ಪಿಂಕ್ ಬಿಕಿನಿಯಲ್ಲಿ ಕರೀನಾ!

7

ಪಿಂಕ್ ಬಿಕಿನಿಯಲ್ಲಿ ಕರೀನಾ!

Published:
Updated:
Deccan Herald

ಮದುವೆ, ಮಕ್ಕಳ ನಂತರವೂ ನಟಿ ಕರೀನಾ ಕಪೂರ್ ಜನಪ್ರಿಯತೆ ಕುಗ್ಗಿಲ್ಲ. ಈಚೆಗೆ ಮಾಲ್ಡೀವ್ಸ್‌ನ ಬೀಚ್‌ನಲ್ಲಿ ಗುಲಾಬಿ ಬಿಕಿನಿಯಲ್ಲಿ ಬಿಸಿಬಿಸಿಯಾಗಿ ಕಾಣಿಸಿಕೊಂಡಿರುವ ಕರೀನಾ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಜೋರು ಸದ್ದು ಮಾಡುತ್ತಿವೆ.

ಪತಿ ಸೈಫ್ ಅಲಿ ಖಾನ್ ಮತ್ತು ಪುತ್ರ ತೈಮೂರ್ ಜತೆ ಈಜುಕೊಳದಲ್ಲಿ ತೆಗೆಸಿಕೊಂಡಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಕರೀನಾಗೆ ಮೆಚ್ಚುಗೆ ಮಹಾಪೂರವೇ ಹರಿದುಬಂದಿದೆಯಂತೆ. ಅಭಿಮಾನಿಗಳಷ್ಟೇ ಅಲ್ಲ ನಾದಿನಿ ಸೋಹಾ ಕೂಡಾ ಕರೀನಾಳ ಮೈಮಾಟಕ್ಕೆ ಮನಸೋತಿದ್ದಾರೆ. ಪುಟ್ಟ ಮಗು ತೈಮೂರ್ ಜತೆಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿರುವ ಕರೀನಾ ತಮ್ಮ ಆಕರ್ಷಕ ಮೈಮಾಟದಿಂದ ನೋಡುಗರ ಕಣ್ಸೆಳೆಯುತ್ತಿದ್ದಾರೆ. ತಾಯ್ತನದ ನಂತರವೂ ಕರೀನಾ ನಿತ್ಯವೂ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಅಷ್ಟೇ ಅಲ್ಲ ತಪ್ಪದೇ ಯೋಗವನ್ನೂ ಮಾಡುತ್ತಿದ್ದಾರೆ. ಇದರಿಂದಾಗಿ ಹಿಂದಿನ ಮೈಮಾಟಕ್ಕೆ ಸುಲಭವಾಗಿ ಮರಳಿದ್ದೇನೆ ಎನ್ನುವುದು ಕರೀನಾ ಅವರ ಮಾತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !