ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ರಿನಾ, ವಿಕ್ಕಿ ಕೌಶಲ್‌ ನಿಶ್ಚಿತಾರ್ಥ ಮಾಡಿಕೊಂಡರೇ? ವೈರಲ್‌ ಆದ ಫೋಟೊ ಯಾವುದು?

Last Updated 19 ಆಗಸ್ಟ್ 2021, 8:56 IST
ಅಕ್ಷರ ಗಾತ್ರ

ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದು ಸುಳ್ಳು ಎಂದು ಕತ್ರಿನಾ ಕೈಫ್‌ ಮ್ಯಾನೇಜರ್‌ ಸ್ಪಷ್ಟಪಡಿಸಿದ್ದಾರೆ.

ಎರಡು ವರ್ಷಗಳಿಂದ ಕತ್ರಿನಾ ಹಾಗೂ ವಿಕ್ಕಿ ಕೌಶಲ್‌ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ವಿಕ್ಕಿ ಮತ್ತು ಕತ್ರಿನಾ ಎಲ್ಲಿಯೂ ಬಾಯಿ ಬಿಟ್ಟಿಲ್ಲ.

ಕೆಲ ತಿಂಗಳುಗಳ ಹಿಂದೆ ವಿಕ್ಕಿ ಗೆಳೆಯ ಹಾಗೂ ನಟ ಹರ್ಷವರ್ದನ್‌ ಕಪೂರ್ ಅವರು ಜೂಮ್‌ ಟಿ.ವಿಗೆ ನೀಡಿರುವ ಸಂದರ್ಶನದಲ್ಲಿ ವಿಕ್ಕಿ ಮತ್ತು ಕತ್ರಿನಾ ಡೇಟಿಂಗ್‌ ಮಾಡುತ್ತಿರುವುದು ಸತ್ಯ ಎಂದು ಹೇಳಿದ್ದರು.

ಕತ್ರಿನಾ , ವಿಕ್ಕಿ ಕೌಶಲ್‌
ಕತ್ರಿನಾ , ವಿಕ್ಕಿ ಕೌಶಲ್‌

ನಿನ್ನೆ (ಆ.18) ಕತ್ರಿನಾ ಮತ್ತು ವಿಕ್ಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಚಿತ್ರ ಸಹಿತ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಕತ್ರಿನಾ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಕಾರ್ಯಕ್ರಮ ನಡೆದಿಲ್ಲ, ಸದ್ಯ ಮೇಡಂ ಟೈಗರ್‌–3 ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಫೋಟೊ ಬಗ್ಗೆ ವಿವರಣೆ ನೀಡಿರುವ ಅವರು ’ ಇದು ಎರಡು ವರ್ಷಗಳ ಹಿಂದಿನ ಫೋಟೊ, ಮೇಡಂ ಅವರು ವಿಕ್ಕಿ ಸರ್‌ ಮನೆಗೆ ದೀಪಾವಳಿ ಹಬ್ಬಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ತೆಗೆದಿರುವ ಚಿತ್ರ ಅದು ಎಂದು ಸ್ಪಷ್ಟಪಡಿಸಿದ್ದಾರೆ.

ಕತ್ರಿನಾ ಮತ್ತು ವಿಕ್ಕಿ ಕೌಶಲ್‌ ಅಭಿಮಾನಿಗಳು ನಿನ್ನೆ ಆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುವ ಮೂಲಕ ಸಂಭ್ರಮಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT