ಚಲನಚಿತ್ರ ವಾಣಿಜ್ಯ ಮಂಡಳಿ ಗದ್ದುಗೆ ಯಾರಿಗೆ?

7
ಮಧ್ಯಾಹ್ನ ಚುಣಾವಣೆ, ಸಂಜೆ ಫಲಿತಾಂಶ

ಚಲನಚಿತ್ರ ವಾಣಿಜ್ಯ ಮಂಡಳಿ ಗದ್ದುಗೆ ಯಾರಿಗೆ?

Published:
Updated:
 ಪ್ರಮೀಳಾ ಜೋಷಾಯ್

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾದಿಕಾರಿಗಳ ಆಯ್ಕೆಗೆ ಇಂದು (ಜೂನ್ 26) ಚುನಾವಣೆ ನಡೆಯಲಿದೆ. ಈಗಾಗಲೇ ವಾಣಿಜ್ಯ ಮಂಡಳಿಯಲ್ಲಿ ಚುನಾವಣೆಯ ಕಾವು ಏರಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಯಾವ ಸ್ಥಾನ ಯಾರಿಗೆ ಎಂಬ ಪ್ರಶ್ನೆಗೆ ಇಂದು ಸಂಜೆ ಉತ್ತರ ದೊರೆಯಲಿದೆ.

ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ. ನಂತರ ಮತ ಎಣಿಕೆ ಮಾಡಿ ಸಂಜೆಯೇ ಫಲಿತಾಂಶವನ್ನೂ ಘೋಷಿಸಲಾಗುವುದು. 

2015 ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಾ.ರಾ. ಗೋವಿಂದು ಇದುವರೆಗೆ ಅಧ್ಯಕ್ಷರಾಗಿದ್ದರು. ಉಮೇಶ್ ಬಣಕಾರ್ ಉಪಾಧ್ಯಕ್ಷರಾಗಿದ್ದರು.

ಈ ಚುನಾವಣೆಯಲ್ಲಿ 1235 ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಅವರಲ್ಲಿ  721 ನಿರ್ಮಾಪಕರು, 378 ವಿತರಕರು, 136 ಮಂದಿ ಪ್ರದರ್ಶಕರು ಇದ್ದಾರೆ. 

ವಿವಿಧ ಸ್ಥಾನಗಳಿಗೆ ಬಾರೀ ಪೈಪೋಟಿ ಏರ್ಪಟ್ಟಿದ್ದು, ವಿತರಕರ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದೆ. ಅಧ್ಯಕ್ಷ ಗದ್ದುಗೆಗಾಗಿ ಎಸ್‌.ಎ. ಚಿನ್ನೇಗೌಡ ಮತ್ತು ಮಾರ್ಸ್‌ ಸುರೇಶ್‌ ಸ್ಪರ್ಧಿಸಲಿದ್ದಾರೆ. ಆದರೆ ಚಿನ್ನೇಗೌಡರು ಹೆಚ್ಚು ಪ್ರಭಾವಶಾಲಿಗಳಾಗಿದ್ದು ಅವರೇ ಅಧ್ಯಕ್ಷ ಸ್ಥಾನ ಏರುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. 

ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಭಾ. ಮ. ಹರೀಶ್, ಎ. ಗಣೇಶ್ ಮತ್ತು ವಿತರಕರ ವಲಯದಿಂದ ಕೆ. ಪಾರ್ಥಸಾರಥಿ, ವೆಂಕಟೇಶ್‌ ಹಾಗೂ ಶಿಲ್ಪಾ ಶ್ರೀನಿವಾಸ್ ಕಣದಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಪ್ರಮೀಳಾ ಜೋಷಾಯ್, ದಿನೇಶ್ ಗಾಂಧಿ, ಕರಿಸುಬ್ಬು ನಡುವೆ ತುರುಸಿನ ಸ್ಪರ್ಧೆ ಇದೆ. ಜಯಸಿಂಹ ಮುಸುರಿ ಹಾಗೂ ಕೆ.ಎಂ. ವೀರೇಶ್ ಇಬ್ಬರು ಖಜಾಂಚಿ ಸ್ಥಾನಕ್ಕಾಗಿ ಸ್ಪರ್ಧೆ ನಡೆಸಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !