ಗುರುವಾರ , ಸೆಪ್ಟೆಂಬರ್ 19, 2019
26 °C
Kareena kapoor in Angrezi Medium

ಅಂಗ್ರೇಜಿ ಮೀಡಿಯಂನಲ್ಲಿ ‘ಕಾಪ್’ ಕರೀನಾ...

Published:
Updated:
Prajavani

ಆರ್‌ಟಿಇ ಅಡಿ ಪ್ರತಿಷ್ಠಿತ ಶಾಲೆಗಳಲ್ಲಿ ಸೀಟು ಪಡೆಯುವ ಮಕ್ಕಳ ತಂದೆತಾಯಂದಿರು ಪಡುವ ಪಡಿಪಾಟಲುಗಳ ‘ಹಿಂದಿ ಮೀಡಿಯಂ’ ಸಿನಿಮಾ ಬಾಲಿವುಡ್‌ನಲ್ಲಿ ಯಶಸ್ಸು ಗಳಿಸಿತ್ತು. ಪೋಷಕರ ಪಾತ್ರದಲ್ಲಿ ಇರ್ಫಾನ್  ಖಾನ್ ಮತ್ತು ಸಭಾ ಖಾಮರ್ ಪ್ರೇಕ್ಷಕರ ಮನಗೆದ್ದಿದ್ದರು. ಕೊನೆಗೆ ತಮ್ಮ ಮಗಳು ಪಿಯಾಳನ್ನು ಹಿಂದಿ ಮೀಡಿಯಂ ಸರ್ಕಾರಿ ಶಾಲೆಗೆ ಸೇರಿಸುವ ಪೋಷಕರ ನಿರ್ಧಾರ ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಕನ್ನಡಿ ಹಿಡಿಯುವಂತಿತ್ತು. 

‘ಹಿಂದಿಮೀಡಿಯಂ’ ಸಿನಿಮಾದ ಯಶಸ್ಸಿನಿಂದ ಪ್ರೇರಿತವಾಗಿ ಈಘ ‘ಅಗ್ರೇಜಿ ಮೀಡಿಯಂ’ ಸಿನಿಮಾ ತಯಾರಾಗುತ್ತಿದೆ. ಇದರಲ್ಲೂ ಪ್ರಧಾನ ಪಾತ್ರದಲ್ಲಿ ಇರ್ಫಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದು, ಇರ್ಫಾನ್  ಪತ್ನಿಯಾಗಿ ರಾಧಿಕಾ ಮದನ್ ಅಭಿನಯಿಸುತ್ತಿದ್ದಾರೆ. ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಕರೀನಾ ಕಪೂರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. 

ಮೊದಲ ಬಾರಿಗೆ ಕಾಪ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕರೀನಾ ತಮ್ಮ ಪಾತ್ರದ ಬಗ್ಗೆ ಕಾತರರಾಗಿದ್ದಾರಂತೆ. ನಿರ್ದೇಶಕ ಹೋಮಿ ಅದಾಜಾನಿಯಾ ಅವರ ಅಣತಿಯಂತೆ ಪಾತ್ರಕ್ಕೆ ಪಕ್ಕಾ  ಹೋಮ್ ವರ್ಕ್ ಮಾಡಿಕೊಂಡಿರುವ ಕರೀನಾ, ಮೇ 15ರಿಂದ ’ಅಗ್ನೇಜಿ ಮೀಡಿಯಂ’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನ್‌ನಲ್ಲಿ ಲಂಡನ್‌ಗೆ ತೆರಳುವ ಕರೀನಾ, ಅದಕ್ಕೂ ಮುನ್ನ ಚಿತ್ರೀಕರಣ ಮುಗಿಸಿಕೊಂಡು ಹೋಗಬೇಕೆಂದು ಅಂದುಕೊಂಡಿದ್ದಾರಂತೆ.

 

Post Comments (+)