ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ಚಿತ್ರಕ್ಕಾಗಿ ಸಣ್ಣಗಾದ ನಟಿ ಕೀರ್ತಿ ಸುರೇಶ್

Last Updated 23 ಜೂನ್ 2019, 19:45 IST
ಅಕ್ಷರ ಗಾತ್ರ

ನಟಿ ಕೀರ್ತಿ ಸುರೇಶ್‌ ಅವರು ಬಾಲಿವುಡ್‌ನ ಹೊಸ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದಾರೆ. ತಾವು ಸಣ್ಣಗಾಗಿರುವಹೊಸ ಫೋಟೊಗಳನ್ನು ಅವರು ಟ್ವಿಟ್ಟರ್‌, ಫೇಸ್‌ಬುಕ್‌ಗಳಲ್ಲಿ ಪ್ರಕಟಿಸಿದ್ದು, ಇದಕ್ಕೆ ಅವರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಅಭಿಮಾನಿಗಳಲ್ಲಿ ಕೆಲವರು ಸಿನಿಮಾಕ್ಕಾಗಿ ಕೀರ್ತಿಯ ಸಮರ್ಪಣಾ ಭಾವ ಹಾಗೂ ಕಠಿಣ ಅಭ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ,ಹೆಚ್ಚಿನವರು ಛಬ್ಬಿ ಛಬ್ಬಿ ಕೀರ್ತಿಯೇ ಇಷ್ಟ ಎಂದು ಕಮೆಂಟ್‌ ಮಾಡಿದ್ದಾರೆ.

ನಟಿ ಶ್ರೀರೆಡ್ಡಿ ‘ಕೀರ್ತಿ ಸುರೇಶ್‌ ಅವರು ರೋಗಿಯಂತೆ ಕಾಣುತ್ತಿದ್ದಾರೆ’ ಎಂದು ಟೀಕೆ ಮಾಡಿದ್ದಾರೆ. ‘ನಾನು ಕೀರ್ತಿಯನ್ನು ವಿಮಾನದಲ್ಲಿ ಭೇಟಿ ಮಾಡಿದೆ. ನಾನೂ ಸೇರಿ ಅವರನ್ನು ಅಲ್ಲಿಯಾರೂ ಬೇಗನೆ ಗುರುತಿಸಲಿಲ್ಲ. ಎಲ್ಲರೂ ನನ್ನ ಹತ್ತಿರ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು.ತೂಕ ಇಳಿಸಿಕೊಂಡ ಕೀರ್ತಿ ರೋಗಿಯಂತೆ ಕಾಣುತ್ತಿದ್ದರು. ನಂತರ ಅದು ಕೀರ್ತಿಯೇ ಎಂದು ಸ್ಪಷ್ಟವಾದ ಬಳಿಕ ಅವರನ್ನೂ ಮಾತನಾಡಿಸಿದರು’ಎಂದು ಬರೆದುಕೊಂಡಿದ್ದಾರೆ.

ಕೀರ್ತಿ ಸುರೇಶ್‌ಬಾಲಿವುಡ್‌ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದು, ಈ ಚಿತ್ರದಲ್ಲಿ ಅಜಯ್‌ ದೇವಗನ್‌ ಜೊತೆ ನಟಿಸುತ್ತಿದ್ದಾರೆ. ಕೀರ್ತಿ ಸುರೇಶ್‌ ಅವರ ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಕೀರ್ತಿ ಅವರು ಯಾವುದಾದರೂ ದೊಡ್ಡ ರೋಗದಿಂದ ಬಳಲುತ್ತಿದ್ದಾರೆಯೇ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT