ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ‘KD’ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಸಾಹಿತ್ಯಕ್ಕೆ ಎಲ್ಲ ಭಾಷೆಗಳ ಪ್ರೇಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಿಂದಿ ಸಾಹಿತ್ಯಕ್ಕೆ ಬಾಲಿವುಡ್ನ ಗಣ್ಯರೇ ಸಾಮಾಜಿಕ ಮಾಧ್ಯಗಳಲ್ಲಿ ಟೀಕೆಗಳ ಮಹಾಪೂರವೇ ಹರಿದಿದೆ. ಹೀಗಾಗಿ ಚಿತ್ರತಂಡ ಹಾಡನ್ನು ಚಿತ್ರದಿಂದ ತೆಗೆದು ಹಾಕುತ್ತದೆಯಾ ಅಥವಾ ಉಳಿಸಿಕೊಳ್ಳಲಿದೆಯಾ ಎಂಬ ಚರ್ಚೆಯೂ ನಡೆದಿದೆ.

ಬಾಲಿವುಡ್ ನಟಿ ನೋರಾ ಫತೇಹಿ, ನಟ ಸಂಜಯ್ ದತ್ ಹೆಜ್ಜೆ ಹಾಕಿರುವ ಈ ಹಾಡು ಶನಿವಾರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಗೊಂಡಿತ್ತು. ಹಿಂದಿಯ ಹಾಡು ಕೇಳಿದ ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್, ‘ಗೀತರಚನಕಾರರು ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದನ್ನು ನೋಡಲು ಬೇಸರ ಆಗುತ್ತದೆ’ ಎಂದಿದ್ದರು. ಅದರ ಬೆನ್ನಲ್ಲೇ ಚಿತ್ರರಂಗದ ಕೆಲ ತಾರೆಯರು ಧ್ವನಿಗೂಡಿಸಿದ್ದರು.

ಕನ್ನಡದ ಹಾಡಿನ ಸಾಹಿತ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ‘ಬೇಡುವೆನು ವರವನ್ನು ಕೊಡು ತಾಯಿ ಜನ್ಮವನು’ನಂತಹ ಅರ್ಥಪೂರ್ಣ ಗೀತೆಯನ್ನು ರಚಿಸಿದ್ದ ನಿರ್ದೇಶಕ ಪ್ರೇಮ್ ಅವರೇ ಈ ಹಾಡಿಗೂ ಸಾಹಿತ್ಯ ಬರೆದಿದ್ದಾರೆಂಬುದನ್ನು ನಂಬಲು ಆಗುತ್ತಿಲ್ಲ ಎಂದು ಹಲವರು ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ ಬರೆದುಕೊಂಡಿದ್ದಾರೆ.

ವಿರೋಧದ ನಡುವೆಯೂ ಹಾಡು ಕನ್ನಡದಲ್ಲಿ 50 ಲಕ್ಷ ವೀಕ್ಷಣೆ ಪಡೆದು ಟ್ರೆಂಡ್ ಆಗುತ್ತಿದೆ. ಕೆಲವರು ಹಾಡಿಗೆ ರೀಲ್ಸ್ ಮಾಡಿ ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ.

ಪ್ರೇಮ್ಗೆ ವಿವಾದ ಹೊಸತಲ್ಲ

ವಿವಾದಗಳಿಂದಲೇ ಸಿನಿಮಾ ಪ್ರಚಾರ ಮಾಡಿಕೊಳ್ಳುವುದು ಪ್ರೇಮ್ಗೆ ಹೊಸತಲ್ಲ. ಅವರೇ ನಟಿಸಿರುವ ‘ಪ್ರೇಮ್ ಅಡ್ಡ’ ಚಿತ್ರ 2012ರಲ್ಲಿ ಬಿಡುಗಡೆಯಾಗಿತ್ತು. ಆ ಚಿತ್ರದ ‘ಮೇಲುಕೋಟೆ ಹುಡುಗಿ ಒಬ್ಬಳು’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಹಾಡಿನ ಸಾಹಿತ್ಯಕ್ಕೆ ಮೇಲುಕೋಟೆಯ ಜನರು ವಿರೋಧ ವ್ಯಕ್ತಪಡಿಸಿದ್ದರು.

ಪ್ರೇಮ್ ನಟಿಸಿ, ಅವರ ಪತ್ನಿ ರಕ್ಷಿತಾ ನಿರ್ಮಿಸಿದ್ದ ‘ಡಿಕೆ’ ಚಿತ್ರ ಶೀರ್ಷಿಕೆ, ಹಾಡಿನಿಂದ ವಿವಾದ ಎಬ್ಬಿಸಿತ್ತು. ಈ ಚಿತ್ರದ ‘ಬಾಗಿಲು ತೆಗೆಯೇ ಸೇಸಮ್ಮ...’ ಹಾಡಿನ ‘ಡಿಕೆ ಸಾಹೇಬ ಬರುತ್ತಿದ್ದಾನೆ ಬಾಗಿಲು ತೆಗೆಯೇ’ ಎಂಬ ಸಾಲಿಗೆ ಆಕ್ರೋಶ ವ್ಯಕ್ತವಾಗಿತ್ತು. ಚಿತ್ರದ ಇನ್ನೊಂದು ಹಾಡಿನಲ್ಲಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ಎಂ.ಕರುಣಾನಿಧಿ ಹಾಗೂ ಜೆ.ಜಯಲಲಿತಾ ಹೆಸರುಗಳನ್ನು ಬಳಸಿ ವಿವಾದ ಸೃಷ್ಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.