ಶನಿವಾರ, ಅಕ್ಟೋಬರ್ 19, 2019
22 °C

ರಾನಾ ದಗ್ಗುಬಾಟಿ ಆಹ್ವಾನ ತಿರಸ್ಕರಿಸಿದ ‘ಮಹಾನಟಿ’ ಕೀರ್ತಿ ಸುರೇಶ್‌

Published:
Updated:

ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್‌ ಸದ್ಯ ಹಿಂದಿಯ ‘ಮೈದಾನ್‌’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಈ ನಟಿ ರಾನಾ ದಗ್ಗುಬಾಟಿ ನಿರ್ಮಾಣ ಮಾಡುತ್ತಿರುವ, ಕೊರಿಯನ್‌ ಚಿತ್ರದ ರಿಮೇಕ್‌ನಲ್ಲಿ ನಟಿಸುವ ಅವಕಾಶವನ್ನು ನಿರಾಕರಿಸಿರುವುದು ಸುದ್ದಿಯಾಗಿದೆ.

ದಕ್ಷಿಣ ಭಾರತದಲ್ಲಿ ಪ್ರಮುಖ ನಾಯಕಿಯರಲ್ಲಿ ಕೀರ್ತಿ ಸುರೇಶ್‌ ಹೆಸರು ಮೊದಲಿದೆ. ಈಚೆಗೆ ಮಹಾನಟಿ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ಪಡೆದ ನಟಿಯ ಕೈಯಲ್ಲಿ ತಮಿಳು ಹಾಗೂ ತೆಲುಗು ಭಾಷೆಯ ಅನೇಕ ಸಿನಿಮಾಗಳಿವೆ. ಹಾಗಾಗಿ ರಾನಾ ದಗ್ಗುಬಾಟಿ ನಿರ್ಮಾಣದ ಹೊಸ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಕೀರ್ತಿ ಸುರೇಶ್‌ ಹೇಳಿದ್ದಾರೆನ್ನಲಾಗಿದೆ. ‘ರಾನಾ ಕೊರಿಯನ್‌ ಸಿನಿಮಾವನ್ನು ರಿಮೇಕ್‌ ಮಾಡುತ್ತಿದ್ದು, ಪ್ರಮುಖ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸುವಂತೆ ಕೀರ್ತಿ ಅವರನ್ನು ಕೇಳಿಕೊಂಡಿದ್ದರು. ಆದರೆ ಸಿನಿಮಾ ಡೇಟ್ಸ್‌ ಹೊಂದಾಣಿಕೆಯಾಗಲ್ಲ ಎಂದು ಕೀರ್ತಿ ತಿಳಿಸಿದ್ದಾರೆ. 

ಕೀರ್ತಿ ಸುರೇಶ್‌, ಮೋಹನ್‌ಲಾಲ್‌ ಅವರ ಮಹಾತ್ವಾಕಾಂಕ್ಷೆಯ ಸಿನಿಮಾ ‘ಅರಬಿ ಕಡಲಿಂಟೆ ಸಿಂಹಮ್‌’ ಹಾಗೂ ತೆಲುಗಿನ ‘ಮಿಸ್‌ ಇಂಡಿಯಾ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. 

ರಾನಾ ಈಗಾಗಲೇ ಕೊರಿಯನ್‌ ಚಿತ್ರದ ರಿಮೇಕ್‌ ಹಕ್ಕನ್ನು ಪಡೆದುಕೊಂಡಿದ್ದು, ಇದು ಡ್ರಗ್‌ ಮಾಫಿಯಾಕ್ಕೆ ಸಂಬಂಧಿಸಿದ ಚಿತ್ರವಾಗಿದೆ. ಕೀರ್ತಿ ಸುರೇಶ್‌ ನಿರಾಕರಿಸಿದ್ದರಿಂದ ಮತ್ತೊಬ್ಬ ನಟಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಚಿತ್ರವನ್ನು ನಂದಿನಿ ರೆಡ್ಡಿ ನಿರ್ದೇಶನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Post Comments (+)