ಕಪಟ ನಾಟಕ ಪಾತ್ರಧಾರಿಯ ಕಥೆ

7

ಕಪಟ ನಾಟಕ ಪಾತ್ರಧಾರಿಯ ಕಥೆ

Published:
Updated:
Prajavani

‘ಹುಲಿರಾಯ’ ಬಾಲು ನಾಗೇಂದ್ರ ಕಾಡಿನಿಂದ ಬೆಂಗಳೂರು ನಗರಕ್ಕೆ ಹಾರಿದ್ದಾರೆ ಎಂಬ ಸುದ್ದಿ ಒಂದೆರಡು ತಿಂಗಳುಗಳ ಹಿಂದೆ ಬಂದಿತ್ತು. ಸುದ್ದಿಯಲ್ಲಿ ಹೇಳಿದ್ದಂತೆ ನಗರಕ್ಕೆ ಬಂದಿರುವ ಬಾಲು, ಈಗ ‘ಕಪಟ ನಾಟಕ ಪಾತ್ರಧಾರಿ’ಯಾಗಿ ಕಾಣಿಸಿಕೊಂಡಿದ್ದಾರೆ.

ಕ್ರಿಷ್ ಅವರು ನಿರ್ದೇಶಿಸಿರುವ ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರದ ಬಗ್ಗೆ ಮಾಹಿತಿ ನೀಡಲು ಕ್ರಿಷ್ ಅವರು ಸುದ್ದಿಗೋಷ್ಠಿ ಕರೆದಿದ್ದರು.

‘ಜಾಸ್ತಿ ಪ್ರೀತಿ ಎನ್ನುವ ಸಿನಿಮಾ ನಿರ್ದೇಶನವನ್ನು ಹಿಂದೆ ಆರಂಭಿಸಿದ್ದೆ. ಅದು ಪೂರ್ಣಗೊಳ್ಳುವ ಹಂತದ ಸಮೀಪ ಬಂದಿದೆ’ ಎನ್ನುತ್ತ ಮಾತು ಆರಂಭಿಸಿದ ಕ್ರಿಷ್, ‘ಕಪಟ ನಾಟಕ ಸೂತ್ರಧಾರಿ ಚಿತ್ರದ ಕಥೆಯನ್ನು ನನ್ನ ಸ್ನೇಹಿತರ ಜೊತೆ ಚರ್ಚಿಸಿದ್ದೆ. ಅವರು ಕಥೆ ಚೆನ್ನಾಗಿದೆ’ ಎಂದು ಪ್ರತಿಕ್ರಿಯಿಸಿದರು. ನನ್ನ ಸಿನಿಮಾ ನಾಯಕ ಯಾರಾಗಬೇಕು ಎಂಬ ಆಲೋಚನೆಯಲ್ಲಿ ಇದ್ದಾಗ ಹುಲಿರಾಯ ಸಿನಿಮಾ ಟ್ರೇಲರ್ ಬಿಡುಗಡೆ ಆಯಿತು. ಅಲ್ಲಿ ಬಾಲು ನಾಗೇಂದ್ರ ಅವರ ಧ್ವನಿ ಕೇಳಿ, ನನ್ನ ಸಿನಿಮಾಕ್ಕೆ ಅವರೇ ಸೂಕ್ತ ವ್ಯಕ್ತಿ ಎಂದು ತೀರ್ಮಾನಿಸಿದೆ’ ಎಂದು ಎರಡು ವರ್ಷಗಳ ಹಿಂದಿನ ಕಥೆ ಹೇಳಿದರು.

‘ಈ ಕಥೆ ಯಾವುದರಿಂದಲೂ ಸ್ಫೂರ್ತಿ ಪಡೆದಿದ್ದಲ್ಲ. ಆಟೊ ಚಾಲಕನೊಬ್ಬನನ್ನು ಆಧಾರವಾಗಿ ಇಟ್ಟುಕೊಂಡು ಕಥೆ ಮಾಡಬೇಕು ಎಂದು ತೀರ್ಮಾನಿಸಿ ಮಾಡಿದ್ದು ಇದು’ ಎಂಬ ಸ್ಪಷ್ಟನೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಾಲು ಹೆಚ್ಚೇನೂ ಮಾತನಾಡಲಿಲ್ಲ. ‘ಕ್ರಿಷ್ ಅವರು ಬಹಳ ಪ್ಯಾಷನೇಟ್ ಆಗಿ ಸಿನಿಮಾ ಮಾಡುತ್ತಾರೆ’ ಎಂದು ಮೆಚ್ಚುಗೆ ಸೂಚಿಸಿದರು. ಸಂಗೀತಾ ಭಟ್ ಅವರು ಸುದ್ದಿಗೋಷ್ಠಿಗೆ ಬಂದಿರಲಿಲ್ಲ. ಚಿತ್ರದಲ್ಲಿ ಐದು ಹಾಡುಗಳಿದ್ದು, ಆದಿಲ್ ನದಾಫ್ ಅವರು ಸಂಗೀತ ನೀಡಿದ್ದಾರೆ.

‘ಇದು ಭರವಸೆ ಮೂಡಿಸುವ ಸಿನಿಮಾ. ಸಿನಿಮಾದಲ್ಲಿ ತಾಜಾತನ ಕಾಣಿಸುತ್ತಿದೆ’ ಎಂದರು ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !