ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಸೂರ್ಯ, ತ್ರಿಷಾ ನಟನೆಯ 'ಕರುಪ್ಪು' ಚಿತ್ರದ ದೃಶ್ಯವೊಂದರಲ್ಲಿನ ಸಂಭಾಷಣೆಯು ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆ ಚಿತ್ರತಂಡ ಕ್ಷಮೆ ಕೇಳಿದೆ.

ಈ ಕುರಿತು ನಿರ್ಮಾಣ ಸಂಸ್ಥೆ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇಳಿಯರಾಜ ಅವರಿಗೆ ಸಂಬಂಧಿಸಿದ ದೃಶ್ಯವನ್ನು ತೆಗೆಯುವುದಾಗಿ ಹೇಳಿದೆ.

‘ಭಾರತೀಯ ಚಿತ್ರರಂಗಕ್ಕೆ ಸಂಗೀತ ಮಾಂತ್ರಿಕ ಇಳಯರಾಜ ಅವರ ಕೊಡುಗೆ ಅಪಾರ . ಎಲ್ಲಾ ಕಾಲದ ಜನರಿಗೂ ಇವರ ಹಾಡು ಸ್ಪೂರ್ತಿಯಾಗಿದೆ. ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮೊದಲು ನಾವು ಅವರಿಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತೇವೆ’ ಎಂದಿದೆ.

‘ಕರುಪ್ಪು’ ಚಿತ್ರದಲ್ಲಿನ ಸಂಭಾಷಣೆಯೊಂದು ಇಳಯರಾಜ ಹಾಗೂ ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿರುವುದು ತಿಳಿದಿದೆ. ಅವರಿಗೆ ನೋವುಂಟು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಕೇವಲ ಮನರಂಜನೆ ದೃಷ್ಟಿಯಿಂದ ಅವರ ಹೆಸರನ್ನು ಈ ಚಿತ್ರದಲ್ಲಿ ಬಳಕೆ ಮಾಡಿದ್ದೇವೆ. ಇದರಿಂದ ಅವರಿಗೆ ನೋವಾಗಿದ್ದರೆ ಈ ಮೂಲಕ ಕ್ಷಮೆಯಾಚಿಸುತ್ತೇವೆ ಹಾಗೂ ಅವರಿಗೆ ಸಂಬಂಧಿಸಿದ ದೃಶ್ಯವನ್ನು ತೆಗೆದುಹಾಕಲು ಚಿತ್ರತಂಡ ನಿರ್ಧರಿಸಿದೆ' ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.