ಕರೀನಾ ಸಂಭಾವನೆ ದುಪ್ಪಟ್ಟು!

7
ಬಾಲಿವುಡ್

ಕರೀನಾ ಸಂಭಾವನೆ ದುಪ್ಪಟ್ಟು!

Published:
Updated:
Deccan Herald

ಬಾಲಿವುಡ್‌ನಲ್ಲಿ ನಾಯಕಿಯರು ಮದುವೆ, ಮಕ್ಕಳಾದ ಮೇಲೆ ತೆರೆಮೇಲೆ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ಸಂಭಾವನೆ ವಿಚಾರದಲ್ಲಿ ಈ ಹಿಂದೆ ಇದ್ದಷ್ಟೇ ಬೇಡಿಕೆ ಉಳಿಸಿಕೊಳ್ಳಲು ಹೆಣಗುವುದು ಸಾಮಾನ್ಯ. ಆದರೆ, ಇದಕ್ಕೆ ಅಪವಾದವೆನ್ನುವಂತೆ ನಟಿ ಕರೀನಾ ಕಪೂರ್ ಖಾನ್ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಹೆಚ್ಚಿಸಿಕೊಂಡಿದ್ದಾರೆ.

ಹೌದು. ಕರೀನಾ ಕಪೂರ್ ಚಿತ್ರವೊಂದಕ್ಕೆ ಈಗ ಬರೋಬ್ಬರಿ ₹ 10 ಕೋಟಿ ಪಡೆಯುತ್ತಾರಂತೆ! ಮಗ ತೈಮೂರ್ ಹುಟ್ಟುವ ಮುನ್ನ ಕರೀನಾ ತಮ್ಮ ಚಿತ್ರಗಳಿಗೆ ₹ 5ರಿಂದ ₹ 7 ಕೋಟಿ ತನಕ ಸಂಭಾವನೆ ಪಡೆಯುತ್ತಿದ್ದರು. ಆದರೆ, ತೈಮೂರ್ ಹುಟ್ಟಿದ ಬಳಿಕ ಕರೀನಾ ಅಭಿಯನದ ‘ವೀರೇ ದಿ ವೆಡ್ಡಿಂಗ್’ ಸಿನಿಮಾ ಬಾಕ್ಸಾಫೀಸಿನಲ್ಲಿ ಯಶಸ್ಸು ಗಳಿಸಿತ್ತು.

ಇದರಿಂದ ಕರೀನಾ ತಾವು ಮದುವೆಯ ನಂತರವೂ ಅಭಿಮಾನಿಗಳನ್ನು ಸೆಳೆಯಬಲ್ಲರು ಎಂಬುದು ಸಾಬೀತಾಗಿದ್ದು, ಇದರಿಂದಾಗಿ ಅವರು ತಮ್ಮ ಸಂಭಾವನೆ ದುಪ್ಪಟ್ಟುಗೊಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಮದುವೆ, ಮಗುವಿನ ನಂತರವೂ ನಾಯಕಿಯರು ಬಾಕ್ಸಾಫೀಸಿನಲ್ಲಿ ಯಶ‌ಸ್ಸು ಗಳಿಸಬಲ್ಲರು ಎಂಬುದನ್ನು ಕರೀನಾ ಸಾಬೀತುಪಡಿಸಿದ್ದು, ಕರೀನಾ ಸದ್ಯಕ್ಕೆ ‘ತಖ್ತ್’ ಮತ್ತು ‘ಗುಡ್‌ ನ್ಯೂಸ್’ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !