ಕೆಡಿ: ದಿ ಡೆವಿಲ್ ಸಿನಿಮಾ ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ₹4.10 ಕೋಟಿ ಗಳಿಸಿರುವುದಾಗಿ ಸ್ಯಾಕ್ನಿಲ್ಕ್ (sacnilk) ವರದಿ ಮಾಡಿದೆ.

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಕೆಡಿಯಲ್ಲಿ ಕಿಚ್ಚ ಸುದೀಪ್ ನಟನೆ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಮಾತ್ರವಲ್ಲದೆ ಧ್ರುವ ಸರ್ಜಾ ಅವರು ಸಿನಿಮಾದಲ್ಲಿ ರೆಟ್ರೋ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಕೆಡಿ ಸಿನಿಮಾವು ಮೊದಲ ದಿನ 845 ಪ್ರದರ್ಶನಗಳನ್ನು ಕಂಡಿದೆ.

ಕೆಡಿ ಸಿನಿಮಾವು ಏಪ್ರಿಲ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ವಾರ ಕಾರ್ಮಿಕ ದಿನಾಚರಣೆ ಸೇರಿದಂತೆ 3 ದಿನಗಳ ಸುದೀರ್ಘ ರಜೆ ಇದೆ. ಹಾಗಾಗಿ ಚಿತ್ರಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷಿಯಿದೆ. ಈ ಸಿನಿಮಾದಲ್ಲಿ ಜೋಗಿ ಅವರು ತಮ್ಮ ಹಳೆಯ ಶೈಲಿಯ ಸಂಭಾಷಣೆಗೆ ಮರಳಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

1980 ರ ದಶಕದಲ್ಲಿ ನಡೆದ ಸರಣಿ ಕೊಲೆಗಳೊಂದಿಗೆ ಸಿನಿಮಾದ ಕಥೆ ಪ್ರಾರಂಭವಾಗುತ್ತದೆ. ನಂತರ ಈ ಘಟನೆಗಳು ಐತಿಹಾಸಿಕ ಘಟನೆಗಳನ್ನು ಪರಿಚಯಿಸುತ್ತಾ ಕಥೆ ಸಾಗುತ್ತದೆ. ಬಳಿಕ ಕುಸ್ತಿಯಲ್ಲಿ ಸಂಜಯ್ ದತ್ ಅವರ ಪರಿಚಯವಾಗುತ್ತದೆ. ಬಳಿಕ ಧ್ರುವ ಸರ್ಜಾ ಪಾತ್ರ ಆರಂಭವಾಗಿ ಪ್ರೇಕ್ಷಕರ ಗಮನ ಕಾಳಿಯ ಕಡೆಗೆ ಸೆಳೆಯುತ್ತದೆ.

ಕೆಡಿ ಚಿತ್ರದಲ್ಲಿ ಕಿಚ್ಚ ಸುದೀಪ್, ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ, ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಪಿ. ರವಿಶಂಕರ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.