ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಖೇಲ್’ ಚಿತ್ರದ ಆಡಿಯೊ ಬಿಡುಗಡೆ

Last Updated 17 ಡಿಸೆಂಬರ್ 2020, 11:34 IST
ಅಕ್ಷರ ಗಾತ್ರ

ಸಿನಿಮಾ ಹೆಸರು ‘ಖೇಲ್’. ಶೀರ್ಷಿಕೆಗೆ ಸೂಕ್ತ ಎನಿಸುವಂತೆ ಇಲ್ಲಿ ಆಟವೇ ಪ್ರಧಾನ. ಹಾಗಂತ ಆ ಆಟ ಯಾವುದು? ಕಳ್ಳ ಯಾರು? ಹೀರೋ ಯಾರು? ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಎಂದು ಕುತೂಹಲಕ್ಕೆ ಒಗ್ಗರಣೆ ಹಾಕಿತು ಚಿತ್ರತಂಡ.

ಯೋಗಿತ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಸತೀಶ್ ಎಚ್. (ಮಾರ್ಕೆಟ್) ನಿರ್ಮಾಣ ಮಾಡಿರುವ ಖೇಲ್ ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಸಹ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

ಚಿತ್ರಕ್ಕೆ ರಾಜೀವ್‌ ನಾಯಕ್ ನಿರ್ದೇಶನವಿದ್ದು, ಸತೀಶ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಒಟ್ಟು 45 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು ಚಿತ್ರದ ಬಹುತೇಕ ಭಾಗವನ್ನು ಚಿಂತಾಮಣಿಯಲ್ಲಿ ಚಿತ್ರೀಕರಿಸಲಾಗಿದೆ. ಕೈವಾರ, ಕಗತಿ, ಕೋಲಾರ ಸುತ್ತಮುತ್ತಲೂ ಚಿತ್ರೀಕರಣ ನಡೆದಿದೆ. ಗಣೇಶ್ ಭಾಗವತ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಹೊಸ ನಟ ಅರವಿಂದ್ ಈ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದ ನಾಯಕಿ ಹಿಮಾ ಮೋಹನ್ ಈಗಾಗಲೇ ಆರು ಸಿನಿಮಾಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಬಿಡುಗಡೆಯಾಗಲಿರುವ ಎರಡನೇ ಚಿತ್ರವಿದು. ಎರಡು ಶೇಡ್‌ಗಳಲ್ಲಿ ಹಿಮಾ ಕಾಣಿಸಿಕೊಂಡಿದ್ದು ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಇನ್ನು ‘ಐರಾವತ’, ‘ಹೊಂಬಣ್ಣ’, ‘ಚಿ ತು ಸಂಘ’, ‘ಡೇಂಜರ್ ಝೋನ್’ ಸೇರಿ 60ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಪೃಥ್ವಿ ಯಾದವ್ ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ದಿಲೀಪ್ ಪಿರಿಲಾ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಚಂದ್ರ ಯಾದವ್, ಗೌತಮ್ ರಾಜ್, ಪ್ರೆಸ್ ರವಿ, ಪವಿತ್ರ, ಸಂತೋಷ್, ರಾಜೇಶ್, ಮಹೇಶ್ ಮುಂತಾದವರು ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT