ಕಾರ್ಕಳ: ಇಲ್ಲಿನ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ‘ಡಿಟೆಕ್ಟಿವ್ ದಿವಾಕರ್’ ತುಳು ಚಲನಚಿತ್ರದ ಟೀಸರ್ ಬಿಡುಗಡೆ ಮತ್ತು 2ನೇ ಪೋಸ್ಟರ್ ಬಿಡುಗಡೆ ಸಮಾರಂಭ ಈಚೆಗೆ ನಡೆಯಿತು.

ಉದ್ಘಾಟಿಸಿ ಮಾತನಾಡಿದ ರವೀಂದ್ರ ಶೆಟ್ಟಿ ಬಜಗೋಳಿ, ‘ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ವಿಭಿನ್ನ ಕಥೆ ‘ಡಿಟೆಕ್ಟಿವ್ ದಿವಾಕರ್’ದಲ್ಲಿದೆ. ನಮ್ಮ ನೆಲದ ಕಥೆ ಹೇಳುವ ಈ ಚಲ ನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶ ನೀಡಲಿದೆ’ ಎಂದರು.

ಚಲನಚಿತ್ರದ ಸಹ ನಿರ್ಮಾಪಕ, ವಿಭಾ ಪ್ರೊಡಕ್ಷನ್ನ ಅಶ್ವತ್ಥ ಎಸ್.ಎಲ್, ‘ಈ ಚಲನಚಿತ್ರವು ಒಂದು ಹೊಸ ಕಥಾಹಂದರವನಿಟ್ಟುಕೊಂಡು ನಿರ್ಮಾಣವಾಗಿದ್ದು, ಕಾರ್ಕಳದ ಗತಿಸಿ ಹೋದ ಘಟನೆಗಳನ್ನು ಮತ್ತೆ ನೆನಪಿಸುವ, ರಹಸ್ಯಗಳನ್ನು ಅನಾವರಣಗೊಳಿಸುವ ಕಥೆಯನ್ನೊಳಗೊಂಡಿದೆ’ ಎಂದರು.

ಅಮೃತ್ ಯು. ರೈ ಎನ್.ಪಿ, ಮೀಡಿಯಾ ಮುಖ್ಯಸ್ಥ ವಾಸುದೇವ ಭಟ್, ಸಂದೀಪ್ ಎನ್., ಅಮ್ಮ ಚಾರಿಟಬಲ್ ಟ್ರಸ್ಟ್ನ ಅವಿನಾಶ್ ಶೆಟ್ಟಿ, ನಿರ್ದೇಶಕ ರಮಾನಂದ, ಸಂತೋಷ್ ಕುಮಾರ್ ಶೆಟ್ಟಿ, ಸುನಿಲ್ ಕಡ್ತಲ ಇದ್ದರು. ಸಂಸ್ಥೆಯ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಲೋಹಿತ್ ನಿರೂಪಿಸಿದರು. ಚಿತ್ರತಂಡದಲ್ಲಿ ಸಹಾಯಕ ನಿರ್ದೇಶಕ ವಿನೀಷ ಪೂಜಾರಿ, ಸಾಯಿನಾಥ್ ಪೆರ್ಡೂರು, ಛಾಯಾಗ್ರಹಣದಲ್ಲಿ ಸಂತೋಷ್ ಕುಲಾಲ್, ಸಂಗೀತ ನಿರ್ದೇಶನದಲ್ಲಿ ಕಾರ್ತಿಕ್ ಮುಲ್ಕಿ, ಪ್ರವೀಣ್, ಸಂಕಲನ ವನ್ನು ಗಗನ್ ಡಿ, ಪ್ರವೀಣ್ ಜಾರ್ಕಳ, ಪ್ರಜ್ವಲಿ ಸುವರ್ಣ, ವಸ್ತ್ರಾಲಂಕಾರವನ್ನು ದರ್ಶಿತ್ ಭಂಡಾರಿ ನಿರ್ವಹಿಸಲಿರುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-28-281864144

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.