ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಣ್ ಜೋಹರ್ @48

Last Updated 25 ಮೇ 2020, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನ ಕಲರ್‌ಫುಲ್‌ ನಿರ್ದೇಶಕ ಹಾಗೂನಿರ್ಮಾಪಕ ಕರಣ್‌ ಜೋಹರ್‌ ಮೇ 25ರಂದು ಜನ್ಮದಿನ ಆಚರಿಸಿಕೊಂಡರು. 48 ವರ್ಷದ ಈ ಡ್ಯಾಶಿಂಗ್‌ ನಿರ್ದೇಶಕನಿಗೆ ಬಾಲಿವುಡ್‌ ನಟರು, ತಂತ್ರಜ್ಞರು ಸಾಮಾಜಿಕ ಜಾಲತಾಣದಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ನಟಿಯರಾದ ಅನನ್ಯ ಪಾಂಡೆ, ರಾಕುಲ್ ಪ್ರೀತ್‌ ಸಿಂಗ್, ಸೋನಂ ಕಪೂರ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕರಣ್‌ ಜೋಹರ್‌ ಅವರೊಂದಿಗೆ ಇರುವ ಫೋಟೊಗಳನ್ನು ಹಂಚಿಕೊಂಡು ಪಾರ್ಟಿ ಮಾಡಲು ಕಾಯುತ್ತಿದ್ದೇವೆ ಎಂದು ಬರೆದು ಶುಭಾಶಯ ಕೋರಿದ್ದಾರೆ.

ಕರಣ್‌ ಅವರತಂದೆ ಯಶ್‌ ಜೋಹರ್‌ ಸ್ಥಾಪಿಸಿದ ಧರ್ಮ ಪ್ರೊಡಕ್ಷನ್,‌ ಸೃಜನಶೀಲ ಸಿನಿಮಾಗಳ ನಿರ್ಮಾಣದಿಂದ ಮತ್ತಷ್ಟು ಹೆಸರು ಮಾಡಿತು.1989ರಲ್ಲಿದೂರದರ್ಶನದಲ್ಲಿ ಪ್ರಸಾರವಾದ ‘ಇಂದ್ರಧನುಶ್‌’ ಧಾರಾವಾಹಿ ಮೂಲಕ ನಟನಾಗಿ ಬೆಳ್ಳಿ ತೆರೆಗೆ ಬಂದ ಕರಣ್‌ ನಂತರದಲ್ಲಿ ಹೆಸರು ಮಾಡಿದ್ದು ‘ಕುಚ್‌ ಕುಚ್‌ ಹೋತಾ ಹೈ’ ಸಿನಿಮಾ ನಿರ್ದೇಶನದಿಂದ.90ರ ದಶಕದಲ್ಲಿ ಈ ಸಿನಿಮಾ ಮಹಾಪ್ರೇಮ ಕಾವ್ಯವಾಗಿ ಹೊಸ ದಾಖಲೆ ಸೃಷ್ಟಿಸಿತು. ನಂತರ ಕರಣ್‌ ನಿರ್ದೇಶಿಸಿ, ನಿರ್ಮಿಸಿದ್ದು ಬಹುತೇಕ ಬ್ಲಾಕ್‌ಬ್ಲಸ್ಟರ್‌ ಸಿನಿಮಾಗಳನ್ನೇ.

ನಿರ್ದೇಶನ ಹಾಗೂ ನಿರ್ಮಾಣದಷ್ಟೇ ಯಶಸ್ವಿಯಾಗಿ ವಸ್ತ್ರವಿನ್ಯಾಸ, ಚಿತ್ರಕಥೆ ಹೆಣೆಯುವ ಕುಶಲಮತಿ ಇವರು. ಜತೆಗೆ ಪೋಷಕ ನಟನಾಗಿಯೂ ಪಾತ್ರ ನಿರ್ವಹಿಸಿದ್ದಾರೆ. ಬಾಲಿವುಡ್‌ ಬಾದ್‌ ಶಾ ಶಾರೂಕ್‌ ಖಾನ್‌ ಅವರ ಬಹುತೇಕ ಸಿನಿಮಾಗಳಿಗೆ ವಸ್ತ್ರವಿನ್ಯಾಸಕ ಕರಣ್‌ ಅವರೇ. ‘ಓಂ ಶಾಂತಿ ಓಂ’ ವಸ್ತ್ರವಿನ್ಯಾಸಕ್ಕೆ ಬಾಲಿವುಡ್‌ ಮಂದಿಯ ಮೆಚ್ಚುಗೆಯನ್ನು ಇವರು ಗಿಟ್ಟಿಸಿದರು.

ಬಾಡಿಗೆ ತಾಯಿ ಮೂಲಕ ರೂಹಿ ಹಾಗೂ ಯಶ್‌ ಅವಳಿ ಮಕ್ಕಳನ್ನು ಪಡೆದಿರುವ ಕರಣ್‌, ಈ ವರ್ಷದ ಹುಟ್ಟಿದ ದಿನವನ್ನು ತಮ್ಮ ಮುದ್ದಿನ ಮಕ್ಕಳೊಂದಿಗೆ ಕಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT