ಬಾಕ್ಸ್‌ ಆಫೀಸಿನಲ್ಲಿ ಕೆಜಿಎಫ್‌ ಚಿನ್ನದ ಹೆಜ್ಜೆ!

7

ಬಾಕ್ಸ್‌ ಆಫೀಸಿನಲ್ಲಿ ಕೆಜಿಎಫ್‌ ಚಿನ್ನದ ಹೆಜ್ಜೆ!

Published:
Updated:

ಬೆಂಗಳೂರು: ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಪಂಚಭಾಷಾ ಚಿತ್ರ ಕೆಜಿಎಫ್‌ ಇದುವರೆಗೆ ಒಟ್ಟು ₹ 198.5 ಕೋಟಿ ಹಣ ಬಾಚಿಕೊಂಡಿದೆಯಂತೆ! ಹೀಗೆಂದು ಇಂಡಿಯಾ ಟುಡೆ ವರದಿ ಮಾಡಿದೆ.

ಕೆಜಿಎಫ್‌ ಚಿತ್ರ ಬಿಡುಗಡೆ ಆದ ನಂತರ ಯಶ್ ಹಾಗೂ ಈ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಂಪು ಕಣ್ಣು ಬೀರಿದ್ದರೂ, ಸಿನಿಮಾ ಪ್ರೇಮಿಗಳು ಮಾತ್ರ ಕೆಜಿಎಫ್ ಪ್ರದರ್ಶನ ಕಾಣುತ್ತಿರುವ ತೆರೆಯ ಮೇಲೆ ಪ್ರೀತಿಯ ಮಳೆ ಸುರಿಸುತ್ತಿದ್ದಾರೆ. ಪರಿಣಾಮವಾಗಿ ಚಿತ್ರ ಇಷ್ಟು ದೊಡ್ಡ ಮೊತ್ತವನ್ನು ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ!‌

ಕೆಜಿಎಫ್ ಚಿತ್ರದ ಬಾಕ್ಸ್‌ ಆಫೀಸ್‌ ಸಾಧನೆ ಕುರಿತು ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ಯು ‘ಹೊಂಬಾಳೆ ಫಿಲಂಸ್’ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಸಂಸ್ಥೆಯ ಪ್ರತಿನಿಧಿಗಳು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಉತ್ತಮ ಸಾಧನೆ ತೋರಿದ ‘ಚಂದನವನ’ದ ಮೊದಲ ಸಿನಿಮಾ ಎಂಬ ಖ್ಯಾತಿಗೂ ಕೆಜಿಎಫ್‌ ಪಾತ್ರವಾಗಿದೆ. ಚಿತ್ರದ ಹಿಂದಿ ಆವೃತ್ತಿಯು ₹ 32.95 ಕೋಟಿ ಸಂಗ್ರಹಿಸಿದೆ ಎಂದು ಬ್ಯುಸಿನೆಸ್ ಟುಡೆ ವರದಿ ಮಾಡಿದೆ.

Tags: 

ಬರಹ ಇಷ್ಟವಾಯಿತೆ?

 • 208

  Happy
 • 21

  Amused
 • 5

  Sad
 • 3

  Frustrated
 • 12

  Angry

Comments:

0 comments

Write the first review for this !