ಶುಕ್ರವಾರ, ಅಕ್ಟೋಬರ್ 23, 2020
28 °C

ಕೆಜಿಎಫ್‌ ಚಾಪ್ಟರ್‌ -2: ‘ಅಧೀರ’ ರೆಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕೆಜಿಎಫ್‌ ಚಾಪ್ಟರ್‌ -2’ನಲ್ಲಿ  ಕಾಣಿಸಿಕೊಳ್ಳಲು ‘ಅಧೀರ’ ಭರ್ಜರಿಯಾಗಿ ಸಜ್ಜಾಗಿದ್ದಾನೆ. 

ಬಾಲಿವುಡ್‌ ನಟ ಸಂಜಯ್‌ ದತ್‌ ಅವರಿಗೆ ಈ ಚಿತ್ರದಲ್ಲಿ ಅಧೀರನ ಪಾತ್ರ. ಅದೇ ಹಳೆಯ ಸ್ಟೈಲ್‌, ಕಟ್ಟುಮಸ್ತು ಲುಕ್‌ನೊಂದಿಗೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜಯ್ ದತ್ 'ಅಧೀರ' ಪಾತ್ರಕ್ಕೆ ಸಜ್ಜಾಗುತ್ತಿದ್ದೇನೆ ಎಂದು ಫೋಟೊ ಟ್ವೀಟಿಸಿದ್ದಾರೆ.

ಕಪ್ಪು ಟೀಷರ್ಟ್‌, ಹಸಿರು-ಕಂದು ಮಿಶ್ರ ವರ್ಣದ ಜೀನ್ಸ್‌ ಪ್ಯಾಂಟ್‌, ತಂಪು ಕನ್ನಡಕ ಧರಿಸಿ ಕೈಕಟ್ಟಿ ನಿಂತಿರುವ ಫೋಟೋ ಇದು. ಅಭಿಮಾನಿಯೊಬ್ಬರು ಸಂಜಯ್‌ ದತ್‌ ಈಸ್‌ ಬ್ಯಾಕ್‌ (ಸಂಜಯ್‌ ದತ್‌ ಮತ್ತೆ ಹಿಂತಿರುಗಿದ್ದಾರೆ) ಎಂದು ಬರೆದುಕೊಂಡಿದ್ದಾರೆ.

ಕೇಶ ವಿನ್ಯಾಸಕ ಅಲೀಂ ಅವರು ಈ ಚಿತ್ರಕ್ಕಾಗಿ ದತ್‌ ಅವರ ಕೇಶ ವಿನ್ಯಾಸ ಮಾಡಿದ್ದಾರೆ. ಈ ಚಿತ್ರ ತಂಡದ ಜೊತೆ ಇರುವುದು ನನಗೂ ಖುಷಿ ತಂದಿದೆ ಎಂದು ದತ್‌ ಹೇಳಿದ್ದಾರೆ. 

‘ಅಧೀರ’ನ ಕ್ರೂರತೆ ಚಿತ್ರದ ಈ ಭಾಗದಲ್ಲೂ ಮುಂದುವರಿಯುತ್ತದೆ ಎಂದು ಚಿತ್ರತಂಡ ಹರಿಯಬಿಟ್ಟಿರುವ ವಿಡಿಯೋದಲ್ಲಿ ಹೇಳಲಾಗಿದೆ. 

ಯಶ್‌ ನಾಯಕ ನಟನಾಗಿರುವ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು ಜನವರಿ ತಿಂಗಳ ಮಕರ ಸಂಕ್ರಾಂತಿ ವೇಳೆಗೆ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು