ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ ಚಾಪ್ಟರ್‌ –2: ಟಿವಿ ಪ್ರಸಾರದ ಹಕ್ಕನ್ನು ಪಡೆದ ಝೀ ವಾಹಿನಿ

Last Updated 21 ಆಗಸ್ಟ್ 2021, 9:56 IST
ಅಕ್ಷರ ಗಾತ್ರ

ಹೊಂಬಾಳೆ ಫಿಲ್ಮ್ಸ್‌ನ ಕೆಜಿಎಫ್‌ ಚಾಪ್ಟರ್‌ –2 ಚಿತ್ರದ ಟಿವಿ ಪ್ರಸಾರದ ಹಕ್ಕನ್ನು ಝೀ ವಾಹಿನಿ ಪಡೆದಿದೆ. ಝೀ ಸಮೂಹದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಾನೆಲ್‌ಗಳಲ್ಲಿ ಚಿತ್ರವನ್ನು ಪ್ರಸಾರ ಮಾಡಲು ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕ ವಿಜಯ ಕಿರಗಂದೂರು ಮತ್ತು ವಾಹಿನಿ ನಡುವೆ ಒಪ್ಪಂದವಾಗಿದೆ.

ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಬಳಿಕ ನಿರ್ದಿಷ್ಟ ಅವಧಿಯಲ್ಲಿ ಝೀ ಟಿವಿ ವಾಹಿನಿಗಳಲ್ಲಿಕೆಜಿಎಫ್‌ ಚಾಪ್ಟರ್‌ –2 ಪ್ರಸಾರವಾಗಲಿದೆ.

ಝೀ ಎಂಟರ್‌ಪ್ರೈಸಸ್ ಲಿಮಿಟೆಡ್(ಜೀಲ್)ನ ಇ.ವಿ.ಪಿ ಆ್ಯಂಡ್‌ ಕ್ಲಸ್ಟರ್ ಹೆಡ್ ಸೌತ್ ಬ್ಯುಸಿನೆಸ್ ಸಿಜು ಪ್ರಭಾಕರನ್ ಮಾತನಾಡಿ, ‘ಕೆಜಿಎಫ್ ಚಾಪ್ಟರ್ 2 ಟಿ.ವಿ. ಪ್ರಸಾರ ಹಕ್ಕುಗಳನ್ನು ದಕ್ಷಿಣದ ಎಲ್ಲ 4 ಭಾಷೆಗಳಲ್ಲೂ ಪಡೆದುಕೊಳ್ಳುವ ಮೂಲಕ ದೇಶದ ಅತ್ಯಂತ ನಿರೀಕ್ಷೆಯ ಚಲನಚಿತ್ರವನ್ನು ದಕ್ಷಿಣದ ಪ್ರತಿ ತೆರೆಗೆ ತಲುಪಿಸಲು ನಾವು ಸಂತೋಷಪಡುತ್ತೇವೆ. ನಮ್ಮ ವೀಕ್ಷಕರಿಗೆ ಅವರ ಮನೆಗಳ ಅನುಕೂಲ ಮತ್ತು ಸುರಕ್ಷತೆಯ ವಾತಾವರಣದಲ್ಲಿ ಮನರಂಜನೆ ಒದಗಿಸುವ ನಮ್ಮ ಭರವಸೆಯನ್ನು ಈಡೇರಿಸಲು ನಾವು ಕೈಗೊಂಡ ಮತ್ತೊಂದು ಕ್ರಮ ಇದಾಗಿದೆ. ಈ ಸಹಯೋಗದ ಮೂಲಕ ವಿಶ್ವದಾದ್ಯಂತ ವೈವಿಧ್ಯಮಯ ಪ್ರೇಕ್ಷಕರನ್ನು ರಂಜಿಸುಹುದು. ವಾಹಿನಿ ಮತ್ತು ನಮ್ಮ ವೀಕ್ಷಕರು ಪರಸ್ಪರ ಮತ್ತಷ್ಟು ಹತ್ತಿರವಾಗಲಿದ್ದಾರೆ’ ಎಂದರು.

ಜೀ ಕನ್ನಡ ಮತ್ತು ಜೀ ಪಿಚ್ಚರ್ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಪ್ರತಿಕ್ರಿಯಿಸಿ, ‘ದೇಶದ ಅತ್ಯಂತ ನಿರೀಕ್ಷೆಯ ಚಲನಚಿತ್ರದೊಂದಿಗೆ ನಮ್ಮ ಸಹಯೋಗಕ್ಕೆ ಬಹಳ ಸಂತೋಷವಾಗಿದೆ. ಹೊಂಬಾಳೆ ಫಿಲ್ಮ್ಸ್ ಅವರ ಬಲವಾದ ಕಂಟೆಂಟ್ ಸೃಷ್ಟಿ ಮತ್ತು ಸಾಮರ್ಥ್ಯದಿಂದ ಅದು ರಾಷ್ಟ್ರೀಯ ಬ್ರಾಂಡ್ ಆಗಿ ಬೆಳೆದಿದೆ. ದಕ್ಷಿಣದ ಎಲ್ಲ 4 ಭಾಷೆಗಳಲ್ಲಿ ಕೆಜಿಎಫ್-2 ಟಿ.ವಿ. ಹಕ್ಕುಗಳನ್ನು ಪಡೆಯುವುದು ನಮ್ಮ ಬದ್ಧತೆಗೆ ಮತ್ತೊಂದು ಸಾಕ್ಷಿಯಾಗಿದೆ’ ಎಂದರು.

ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿ, ‘ನಮ್ಮ ಮೇರುಕೃತಿ ಕೆಜಿಎಫ್ ಚಾಪ್ಟರ್–2 ವನ್ನು ಝೀ ಸಹಯೋಗದ ಮೂಲಕ ನಾವು ಅಪಾರ ವೀಕ್ಷಕರಿಗೆ ತಲುಪಿಸುವ ಭರವಸೆ ಹೊಂದಿದ್ದೇವೆ. ಹೊಂಬಾಳೆ ಫಿಲ್ಮ್ಸ್ ನಲ್ಲಿ ನಾವು ನಮ್ಮ ಕನ್ನಡ ಬೇರುಗಳಿಗೆ ಅಂಟಿಕೊಂಡಿರುವ ಆದರೆ ಜಾಗತಿಕ ಪ್ರೇಕ್ಷಕರಿಗೆ ಪೂರೈಸುವ ಮನರಂಜನೆಯ ಮತ್ತು ಶಕ್ತಿಯುತ ಕಂಟೆಂಟ್ ನಿರ್ಮಿಸಲು ಶ್ರಮಿಸುತ್ತೇವೆ’ ಎಂದರು.

ಯಶ್ ನಟನೆಯು ಈ ಚಿತ್ರವು ಸಂಜಯ್ ದತ್, ಶ್ರೀನಿಧಿ ಶೆಟ್ಟಿ ಮತ್ತು ರವೀನಾ ಟಂಡನ್ ಅವರನ್ನು ಮುಖ್ಯ ಪಾತ್ರಗಳಲ್ಲಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT