ಧ್ರುವ ಸರ್ಜಾ ನಟನೆಯ ಕೆಡಿ: ದಿ ಡೆವಿಲ್ ಚಿತ್ರದ ‘ಸರ್ಸೇ ಸರ್ಸೇ ನಿನ್ನಾ ಸೆರಗಾ ಸರ್ಸೆ’ ಹಾಡು ಮಾರ್ಚ್ 14ರಂದು ಬಿಡುಗಡೆಯಾಗಿತ್ತು. ಈ ಹಾಡಿನ ಸಾಹಿತ್ಯ ಅಶ್ಲೀಲ ಪದಗಳಿಂದ ಕೂಡಿದೆ ಎಂದು ಸಿನಿಮಾ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.

ಕೆಡಿ ಚಿತ್ರದಲ್ಲಿ ಧ್ರುವ ಸರ್ಜಾ ನಾಯಕ ನಟನಾಗಿ ಕಾಣಿಸಿಕೊಂಡರೆ, ಜೋಗಿ ಪ್ರೇಮ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಸರ್ಸೆ ಹಾಡನ್ನು ‘ಭಾರತದಲ್ಲಿ ಇದುವರೆಗೆ ನಿರ್ಮಾಣವಾದ ಅತ್ಯಂತ ಅಸಭ್ಯ ಹಾಡು’ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದರು.

'ಜೋಗಿ' ಮತ್ತು 'ಎಕ್ಸ್ ಕ್ಯೂಸ್ ಮಿ' ಯಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕನ್ನಡದ ಕೆಡಿ ಚಿತ್ರವು 'ಸರ್ಸೆ ನಿನ್ನ ಸೇರಗ ಸರ್ಸೆ' (ನಿಮ್ಮ ಸೀರೆಯ ತುದಿಯನ್ನು ಸರಿಸಿ, ಸರಿಸಿ) ಎಂಬ ಐಟಂ ಹಾಡನ್ನು ಒಳಗೊಂಡಿದೆ. ಈ ಹಾಡನ್ನು ಚಿತ್ರತಂಡ ಶನಿವಾರ (ಮಾರ್ಚ್ 14) ಬಿಡುಗಡೆ ಮಾಡಿತ್ತು. ಈ ಹಾಡಿಗೆ ನೋರಾ ಫತೇಹಿ ಮತ್ತು ಸಂಜಯ್ ದತ್ ಹೆಜ್ಜೆ ಹಾಕಿದ್ದಾರೆ.

ಹಾಡಿನ ಮೂಲ ಆವೃತ್ತಿ ಕನ್ನಡಕ್ಕೆ ಹೋಲಿಸಿದರೆ, ಹಿಂದಿ ಹಾಡಿಗೆ ಆವೃತ್ತಿಗೆ ವ್ಯಾಪಕ ಟೀಕೆ ಎದುರಾಗಿತ್ತು. ಸದ್ಯ, ತಯಾರಕರು ಹಿಂದಿ ಹಾಡಿನ ಆವೃತ್ತಿಯನ್ನು ಖಾಸಗಿಗೊಳಿಸಿದ್ದಾರೆ. ಮಾತ್ರವಲ್ಲ, ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಹಿಂದಿ ಆವೃತ್ತಿಯ ಪ್ರಚಾರದ ವೀಡಿಯೊ ಮಾತ್ರ ಲಭ್ಯವಿದೆ.

ಕೆಡಿ: ದಿ ಡೆವಿಲ್ ಸಿನಿಮಾವು ತೆಲುಗು, ತಮಿಳು, ಮಲಯಾಳ ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗುತ್ತಿದ್ದು, ಸಿನಿಮಾವು ಏಪ್ರಿಲ್ 30ರಂದು ತೆರೆಗೆ ಬರಲಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದಿ ಹಾಡಿನ ಆವೃತ್ತಿ ವಿರುದ್ಧ ತೀವ್ರ ಟೀಕೆಗಳು ಕೇಳಿ ಬಂದಿವೆ. ಅಶ್ಲೀಲ ಪದಗಳು ಮಹಿಳೆಯರನ್ನು ಅವಮಾನಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆನ್ಸಾರ್ ಮಂಡಳಿ ಯಾವುದೇ ಆಕ್ಷೇಪಣೆ ಸಲ್ಲಿಸದೆ ಅಂಗೀಕರಿಸಿರುವುದರ ಕುರಿತು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಪ್ರಚೋದನೆ ಹೊಂದಿರುವ ಹಾಡನ್ನು ಚಿತ್ರದಿಂದ ಅಳಿಸಿಹಾಕಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

‘ಕೇವಲ ವಾಣಿಜ್ಯದ ಉದ್ದೇಕ್ಕಾಗಿ, ಹಾಡಿನ ಸಾಹಿತ್ಯವನ್ನು ಕೀಳುಮಟ್ಟದಲ್ಲಿ ರಚಿಸಿರುವುದನ್ನು ನೋಡಿ ದುಃಖವಾಯಿತು. ನನಗೆ ನಿಜವಾಗಿಯೂ ಮಾತುಗಳು ಬರುತ್ತಿಲ್ಲ’ ಎಂದು ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್ ಸಾಮಾಜಿಕ ಮಾಧ್ಯಮದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.