ಭಾನುವಾರ, ಮೇ 29, 2022
21 °C

KGF: 'ಸಲಾಂ ರಾಕಿ ಭಾಯ್' ಹಾಡು ಬಿಡುಗಡೆ ಮಾಡಿದ ಹೊಂಬಾಳೆ ಪ್ರೊಡಕ್ಷನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 1 ರಾಜ್ಯ ಮಾತ್ರವಲ್ಲದೆ ದೇಶದಾತ್ಯಂತ ಗಮನ ಸೆಳೆದ ಸಿನಿಮಾವಾಗಿತ್ತು. ದಕ್ಷಿಣ ಭಾರತದಲ್ಲಿ ಅದು ಮಾಡಿದ ಅಬ್ಬರ ನಮ್ಮೆಲ್ಲರಿಗೂ ಗೊತ್ತಿದೆ.

ಕೆಜಿಎಫ್‌ ಚಾಪ್ಟರ್‌–1 ಬಳಿಕ ಇದೀಗ  ಪಾರ್ಟ್ 2 ಮೂಲಕ ಅದೇ ಅಬ್ಬರ ಮುಂದುವರಿಸುವುದಕ್ಕೆ ರಾಕಿ ಭಾಯ್ ಸಜ್ಜಾಗಿದ್ದಾರೆ. ಅದಕ್ಕೆ ಮುನ್ನಡಿಯಾಗಿ ಹೊಂಬಾಳೆ ಪ್ರೊಡಕ್ಷನ್ 'ಸಲಾಂ ರಾಕಿ ಭಾಯ್ ವಿಡಿಯೊ ಸಾಂಗ್' ಬಿಡುಗಡೆ ಮಾಡಿದೆ. 

ಡಿಸೆಂಬರ್‌ 13ರಂದು ಬಿಡುಗಡೆಯಾದ ಈ ಹಾಡನ್ನು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

'ತಡೆಯೋಕೆ ಇವನನ್ನ ತರಬೇಕು ಎಲ್ಲಿಂದ ಸೈನ್ಯಾನ? ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ? ಸಲಾಮ್ ರಾಕಿ ಭಾಯ್' ಎಂಬ ಅಡಿಬರಹದೊಂದಿಗೆ ವಿಡಿಯೊ ಸಾಂಗ್ ಕುರಿತು ಹೊಂಬಾಳೆ ಪ್ರೊಡಕ್ಷನ್ ಕೂ ಮಾಡಿದೆ.   

ವಿಡಿಯೋದ ಕೊನೆಯಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ತಿಳಿಸಲಾಗಿದ್ದು, ಮುಂದಿನ ವರ್ಷ ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್-2 ಸಿನಿಮಾ ಎಲ್ಲೆಡೆ ತೆರೆಕಾಣಲಿದೆ. 

ಓದಿ: 

ಇತ್ತೀಚೆಗಷ್ಟೇ ಕೆಜಿಎಪ್​ ನಿರ್ದೇಶಕ ಪ್ರಶಾಂತ್ ನೀಲ್ ಅವರು ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್​ ನಟ ಸಂಜಯ್​ದತ್​ ಅವರ ಡಬ್ಬಿಂಗ್ ಅನ್ನು ಮುಕ್ತಾಯ ಮಾಡಿದ್ದಾರೆ.

ಓದಿ:  

 ಈಗಾಗಲೇ ಎಲ್ಲಾ ಭಾಷೆಗಳ ಡಬ್ಬಿಂಗ್ ಕೆಲಸ ಮುಕ್ತಾಯಗೊಂಡಿದೆ ಎಂದು ಪ್ರಶಾಂತ್‌ ನೀಲ್‌ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು