ಶನಿವಾರ, ಡಿಸೆಂಬರ್ 5, 2020
21 °C

ವಿವನ್‌ ಅದೃಷ್ಟ ಪರೀಕ್ಷೆಗೆ ‘ಅಶ್ವ’ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಡಲ್‌ವುಡ್‌ನಲ್ಲಿ ಒಂದು ವಾರದಿಂದ ಚಿತ್ರಗಳ ಮುಹೂರ್ತ ಸಮಾರಂಭಗಳು ಭರದಿಂದ ಸಾಗಿವೆ. ಹೊಸಬರು ಮತ್ತು ಹಳಬರ ಸಮ್ಮಿಶ್ರಣದ ಅದ್ಧೂರಿ  ತಾರಾಬಳಗವಿರುವ ‘ಅಶ್ವ’ ಚಿತ್ರ ಸೆಟ್ಟೇರುತ್ತಿದೆ.

ಇದು ಬಿಗ್ ಬಜೆಟ್ ಚಿತ್ರವಾಗಿದ್ದು, ರಾಕಿಂಗ್ ಸ್ಟಾರ್ ‘ಯಶ್’ ಅರ್ಪಿಸುತ್ತಿರುವ ಚಿತ್ರವಿದು. ಎ.ಆರ್.ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಒಂದು ದಶಕದ ಕಾಲ ಹಲವು ಸಿನಿಮಾಗಳಿಗೆ ಸಂಭಾಷಣೆಕಾರನಾಗಿ ದುಡಿದ ಸಾಯಿರಾಮ್‌ಗೆ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಟೊಪ್ಪಿ ಧರಿಸುತ್ತಿದ್ದಾರೆ.

ಸಿನಿಮಾವು ಯಾವ ರೀತಿ ಮೂಡಿಬರಲಿದೆ ಎಂದು ನಿರೂಪಿಸುವ 25 ನಿಮಿಷದ ‘ಪ್ರೀಮಿಯರ್ ಷೋ ರೀಲ್ಸ್’ ಕೂಡ ಬಿಡುಗಡೆಯಾಗಿದ್ದು, ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್, ಪ್ರೀತಿ, ತುಂಟಾಟ ಎಲ್ಲವೂ ಇದರಲ್ಲಿ ಬೆರೆತಿದೆ. ನವೆಂಬರ್ ಕೊನೆವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಸಕಲೇಶಪುರ, ಮಂಗಳೂರು, ಅಮೃತಸರ, ಪಣಜಿ, ಹೈದರಬಾದ್ ಮತ್ತು ಕಾಕಿನಾಡದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ.

ಯುವ ನಟ ವಿವನ್ ಕೆ.ಕೆ ನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರಕ್ಕೆ ನಾಯಕಿಯ ಶೋಧ ನಡೆಯತ್ತಿದೆ. ಸುಹಾಸಿನಿ, ಸಾಯಿಕುಮಾರ್, ಪ್ರಕಾಶ್‍ ರೈ, ಸಾಧುಕೋಕಿಲ, ರಂಗಾಯಣ ರಘು, ಭವಾನಿ ಪ್ರಕಾಶ್, ಚಿಕ್ಕಣ್ಣ, ಗಿರಿ, ನಂದಗೋಪಾಲ್, ನಾಗೇಂದ್ರ ಅರಸ್, ಬಲರಾಜವಾಡಿ, ಯಶ್‍ಶೆಟ್ಟಿ, ಪವನ್‍ಪಚ್ಚಿ, ರಿಚ್ಚಿ ತಾರಾಗಣದಲ್ಲಿದ್ದಾರೆ.

ಯೋಗರಾಜಭಟ್, ಜಯಂತ್‍ಕಾಯ್ಕಣಿ,  ನಾಗೇಂದ್ರಪ್ರಸಾದ್, ‘ಭರ್ಜರಿ’ ಚೇತನ್ ಸಾಹಿತ್ಯದ ಹಾಡುಗಳಿಗೆ ಬಿ.ಅಜನೀಶ್‍ಲೋಕನಾಥ್ ಸಂಗೀತವಿದೆ. ರವಿಕುಮಾರ್‌ ಛಾಯಾಗ್ರಹಣ, ಶ್ರೀಕಾಂತ್‍ಗೌಡ ಸಂಕಲನ, ರವಿವರ್ಮ, ಪೀಟರ್‌ ಹನ್ಸ್, ವಿಕ್ರಂ, ಕುಂಗ್‌ ಫು ಚಂದ್ರು ಅವರ ಸಾಹಸ, ಜಾನಿ, ಶೇಖರ್, ಧನಂಜಯ್ ಅವರ ನೃತ್ಯ ಸಂಯೋಜನೆ ಇರಲಿದೆ.

ಕೆ.ಕೆ.ಎಂಟರ್‌ಟೈನ್‍ಮೆಂಟ್ಸ್ ಮತ್ತು ಸೂಪರ್‌ನೋವಾ ಎಂಟರ್‌ಟೈನ್‍ಮೆಂಟ್ಸ್ ಅಡಿಯಲ್ಲಿ ಕೋಲಾರ ಕೇಶವ ಮತ್ತು ಹೇಮಲತಾ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು