ಭಾನುವಾರ, ಅಕ್ಟೋಬರ್ 24, 2021
29 °C
ಚಿತ್ರಮಂದಿರಗಳಲ್ಲಿ ಶೇ 100 ಆಸನ ಭರ್ತಿ ಘೋಷಣೆ ಪರಿಣಾಮ

ಚಿತ್ರಮಂದಿರಗಳಲ್ಲಿ ಶೇ 100 ಆಸನ ಭರ್ತಿ: ಸಾಲು ಬಿಡುಗಡೆಯಲ್ಲಿ ಕನ್ನಡ ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಿನ್ನ ಸನಿಹಕೆ’ ಸೂರಜ್‌ಗೌಡ ಮತ್ತು ಧನ್ಯಾ ರಾಮ್‌ಕುಮಾರ್‌

ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಆಸನ ಭರ್ತಿಗೆ ಸರ್ಕಾರ ಸಮ್ಮತಿ ನೀಡಿರುವ ಬೆನ್ನಲ್ಲೇ ಚಂದನವನದ ಹೊಸ ಚಿತ್ರಗಳ ಬಿಡುಗಡೆಯ ದಿನಾಂಕಗಳು ಸಾಲು ಸಾಲಾಗಿ ಘೋಷಣೆಯಾಗಿವೆ. 

‘ನಿನ್ನ ಸನಿಹಕೆ’ ಅ. 8ಕ್ಕೆ

ಪ್ರೇಮ– ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರವುಳ್ಳ ‘ನಿನ್ನ ಸನಿಹಕೆ’ ಚಿತ್ರ ಅಕ್ಟೋಬರ್ 8ಕ್ಕೆ ತೆರೆ ಕಾಣಲಿದೆ. ಅಕ್ಷಯ್‌ ರಾಜಶೇಖರ್‌ ಮತ್ತು ರಂಗನಾಥ್‌ ಕೂಡ್ಲಿ ಅವರು ವೈಟ್‌ ಆ‍್ಯಂಡ್‌ ಗ್ರೇ ಪಿಕ್ಚರ್ಸ್‌ ಬ್ಯಾನರ್‌ ಅಡಿ ಈ ಚಿತ್ರ ನಿರ್ಮಿಸಿದ್ದಾರೆ. ಸೂರಜ್‌ ಗೌಡ ಅವರು ಈ ಚಿತ್ರದ ನಾಯಕ, ನಿರ್ದೇಶಕ. ಧನ್ಯಾ ರಾಮ್‌ಕುಮಾರ್‌ ನಾಯಕಿಯಾಗಿದ್ದಾರೆ. ಧನ್ಯಾ ರಾಮ್‌ ಕುಮಾರ್‌ ಅವರ ಮೊದಲ ಚಿತ್ರವಿದು.

ದುನಿಯಾ ವಿಜಯ್‌ ನಿರ್ದೇಶಿಸಿ ನಟಿಸಿರುವ ‘ಸಲಗ’ ಚಿತ್ರ ಅ. 14ರಂದು ತೆರೆ ಕಾಣಲಿದೆ. ಕೋವಿಡ್‌ ಎರಡನೇ ಅಲೆಯ ಹಾವಳಿಯ ನಂತರ ಬಿಡುಗಡೆ ಆಗುತ್ತಿರುವ ದೊಡ್ಡ ಬಜೆಟ್‌ನ ಸಿನಿಮಾ ಇದು. 

ಅಕ್ಟೋಬರ್ 29ಕ್ಕೆ ‘ಭಜರಂಗಿ 2’

ಅಕ್ಟೋಬರ್ 29ಕ್ಕೆರಂದು ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಬಿಡುಗಡೆ ಆಗುತ್ತಿದೆ.  ಈ ಮೊದಲು ಎರಡು ಬಾರಿ ಸಿನಿಮಾ ಬಿಡುಗಡೆಗೆ ಯೋಜನೆ ಇತ್ತು. ಆದರೆ, ಕೋವಿಡ್ ಅಡ್ಡಿಪಡಿಸಿತು .

‘ಕೋಟಿಗೊಬ್ಬ 3’ ಯಾವಾಗ?

ಸುದೀಪ್ ನಟನೆಯ ‘ಕೋಟಿಗೊಬ್ಬ 3’ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರ ಕೂಡ ಅಕ್ಟೋಬರ್ 14ರಂದು ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ಇನ್ನಷ್ಟೇ ಖಚಿತವಾಗಬೇಕಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು