ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರಂ 2’ನಲ್ಲಿ ಕೀರ್ತಿ ಸುರೇಶ್ ನಟಿಸಲ್ಲ

Last Updated 25 ಜೂನ್ 2020, 15:23 IST
ಅಕ್ಷರ ಗಾತ್ರ

2017ರ ಕಾಲಿವುಡ್‌ನ ಹಿಟ್‌ ಚಿತ್ರ ‘ಆರಂ’ ಸೀಕ್ವೆಲ್‌ನಲ್ಲಿನಟಿ ಕೀರ್ತಿ ಸುರೇಶ್‌ ನಟಿಸಲಿದ್ದಾರೆ ಎಂಬ ಗಾಳಿಸುದ್ದಿಗಳು ಕೆಲದಿನಗಳಿಂದ ಹರಿದಾಡಿತ್ತು. ಆದರೆ, ‘ಆರಂ 2’ನಲ್ಲಿ ಕೀರ್ತಿ ಸುರೇಶ್‌ ನಟಿಸಲ್ಲ ಎಂದು ಚಿತ್ರದ ನಿರ್ದೇಶಕ ಗೋಪಿ ನಾಯ್ನರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ‘ನಯನತಾರಾ ನಟಿಸುವುದಾದರೆ ಮಾತ್ರ ನಾನು ಆರಂ 2 ಮಾಡುತ್ತೇನೆ’ ಎಂದಿದ್ದಾರೆ.

ಸದ್ಯ ಗೋಪಿ ನಾಯ್ನರ್‌ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದು ಆ ಹೊಸ ಚಿತ್ರದ ಕೆಲಸಗಳು ಮುಂದೂಡಿಕೆಯಾಗಿದೆಯಂತೆ.

‘ಪೆಂಗ್ವಿನ್’‌ ಚಿತ್ರದ ಬಿಡುಗಡೆ ಸಮಯದಲ್ಲಿ ಕೀರ್ತಿ ಸುರೇಶ್‌ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಅದು ‘ಆರಂ’ ಚಿತ್ರದ ಮುಂದುವರಿದ ಭಾಗ. ನಯನತಾರಾ ಬೇರೆ ಸಿನಿಮಾದಲ್ಲಿ ಒಪ್ಪಿಕೊಂಡಿರುವುದರಿಂದ, ಡೇಟ್ಸ್‌ ವಿಚಾರದಲ್ಲಿ ಹೊಂದಾಣಿಕೆಯಾಗದಿದ್ದರಿಂದಆ ಪಾತ್ರ ಕೀರ್ತಿ ಸುರೇಶ್‌ ಪಾಲಾಗಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಈ ಎಲ್ಲಾ ಸುದ್ದಿಗಳನ್ನು ಗೋಪಿ ನಾಯ್ನರ್‌ ಸಾರಾಸಾಗಟವಾಗಿ ತಳ್ಳಿ ಹಾಕಿ, ‘ನಯನತಾರಾ ಇದ್ದರಷ್ಟೇ ಆರಂ 2’ ಎಂದಿದ್ದಾರೆ.

‘ಈಗ ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ನನ್ನ ಎಲ್ಲಾ ಪ್ರಾಜೆಕ್ಟ್‌ ಸ್ಥಗಿತಗೊಂಡಿವೆ. ಇದು ಯಾವಾಗ ಸಹಜ ಸ್ಥಿತಿಗೆ ಬರುತ್ತದೋ ಗೊತ್ತಿಲ್ಲ. ಹಾಗಾಗಿ ‘ಆರಂ 2’ ಸಿನಿಮಾ ಆರಂಭದ ಬಗ್ಗೆಏನೂ ಹೇಳಲಾರೆ. ಆದರೆ ಇಂತಹ ಗಾಳಿಸುದ್ದಿಗಳಿಂದ ಮನಸ್ಸಿಗೆ ನೋವಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

2017ರಲ್ಲಿ ಬಿಡುಗಡೆಯಾಗಿರುವ ತಮಿಳು ಚಿತ್ರ ‘ಆರಂ’ನಲ್ಲಿ ದಕ್ಷ ಜಿಲ್ಲಾಧಿಕಾರಿ ಪಾತ್ರದಲ್ಲಿ ನಯನತಾರಾ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT