ಕತ್ರೀನಾ ಕಾಸ್ಮೆಟಿಕ್ ಬ್ರ್ಯಾಂಡ್!

ಸೋಮವಾರ, ಜೂನ್ 17, 2019
23 °C
Katrina Kaif is all set to launch her own cosmetic label; details inside

ಕತ್ರೀನಾ ಕಾಸ್ಮೆಟಿಕ್ ಬ್ರ್ಯಾಂಡ್!

Published:
Updated:
Prajavani

ಬಿಟೌನ್ ಬೆಡಗಿ ಕತ್ರೀನಾ ಕೈಫ್ ತಮ್ಮ ಫಿಟ್‌ನೆಸ್, ನಟನೆ ಮತ್ತು ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದವರು. ನೃತ್ಯದಲ್ಲೂ ಸೈ ಎನಿಸಿಕೊಂಡಿರುವ ಕತ್ರೀನಾ, ತಮ್ಮ ಸೌಂದರ್ಯದ ರಹಸ್ಯವನ್ನು ಕಾಸ್ಮೆಟಿಕ್ ಬ್ರ್ಯಾಂಡ್‌ವೊಂದನ್ನು ಆರಂಭಿಸುವ ಮೂಲಕ ಬಹಿರಂಗಪಡಿಸಲಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸೆಲೆಬ್ರಿಟಿಗಳಾದ ಮಡೋನ್ನಾ, ರಿಹನ್ನಾ, ಕೈಲಿ ಜೆನ್ನರ್, ವಿಕ್ಟೋರಿಯಾ ಬೆಕಂ, ಕಿಮ್ ಕರ್ದಷಿಯಾನ್ ಸೇರಿದಂತೆ ಹಲವರು ತಮ್ಮದೇ ಕಾಸ್ಮೆಟಿಕ್ ಉತ್ಪನ್ನಗಳ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. ಈಗ ಆ ಸಾಲಿಗೆ ಕತ್ರೀನಾ ಕೂಡಾ ಸೇರಲಿದ್ದಾರೆ.  

ಫ್ಯಾಷನ್ ಮತ್ತು ಸ್ಟೈಲ್ ಬ್ರ್ಯಾಂಡ್‌ಗಳಿಗೆ ಕತ್ರೀನಾ ಯಾವಾಗಲೂ ಚಾಲ್ತಿಯಲ್ಲಿರುತ್ತಾರೆ. ಈಗಾಗಲೇ ತಮ್ಮ ಕಾಸ್ಮೆಟಿಕ್ ಬ್ರ್ಯಾಂಡ್‌ನ ಬಗ್ಗೆ ಯೋಜನೆ ರೂಪಿಸಿರುವ ಕತ್ರೀನಾ, ಶೀಘ್ರದಲ್ಲೇ ಅದನ್ನು ಮಾರುಕಟ್ಟೆಗೆ ತರುವ ಸಿದ್ದತೆಯಲ್ಲಿದ್ದಾರೆ. ಈ ಬಗ್ಗೆ ಕತ್ರೀನಾ ಮತ್ತು ಅವರ ತಂಡ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಇದೇ ವರ್ಷದ ಅಕ್ಟೋಬರ್ ವೇಳೆಗೆ ಕತ್ರೀನಾ ಹೆಸರಿನ ಸೌಂದರ್ಯ ಉತ್ಪನ್ನಗಳು ಮಾರುಕಟ್ಟೆಗೆ ಬರಲಿವೆ. 

ಪ್ರಸಾದನ ಕ್ಷೇತ್ರದಲ್ಲಿ ತಮ್ಮದೇ ಸ್ವಂತ ಬ್ರ್ಯಾಂಡ್ ಆರಂಭಿಸುವ ಬಗ್ಗೆ ಕಾತರರಾಗಿರುವ ಕತ್ರೀನಾ, ಇದಕ್ಕಾಗಿ ಎರಡು ವರ್ಷದಿಂದ ಸಿದ್ಧತೆ ನಡೆಸಿದ್ದಾರಂತೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !