ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ. ಬೋಸ್‌ ರೆಡಿ

Last Updated 7 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಸಂದೀಪ್‌ ಮಹಾಂತೇಶ ನಿರ್ದೇಶನದ ‘ಡಿ.ಕೆ. ಬೋಸ್‌’ ಸಿನಿಮಾ ಸಿದ್ಧವಾಗಿದ್ದು, ಮುಂದಿನ ವಾರ (ಮಾ.15) ರಂದು ರಾಜ್ಯದಾದ್ಯಂತ ತೆರೆಕಾಣಲಿದೆ.

ಸಿನಿಮಾದ ಬಗ್ಗೆ ಮಾಹಿತಿ ನೀಡಲು ಚಿತ್ರ ತಂಡ ಈಚೆಗೆ ಮಾಧ್ಯಮದ ಮುಂದೆ ಹಾಜರಾಗಿತ್ತು. ಈ ಚಿತ್ರದಲ್ಲಿ ಭೋಜರಾಜ ವಾಮಂಜೂರು, ರಘು ಪಾಂಡೇಶ್ವರ, ತಿಮ್ಮಪ್ಪ ಕುಲಾಲ ಸೇರಿದಂತೆ ತುಳು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅನೇಕ ಕಲಾವಿದರು ನಟಿಸಿದ್ದಾರೆ. ಭೋಜರಾಜ ವಾಮಂಜೂರು ಈ ಚಿತ್ರದಲ್ಲಿ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ನಾಯಕ ಪೃಥ್ವಿ ಅಂಬರ್‌ ಅವರೂ ತುಳು ಸಿನಿಮಾಗಳ ಹಿನ್ನೆಲೆ ಉಳ್ಳವರು. ಸಂಗೀತ ನಿರ್ದೇಶಕ ಡಾಲ್ವಿನ್‌ ಕೊಳಲಗಿರಿ ಮಂಗಳೂರು ಮೂಲದವರಾಗಿದ್ದು ಈ ಸಿನಿಮಾದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿದ್ದಾರೆ.

‘ಸಿನಿಮಾದ ಕಥಾವಸ್ತುವೇ ಮಂಗಳೂರು ಮೂಲದ್ದು. ಆ ಭಾಗದ ನಟರೇ ಹೆಚ್ಚು ಸೂಕ್ತ ಎನಿಸಿ ಬಹಳ ಯೋಚನೆ ಮಾಡಿ ಇವರೆಲ್ಲರನ್ನೂ ಆಯ್ಕೆ ಮಾಡಿಕೊಂಡಿದ್ದೇವೆ. ಹಣ ಗಳಿಸುವ ವ್ಯಾಮೋಹಕ್ಕೆ ಬಿದ್ದ ಯುವಕರು ಅಕ್ರಮ ದಂಧೆ ನಡೆಸಲು ಮುಂದಾಗಿ, ಅದಕ್ಕಾಗಿ ಬೇರೆ ನಗರಕ್ಕೆ ಬರುತ್ತಾರೆ. ಅವರು ಅನುಭವಿಸುವ ಪಡಿಪಾಟಲುಗಳನ್ನು ಹಾಸ್ಯಭರಿತವಾಗಿ ವಿವರಿಸಲಾಗಿದೆ. ಇದು ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ’ ಎಂದು ನಿರ್ದೇಶಕ ಸಂದೀಪ್‌ ಹೇಳುತ್ತಾರೆ.

‘ಈ ಸಿನಿಮಾದಲ್ಲಿ ದಕ್ಷಿಣ ಕನ್ನಡದ ನೇಟಿವಿಟಿ ತುಂಬ ಸೊಗಸಾಗಿ ಮೂಡಿಬಂದಿದೆ. ಕನ್ನಡ ಸಿನಿಮಾಗಳಲ್ಲಿ ಹಿಂದೆ ಹಾಸ್ಯ ಸಂದರ್ಭಗಳಲ್ಲಿ ಆ ಭಾಗದ ಭಾಷೆಯನ್ನು ಬಳಸಲಾಗುತ್ತಿತ್ತು. ಈಗ ದಕ್ಷಿಣ ಕನ್ನಡ ಭಾಗದ ಕಥಾವಸ್ತುಗಳನ್ನುಳ್ಳಿ ಸಿನಿಮಾಗಳು ಅಲ್ಲಿನ ಕಲಾವಿದರೇ ಬರುತ್ತಿದ್ದಾರೆ. ನೇಟಿವಿಟಿಯನ್ನು ಬಹಳ ಚೆನ್ನಾಗಿ ತೋರಿಸಲಾಗುತ್ತಿದೆ’ ಎಂದು ನಾಯಕ ನಟ ಪೃಥ್ವಿ ಅಂಬರ್‌ ಸಂತಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಮುಖ್ಯವಾಗಿ ಎರಡು ಹಾಡುಗಳಿವೆ. ಅವುಗಳನ್ನು ಸಂಜೀತ್‌ ಹೆಗಡೆ ಹಾಗೂ ಗುರುಕಿರಣ್‌ ಹಾಡಿದ್ದಾರೆ. ರಿಶಾ ನಿಜಗುಣ ನಾಯಕಿಯಾಗಿ ನಟಿಸಿದ್ದಾರೆ. ಹಾಸ್ಯ ನಟ ಬಸವರಾಜ ಕಟ್ಟಿ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಉದಯ ಉಲ್ಲಾಳ್‌ ಅವರ ಛಾಯಾಗ್ರಹಣವಿದೆ. ನರಸಿಂಹಮೂರ್ತಿ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT