‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡಿರುವ ‘KD’ ಚಿತ್ರಕ್ಕೂ ಸೆನ್ಸಾರ್ ಮಂಡಳಿಯಿಂದ ಸಮಸ್ಯೆ ಎದುರಾಗಿದೆ ಎಂದು ಚಿತ್ರತಂಡ ಹೇಳಿದೆ. ಇದೇ ನಿರ್ಮಾಣ ಸಂಸ್ಥೆಯಡಿಯಲ್ಲಿ ದಳಪತಿ ವಿಜಯ್ ನಟಿಸಿರುವ ತಮಿಳು ಸಿನಿಮಾ ‘ಜನ ನಾಯಗನ್’ ಕೂಡ ಸೆನ್ಸಾರ್ ಸಮಸ್ಯೆ ಎದುರಿಸುತ್ತಿರುವುದು ಗೊತ್ತೇ ಇದೆ.

ಧ್ರುವ ಸರ್ಜಾ ನಟಿಸಿ, ಜೋಗಿ ಪ್ರೇಮ್ ನಿರ್ದೇಶಿಸಿರುವ ‘KD’ ಚಿತ್ರ ‘ಸರ್ಸೆ ಸೆರಗ ಸರ್ಸೆ’ ಹಾಡಿನಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸಂಸತ್ತಿನಲ್ಲಿಯೂ ಹಾಡಿನ ಅಶ್ಲೀಲ ಸಾಹಿತ್ಯ ಕುರಿತು ಚರ್ಚೆಯಾಗಿತ್ತು. ಹೀಗಾಗಿ ಚಿತ್ರದ ಮೇಲೆ ಕೇಂದ್ರ ಸೆನ್ಸಾರ್ ಮಂಡಳಿಯೇ ನಿಗಾವಹಿಸಲು ಮುಂದಾಗಿರುವುದು ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ.

‘ನಮ್ಮ ಸಿನಿಮಾವನ್ನು ಈಗಾಗಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸದಸ್ಯರು ವೀಕ್ಷಿಸಿದ್ದಾರೆ. ಈ ಸಿನಿಮಾದಲ್ಲಿ ಸಾಕಷ್ಟು ರಕ್ತಪಾತ ಇರುವುದರಿಂದ ‘ಎ’ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ಸಿದ್ಧವಾಗಿತ್ತು. ಹಾಡಿನ ಸಾಹಿತ್ಯದಲ್ಲಿ ಕೆಲವು ಸಾಲುಗಳನ್ನು ಬದಲಾಯಿಸುವಂತೆ ಸೂಚಿಸಿತ್ತು. ಅದನ್ನು ಚಿತ್ರತಂಡ ಕೂಡ ಒಪ್ಪಿಕೊಂಡಿತ್ತು. ಆದರೆ ಅಂತಿಮವಾಗಿ ಈ ಚಿತ್ರಕ್ಕೆ ಪ್ರಮಾಣಪತ್ರ ನೀಡಿಲ್ಲ. ಬದಲಾಗಿ ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ ಹಾಗೂ ಪರಿಷ್ಕರಣೆ ಸಮಿತಿಗೆ ಸಿನಿಮಾವನ್ನು ಕಳುಹಿಸಲಾಗಿದೆ. ನಿರ್ದೇಶಕರಿಗಾಗಲಿ, ನಿರ್ಮಾಣ ಸಂಸ್ಥೆಗಾಗಲಿ ಮಾಹಿತಿ ನೀಡದೆ ಪರಿಷ್ಕರಣೆ ಸಮಿತಿಗೆ ಕಳುಹಿಸುವ ಮೂಲಕ ಸೆನ್ಸಾರ್ ಮಂಡಳಿಯಿಂದ ನಿಯಮ ಉಲ್ಲಂಘನೆಯಾಗಿದೆ’ ಎಂದು ಚಿತ್ರತಂಡ ಆರೋಪಿಸಿದೆ.

ಏ.30ರಂದು ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ‘ಚಿತ್ರ ಬಿಡುಗಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅಷ್ಟರೊಳಗೆ ಸೆನ್ಸಾರ್ ಪ್ರಮಾಣ ಪತ್ರ ಸಿಗುತ್ತದೆ ಎಂಬ ನಂಬಿಕೆಯಿದೆ. ಸಿಗದಿದ್ದರೆ ಮುಂದಿನ ಕ್ರಮದ ಬಗ್ಗೆ ಯೋಚಿಸುತ್ತೇವೆ’ ಎಂದಿದ್ದಾರೆ ನಿರ್ದೇಶಕ ಪ್ರೇಮ್.

ಅಶ್ಲೀಲ ಸಾಹಿತ್ಯ ವಿವಾದದಿಂದಾಗಿ ‘ಸರ್ಸೆ ಸೆರಗ ಸರ್ಸೆ’ ಹಾಡನ್ನು ಹಿಂದಿಯಲ್ಲಿ ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ‘ಉಳಿದ ಭಾಷೆಗಳಲ್ಲಿಯೂ ಚಿತ್ರತಂಡ ಹಾಡನ್ನು ಹಿಂಪಡೆದು ಸಾಹಿತ್ಯ ಬದಲಿಸಿದೆ. ಅದರ ಬಳಿಕವೇ ಸೆನ್ಸಾರ್ಗೆ ಅರ್ಜಿ ಹಾಕಲಾಗಿದೆ’ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.