಫರೀನ್ ಚಿತ್ರದ ನಾಯಕಿ. ಪೋಲೀಸ್ ಅಧಿಕಾರಿಯಾಗಿ ಮಹೇಶ್ ನಟಿಸಿದ್ದು, ಬಲ ರಾಜವಾಡಿ, ಮಹೇಶ್, ನಾಗೇಂದ್ರ ಅರಸು ಮುಂತಾದವರು ತಾರಾಬಳಗದಲ್ಲಿದ್ದಾರೆ. ಮಂಜು ಮಹದೇವ ಸಂಗೀತ, ಜಿ.ವಿ.ರಮೇಶ್ ಛಾಯಾಚಿತ್ರಗ್ರಹಣ, ಅನುರಂಜನ್ ಸಂಕಲನ, ವಿಕ್ರಂ ಸಾಹಸ ನಿರ್ದೇಶನ, ಪ್ರಮೋದ್ ಮರವಂತೆ, ಅನಿರುದ್ಧ್ ಶಾಸ್ತ್ರೀ, ಆನಂದ್ ಪ್ರಿಯ ಸಾಹಿತ್ಯ ಚಿತ್ರಕ್ಕಿದೆ. ಶೀಘ್ರದಲ್ಲೇ ಸಿನಿಮಾ ಸೆನ್ಸಾರ್ಗೆ ಒಳಪಡಲಿದೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-1094420517

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.