ಕನ್ನಡದ ಬಿಗ್ಬಾಸ್ 10ನೇ ಆವೃತ್ತಿಯ ವಿಜೇತ, ನಟ ಕಾರ್ತಿಕ್ ಮಹೇಶ್ ಅವರು ತಮ್ಮ ಮುಂದಿನ ಸಿನಿಮಾದ ಕುರಿತು ಅಪ್ಡೇಟ್ ಕೊಟ್ಟಿದ್ದಾರೆ. ಅವರು ’ಸೀತಾ ರಾಮ ರಾಜು’ ಎಂಬ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ.

ಬಿಗ್ಬಾಸ್ ಗೆಲುವು ನಟ ಕಾರ್ತಿಕ್ ಮಹೇಶ್ ಅವರಿಗೆ ದೊಡ್ಡ ಮಟ್ಟದ ಕೀರ್ತಿ ತಂದುಕೊಟ್ಟಿತು. ಬಳಿಕ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪ್ರಮುಖವಾಗಿ ‘ಒಂದು ಸರಳ ಪ್ರೇಮ ಕಥೆ’, ‘ಮೂಕ ಜೀವ’, ಧ್ರುವತಾರೆ, ಹಾಗೂ ರಿಚಿ ರಿಚ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ನಟನೆಯ ಮತ್ತೊಂದು ಸಿನಿಮಾ ತೆರೆ ಮೇಲೆ ಬರಲು ಸಿದ್ಧವಾಗಿದೆ.

ಕಾರ್ತಿಕ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ‘ಸೀತಾ ರಾಮ ರಾಜು’ ಸಿನಿಮಾದ ಮೊದಲ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್ನಲ್ಲಿ ‘ಸೀತಾ ರಾಮ ರಾಜು, ಒಂದು ವಾಗ್ಧನಾ, ಇನ್ನೊಂದು ವನವಾಸ, ಮತ್ತೊಂದು ಮಹಾಯುದ್ಧ... ಎದೆಯೊಳಗಿಳಿಯುವ ಕಥೆ.’ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಪೋಸ್ಟರ್ ಪ್ರಕಾರ, ಮೇಲ್ನೋಟಕ್ಕೆ ಇದೊಂದು ಗ್ರಾಮೀಣ ಕಥಾ ಹಂದರ ಹೊಂದಿರುವ ಸಿನಿಮಾದಂತೆ ಕಂಡುಬಂದಿದೆ. ಆದರೆ ಚಿತ್ರತಂಡವು ಸಿನಿಮಾದ ಕಥೆಯನ್ನು ಕುರಿತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಕೀರ್ತಿಕೃಷ್ಣಪ್ಪ ನಿರ್ದೇಶನದಲ್ಲಿ ಮೂಡಿ ಬರಲಿರುವ ಸೀತಾ ರಾಮ ರಾಜು ಸಿನಿಮಾ ಮೂಡಿ ಬರಲಿದೆ. ಅರುಣ್ ಕುಮಾರ್ ಆರ್ ಹಾಗೂ ಭವ್ಯ ಅರುಣ್ ಕುಮಾರ್ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಸಿನಿಮಾಗೆ ರಾಘವೇಂದ್ರ ವಿ ಸಂಗೀತ, ಅಭಿಲಾಷ್ ಕಳತಿ ಛಾಯಾಗ್ರಹಣ, ಎ.ಆರ್. ಕೃಷ್ಣ ಸಂಕಲನ ಹಾಗೂ ಕ್ರಾಂತಿ ಕುಮಾರ್ ಅವರ ಸಂಭಾಷಣೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.