ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಮೊದಲ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರ ಉದ್ಘಾಟನೆ

ಮೊದಲಿಗೆ ‘ಲಾಲ್‌ ಸಿಂಗ್‌ ಛಡ್ಡಾ’ ಸಿನಿಮಾ ಪ್ರದರ್ಶನ
Last Updated 21 ಸೆಪ್ಟೆಂಬರ್ 2022, 6:22 IST
ಅಕ್ಷರ ಗಾತ್ರ

ಶ್ರೀನಗರ: ಚಿತ್ರಮಂದಿರ ಬೇಕು ಎನ್ನುವ ಕಾಶ್ಮೀರ ಜನರ ಕಾಯುವಿಕೆ ಕೊನೆಗೂ ಅಂತ್ಯಕಂಡಿದೆ. 30 ವರ್ಷಗಳ ಬಳಿಕ ಕಣಿವೆಯ ಮೊದಲ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರವನ್ನು ಜಮ್ಮು–ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಮಂಗಳವಾರ ಉದ್ಘಾಟಿಸಿದರು.

ಕಾಶ್ಮೀರದ ಪ್ರಮುಖ ಉದ್ಯಮಿ ವಿಜಯ್‌ ಧಾರ್‌, ಐನಾಕ್ಸ್‌ನ ಶ್ರಮದ ಫಲವಾಗಿ ಸಿನಿಮಾ ಮಂದಿರ ನಿರ್ಮಾಣವಾಗಿದೆ. ಐನಾಕ್ಸ್‌ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರದಲ್ಲಿ ಅಮೀರ್‌ ಖಾನ್‌ ನಟನೆಯ ‘ಲಾಲ್‌ ಸಿಂಗ್‌ ಛಡ್ಡಾ’ ಸಿನಿಮಾವು ಮೊದಲಿಗೆ ಪ್ರದರ್ಶನಗೊಳ್ಳಲಿದೆ. ನಂತರ ಸೆ.30ಕ್ಕೆ ಸೈಫ್‌ ಅಲಿ ಖಾನ್‌ ಹಾಗೂ ಹೃತಿಕ್‌ ರೋಷನ್‌ ನಟನೆಯ ‘ವಿಕ್ರಂ ವೇದಾ’ ಪ್ರದರ್ಶನವಾಗಲಿದೆ.

ಮೊದಲ ಸಿನಿಮಾ ಪ್ರದರ್ಶನಕ್ಕೆ ‘ಲಾಲ್‌ ಸಿಂಗ್‌ ಚಡ್ಡಾ’ ಸಿನಿಮಾವನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ವಿಜಯ್‌ ಧಾರ್‌, ‘ಈ ಸಿನಿಮಾವು ಬಿಡುಗಡೆಯಾದ ಹೊತ್ತಿನಲ್ಲಿಯೇ ಚಿತ್ರಮಂದಿರವನ್ನೂ ಉದ್ಘಾಟಿಸುವ ಯೋಜನೆ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ನಮ್ಮ ಕುಟುಂಬವೇ ನಡೆಸುವ ಶಾಲೆಯೊಂದರಲ್ಲಿ ಸಿನಿಮಾದ ಬಹುಭಾಗ ಚಿತ್ರೀಕರಣಗೊಂಡಿದೆ. ಜೊತೆಗೆ ಅಮೀರ್ ಖಾನ್‌ ನನ್ನ ಸ್ನೇಹಿತ. ಆದ್ದರಿಂದ ಈ ಸಿನಿಮಾವನ್ನೇ ಆಯ್ಕೆ ಮಾಡಿಕೊಂಡೆವು’ ಎಂದರು.

ಚಿತ್ರಮಂದಿರದಲ್ಲಿ ಒಟ್ಟು ಮೂರು ಸ್ಕ್ರೀನ್‌ ಇದೆ. ಮೂರು ಸ್ಕ್ರೀನ್‌ಗಳನ್ನು ಸೇರಿ ಒಟ್ಟು 520 ಮಂದಿಗೆ ಆಸನ ವ್ಯವಸ್ಥೆ ಇದೆ. ಚಿತ್ರಮಂದಿರಕ್ಕೆ ಅತ್ಯಾಧುನಿಕ ಸೌಂಡ್‌ ಸಿಸ್ಟಮ್‌ನನ್ನು ಅವಳಡಿಸಲಾಗಿದೆ.‌

ಪೊಲೀಸ್‌ ಬಂಕರ್‌ ನಿಯೋಜನೆ

ಕಣಿವೆ ರಾಜ್ಯದಲ್ಲಿ 1989ರ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಗಿತ್ತು. 1998ರಲ್ಲಿ ಮೊದಲ ಬಾರಿಗೆ ಚಿತ್ರಮಂದಿರಗಳನ್ನು ಪುನಃ ತೆರೆಯುವ ಪ್ರಯತ್ನಗಳು ನಡೆದವು. ನೀಲಂ, ರೇಗಲ್‌ ಮತ್ತು ಬ್ರಾಡ್‌ವೇ ಎಂಬ ಮೂರು ಚಿತ್ರಮಂದಿರಗಳು ಈ ವೇಳೆ ತೆರೆದವು. ಆದರೆ, ರೇಗಲ್‌ ಚಿತ್ರಮಂದಿರ ಮೇಲೆ ಭಯೋತ್ಪಾದಕರು ದಾಳಿ ನಡೆಯಿತು. ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟರು. ನಂತರ ಈ ಚಿತ್ರಮಂದಿರವನ್ನು ಮುಚ್ಚಲಾಯಿತು. ಆದ್ದರಿಂದ ಈಗ ಮೊಬೈಲ್‌ ಪೊಲೀಸ್‌ ಬಂಕರ್‌ವೊಂದು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರ ಮುಂಭಾಗದಲ್ಲಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT