ಗುರುವಾರ , ಮಾರ್ಚ್ 30, 2023
24 °C
ಬ್ರೇಕ್‌ನನ ನಂತರ ನಿರ್ದೇಶನಕ್ಕೆ ಬಂದ ಕರಣ್‌ ಜೋಹರ್‌

‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಪ್ರೇಮ ಕಥೆಯ ಮರು ವ್ಯಾಖ್ಯಾನಕ್ಕೆ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಿರ್ದೇಶಕ ಕರಣ್ ಜೋಹರ್‌ ಅವರ ಹೊಸ ಚಿತ್ರದ ಶೀರ್ಷಿಕೆ ಬಹಿರಂಗವಾಗಿದೆ. ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಮುಂಬರಲಿರುವ ಹೊಸ ಚಿತ್ರ. ರಣವೀರ್‌ ಸಿಂಗ್‌ – ಆಲಿಯಾ ಭಟ್‌ ಮುಖ್ಯ ಭೂಮಿಕೆಯಲ್ಲಿ ಇರಲಿದ್ದಾರೆ.

2016ರಲ್ಲಿ ‘ಏ ದಿಲ್‌ ಹೈ ಮುಷ್ಕಿಲ್‌’ ಪ್ರೇಮ ಕಥೆಯ ಬಳಿಕ ಅವರು ಕೆಲಕಾಲ ನಿರ್ದೇಶನದಿಂದ ದೂರ ಉಳಿದಿದ್ದರು. ಈಗ ಹೊಸ ಚಿತ್ರದ ಪ್ರಕಟಣೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರ ಸಾಹಿತ್ಯ (ಕಥೆ, ಚಿತ್ರಕಥೆ)ವನ್ನು ಇಶಿತಾ ಮೊಯಿತ್ರಾ, ಶಶಾಂಕ್‌ ಖೈತಾನ್‌ ಮತ್ತು ಸುಮಿತ್‌ ರಾಯ್‌ ಬರೆದಿದ್ದಾರೆ.

ನನ್ನ ನೆಚ್ಚಿನ ಜನರ ಜೊತೆ ಕ್ಯಾಮೆರಾ ಲೆನ್ಸ್‌ ಹಿಂದೆ ಬರಲು ತುಂಬಾ ರೋಮಾಂಚನವೆನಿಸುತ್ತಿದೆ. ‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇದರಲ್ಲಿ ರಣವೀರ್‌ ಸಿಂಗ್‌ ಮತ್ತು ಅಲಿಯಾ ಭಟ್‌ ಇದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಜೋಹರ್‌ ಅವರು 2012ರಲ್ಲಿ ಅಲಿಯಾ ಭಟ್‌ ಅವರ ‘ಸ್ಟೂಟೆಂಡ್‌ ಆಫ್‌ ದಿ ಇಯರ್‌’ ಚಿತ್ರವನ್ನು ನಿರ್ದೇಶಿಸಿದ್ದರು. ರಣವೀರ್‌ ಅವರೊಂದಿಗೆ ಜೋಹರ್‌ ಅವರ ಮೊದಲ ಚಿತ್ರವಿದು. ಈ ಹೊಸ ಚಿತ್ರ ಮುಂದಿನ ವರ್ಷ ಬಿಡುಗಡೆ ಆಗಲಿದೆ.

ರಾಕಿ ಮತ್ತು ರಾಣಿ ಎಂದಿನ ಪ್ರೇಮ ಕಥೆಗಳನ್ನು ಮರು ವ್ಯಾಖ್ಯಾನಿಸಲಿದೆ. ಇದು ಎಂದಿನ ಸಾಮಾನ್ಯ ಪ್ರೇಮಕಥೆ ಅಲ್ಲ ಎಂದು ಜೋಹರ್ ಬಣ್ಣಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು