ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ಕೊನೆ ಹಾಡು ‘ಕಮ್ ಆನ್ ಕಾಳಿ’ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಸದ್ಯ ಆನಂದ್ ಆಡಿಯೋ ಯುಟ್ಯೂಬ್ನಲ್ಲಿ ಹಾಡು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 15 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಕಮ್ ಆನ್ ಕಾಳಿ ಹಾಡನ್ನು ಸ್ವತಃ ಜೋಗಿ ಪ್ರೇಮ್ ಅವರು ರಚಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಧ್ರುವ ಸರ್ಜಾ ಅವರ ಭರ್ಜರಿ ಡ್ಯಾನ್ಸ್ ಇದ್ದು, ಕಾಳಿಯನ್ನು ಪೊಲೀಸರು ರೌಡಿ ಪರೇಡ್ಗೆ ಕರೆದುಕೊಂಡು ಬಂದಾಗ ಈ ಹಾಡು ಆಂಭವಾಗುತ್ತದೆ.

ಈ ಹಾಡು ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಹಾಡಿನಲ್ಲಿ ರೀಷ್ಮಾ ನಾಣಯ್ಯ ಕೂಡ ಕಾಣಿಸಿಕೊಂಡಿದ್ದಾರೆ. ಅಂಥೋನಿ ದಾಸನ್ ಹಾಡನ್ನು ಹಾಡಿದ್ದಾರೆ.

ಕೆಡಿ ಸಿನಿಮಾವು ಕನ್ನಡದಲ್ಲಿ ಬಹು ತಾರೆಯರು ನಟಿಸಿರುವ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಪಿ. ರವಿಶಂಕರ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೆಡಿ ಸಿನಿಮಾವು ಇದೇ ಏಪ್ರಿಲ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಈ ಚಿತ್ರದ 'ಸೆಟ್ಟಾಗಲ್ಲ', 'ಶಿವ ಶಿವ', 'ಅಣ್ಣಮ್ಮ ಜೋಡೆತ್ತು ಕಣೋ', ಹಾಡುಗಳು ಬಿಡುಗಡೆಯಾಗಿ ಪ್ರೇಕ್ಷಕರನ್ನು ಸೆಳೆದಿದ್ದರೆ, ಸಂಜಯ್ ದತ್ ಹಾಗೂ ನೋರಾ ಫತೇಹಿ ಹೆಜ್ಜೆ ಹಾಕಿದ 'ಸರ್ಸೆ ಸರ್ಸೆ' ವಿವಾದ ಸೃಷ್ಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.