ಬುಧವಾರ, ಜೂನ್ 3, 2020
27 °C

‘ಅಂಗ್ರೇಜಿ ಮೀಡಿಯಂ’ ಶೂಟಿಂಗ್ ಮುಗಿಸಿದ ಕರೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರೀನಾ ಕಪೂರ್ ಖಾನ್‌ ಕೆಲವು ದಿನಗಳಿಂದ ಲಂಡನ್‌ನಲ್ಲಿ ನೆಲೆಸಿದ್ದರು. ವಿಶ್ವಕಪ್‌ ಕ್ರಿಕೆಟ್ ನೋಡಲು ಹೋಗಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದರು. ಕರೀನಾ ಇದಕ್ಕೆ ಉತ್ತರವಾಗಿ ‘ಇಲ್ಲ ನಾನು ಅಂಗ್ರೇಜಿ ಮೀಡಿಯಂ’ಗಾಗಿ ಬಂದಿದ್ದೇನೆ ಎಂದು ಹೇಳಿದ್ದರು.

ಏನಿದು ‘ಅಂಗ್ರೇಜಿ ಮೀಡಿಯಂ’ ಎಂದು ಹುಡುಕಿದಾಗ ಅಭಿಮಾನಿಗಳಿಗೆ ಗೊತ್ತಾಗಿದ್ದು ಇದು ಇರ್ಫಾನ್‌ ಖಾನ್ ಹಾಗೂ ಕರೀನಾ ಅಭಿನಯದ ಸಿನಿಮಾ. ಈ ಚಿತ್ರದಲ್ಲಿ ಕರೀನಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ಚಿತ್ರ ತಂಡ ಬ್ರೇಕ್ ಹಾಕಿದೆ. ಪೊಲೀಸ್‌ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿರುವ ಕರೀನಾ ಅವರ ಚಿತ್ರವೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

ಸಿನಿಮಾದ ನಿರ್ದೇಶಕ ಹೋಮಿ ಅದಾಜಾನಿಯಾ ಟ್ವೀಟ್ ಮಾಡಿ, ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಲಂಡನ್‌ನಿಂದ ಬಂದಿಳಿದ ಕರೀನಾ ಕಪೂರ್‌ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಚಿತ್ರಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ರಾಜ್‌ ಮೆಹ್ತಾ ನಿರ್ದೇಶನದ ‘ಗುಡ್‌ ನ್ಯೂಸ್’ ಸಿನಿಮಾದಲ್ಲಿ ಕರೀನಾ ನಟಿಸುತ್ತಿದ್ದಾರೆ. ಅಕ್ಷಯ್‌ ಕುಮಾರ್‌ ಈ ಸಿನಿಮಾದಲ್ಲಿ ಮುಖ್ಯಪಾತ್ರ ನಿರ್ವಹಿಸುತ್ತಿದ್ದಾರೆ. ಕಿಯಾರಾ ಅಡ್ವಾನಿ ಕೂಡ ಇದ್ದಾರೆ. ಕರಣ್‌ ಜೋಹರ್ ಅವರ ‘ತಕ್ತ್‌’ ಸಿನಿಮಾ ಕೂಡ ಕರೀನಾ ಕೈಯಲ್ಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.