ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ಕೆ.ಡಿ’ ಸಿನಿಮಾದ ಕೀಳು ಅಭಿರುಚಿಯ ಹಾಡಿಗೆ ಲೇಖಕಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಹಾಡನ್ನು ಕೈಬಿಡುವಂತೆ ಚಿತ್ರತಂಡಕ್ಕೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಕರ್ನಾಟಕ ಲೇಖಕಿಯರ ಸಂಘ ಹಾಗೂ ಜನವಾದಿ ಮಹಿಳಾ ಸಂಘಟನೆ ಜಂಟಿಯಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ, ನಿರ್ಮಾಪಕರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಮಹಿಳಾ ಆಯೋಗಕ್ಕೆ ಪತ್ರ ಬರೆದಿವೆ.

ಬಿ. ಟಿ. ಲಲಿತಾ ನಾಯಕ್, ಹೇಮಲತಾ ಮಹಿಷಿ, ಶಾಂತಾ ನಾಗರಾಜ್, ಸಬಿಹಾ ಭೂಮಿಗೌಡ, ಆರ್. ಸುನಂದಮ್ಮ, ದು. ಸರಸ್ವತಿ, ಸಬಿತಾ ಬನ್ನಾಡಿ, ಎಂ.ಎಸ್. ಆಶಾದೇವಿ, ಪ್ರತಿಭಾ ನಂದಕುಮಾರ್, ವಸುಂಧರಾ ಕದಲೂರು, ಎಚ್.ಎಸ್. ಅನುಪಮಾ, ವಸುಂಧರಾ ಭೂಪತಿ, ಆರ್. ಪೂರ್ಣಿಮಾ ಮೊದಲಾದವರು ಈ ಪತ್ರಕ್ಕೆ ಸಹಮತ ಸೂಚಿಸಿದ್ದಾರೆ.

‘ಈ ಹಾಡು ಹೀನ ಅಭಿರುಚಿಯಿಂದ ಕೂಡಿದೆ. ಚಿಕ್ಕ ಮಕ್ಕಳಿಂದ ಹಿಡಿದು, ಎಲ್ಲರ ಮೇಲೂ ಇದು ಕೆಟ್ಟ ಪರಿಣಾಮ ಬೀರಲಿದೆ. ಗೀತೆಯ ಸಾಹಿತ್ಯವು ಅತ್ಯಂತ ಕೀಳು ಮಟ್ಟದಲ್ಲಿದೆ. ಶೃಂಗಾರಕ್ಕೂ ಅಶ್ಲೀಲಕ್ಕೂ ವ್ಯತ್ಯಾಸವಿದ್ದು, ಈ ಹಾಡು ಅಶ್ಲೀಲತೆಯಿಂದ ಕೂಡಿದೆ’ ಎಂದು ಲೇಖಕಿಯರು ಬೇಸರ ವ್ಯಕ್ತಪಡಿಸಿದ್ದಾರೆ.

‘ಈಗಾಗಲೇ ಹಲವು ರೀತಿಯಲ್ಲಿ ಹೆಣ್ಣುಮಕ್ಕಳ ಮೇಲೆ ಆಕ್ರಮಣ ಆಗುತ್ತಿದೆ. ಇಂತಹ ಹಾಡುಗಳು ಹೆಣ್ಣನ್ನು ಕಾಮದ ಗೊಂಬೆ ಎಂಬಂತೆ ಬಿಂಬಿಸಿ, ಹೆಂಗಸರನ್ನು ಆ ರೀತಿ ನೋಡಲು ಪ್ರಚೋದಿಸುತ್ತದೆ. ರಾಜ್ಯ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸುವಲ್ಲಿ ತೋರಿದ ಕಾಳಜಿಯನ್ನು ಈಗಲೂ ತೋರಿಸಬೇಕಿದೆ. ಸೆನ್ಸಾರ್ ಮಂಡಳಿ ತೋರಿರುವ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಇಂತಹ ಹಾಡುಗಳು ಎಗ್ಗಿಲ್ಲದೆ ಬಿಡುಗಡೆಯಾಗುತ್ತಿವೆ’ ಎಂದು ಹೇಳಿದ್ದಾರೆ.

‘ಸೆನ್ಸಾರ್ ಮಂಡಳಿ ಈ ಹಾಡನ್ನು ಹೇಗೆ ಒಪ್ಪಿತು ಎಂಬುದೇ ಆಶ್ಚರ್ಯವಾಗುತ್ತಿದೆ. ಮಹಿಳೆಯರನ್ನು ಅವಮಾನಿಸುವ ಇಂಥ ಹಾಡುಗಳನ್ನು ಯಾವ ಕಾರಣಕ್ಕೂ ನಾವು ಒಪ್ಪುವುದಿಲ್ಲ. ಈ ಹಾಡನ್ನು ಸಂಪೂರ್ಣವಾಗಿ ಕೈಬಿಡಬೇಕು. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಅಶ್ಲೀಲ ಸಾಹಿತ್ಯ ನಿರ್ಬಂಧಿಸಿ: ನಾಗಲಕ್ಷ್ಮೀ

‘ಚಲನಚಿತ್ರಗಳಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸುವ ಅಶ್ಲೀಲ ಸಾಹಿತ್ಯವನ್ನು ನಿರ್ಬಂಧಿಸಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಕೇಂದ್ರೀಯ ಸದನದ ಪ್ರಾದೇಶಿಕ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ‘ಕೆ.ಡಿ’ ಚಲನಚಿತ್ರದ ಹಾಡುಗಳಲ್ಲಿ ಮಹಿಳೆಯರ ಘನತೆಗೆ ಕುಂದು ತರುವಂತಹ ಸಾಹಿತ್ಯ ಬಳಕೆ ಆಗುತ್ತಿದೆ. ಆದ್ದರಿಂದ ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸುವ ಯಾವುದೇ
ದೃಶ್ಯ ಅಥವಾ ಸಾಹಿತ್ಯವನ್ನು ನಿರ್ಬಂಧಿಸಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಹಾಡಿನ ಸಾಹಿತ್ಯದಲ್ಲಿರುವ ಪ್ರಚೋದನಕಾರಿ ಸಾಲುಗಳನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವುದರಿಂದ ಮಹಿಳೆಯರ ಸುರಕ್ಷತೆ ಹಾಗೂ ಸಾಮಾಜಿಕ ಸ್ವಾಸ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಸಂವಿಧಾನದತ್ತವಾದ ಮಹಿಳೆಯರ ಘನತೆಯ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ಆದ್ದರಿಂದ ಸದರಿ ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುವ ಮೊದಲು ಇಂತಹ ಆಕ್ಷೇಪಾರ್ಹ ಸಾಹಿತ್ಯ ಮತ್ತು ದೃಶ್ಯಗಳನ್ನು ಪರಿಶೀಲಿಸಿ, ಅವುಗಳನ್ನು ಕಡ್ಡಾಯವಾಗಿ ತೆಗೆದು ಹಾಕಲು ಅಥವಾ ಮಾರ್ಪಾಡು ಮಾಡಲು ಚಿತ್ರ ತಂಡಕ್ಕೆ ನಿರ್ದೇಶನ ನಿಡಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.