ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆ ಸಿಗದ ಕಿಯಾರ

Last Updated 27 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನೀಳಕಾಯ, ಹಾಲು ಬಿಳುಪಿನ ಮೈಬಣ್ಣ, ಸುಂದರ ಮೈಮಾಟದ ಬೆಡಗಿ ಕಿಯಾರ ಅಡ್ವಾನಿ ಬಾಲಿವುಡ್‌ನ ‘ಫಗ್ಲಿ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇರಿಸಿದವರು. ‘ಎಂ. ಎಸ್‌. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು.

‘ಭರತ್ ಅನೆ ನೇನು’ ಸಿನಿಮಾದ ವಸುಮತಿ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಮನ ಗೆದ್ದ ಈ ಬೆಡಗಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ‘ಲಸ್ಟ್‌ ಸ್ಟೋರಿ’ಯಲ್ಲೂ ಅಭಿನಯಿಸಿದ್ದರು. ನಂತರ ತೆಲುಗಿನ ‘ಅರ್ಜುನ್ ರೆಡ್ಡಿ’ ಸಿನಿಮಾದ ಹಿಂದಿ ರಿಮೇಕ್ ಕಬೀರ್ ಸಿಂಗ್‌ನಲ್ಲಿ ನಾಯಕಿಯಾಗಿದ್ದರು. ಕಬೀರ್ ಸಿಂಗ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಭಾರತದ ಅತೀ ಹೆಚ್ಚು ಗಳಿಕೆಯ ಸಿನಿಮಾಗಳಲ್ಲಿ ಒಂದಾಗಿದ್ದು ಈಗ ಹಳೇ ವಿಷಯ.

ಈ ಮೋಹಕ ನಟಿ ಸದ್ಯದ ಅತ್ಯಂತ ಬ್ಯುಸಿ ನಟಿಯಲ್ಲಿ ಒಬ್ಬರು. ಇವರ ಕೈಯಲ್ಲಿ ಈಗ ಅನೇಕ ಸಿನಿಮಾಗಳಿರುವುದು ಸುಳ್ಳಲ್ಲ. ಅಕ್ಷಯ್ ಕುಮಾರ್, ದಿಲ್‌ಜಿತ್‌ ಹಾಗೂ ಕರೀನಾ ನಟನೆಯ ‘ಗುಡ್‌ ನ್ಯೂಸ್’ ಸಿನಿಮಾದಲ್ಲಿ ಕಿಯಾರ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅದರೊಂದಿಗೆ ಭೋಲ್ ಭುಲೈಯ್ಯ 2, ಲಕ್ಷ್ಮೀ ಬಾಂಬ್, ಇಂದೂ ಕಿ ಜವಾಮಿ ಸೇರಿದಂತೆ ಇನ್ನೂ ಅನೇಕ ಚಿತ್ರಗಳು ಆಕೆಯ ಮಡಿಲಿನಲ್ಲಿವೆ.

ಕಬೀರ್ ಸಿಂಗ್ ಸಿನಿಮಾದ ಯಶಸ್ಸು ಆಕೆಯನ್ನು ಇಷ್ಟು ಬ್ಯುಸಿಯಾಗಿರುವಂತೆ ಮಾಡಿರುವುದು ಸುಳ್ಳಲ್ಲ. ಇಷ್ಟೊಂದು ಪ್ರಾಜೆಕ್ಟ್‌ಗಳು ಆಕೆಯ ಕೈಯಲ್ಲಿರುವ ಕಾರಣದಿಂದ ಆಕೆ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಷ್ಟವಾಗಿದೆ. ಅದರೊಂದಿಗೆ ಅವರು ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರೆ.

ಈ ಎಲ್ಲಾ ಸುದ್ದಿಯೊಂದಿಗೆ ಕಿಯಾರ ತೆಲುಗಿನ ಸ್ಟಾರ್ ನಟ ವರುಣ್ ತೇಜ್ ಅವರೊಂದಿಗೆ ಕ್ರೀಡಾಧಾರಿತ ಸಿನಿಮಾವೊಂದರಲ್ಲಿ ನಟಿಸುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ ಈ ಸುಂದರಿಯ ಬ್ಯುಸಿ ಶೆಡ್ಯೂಲ್ ಹಾಗೂ ಹೆಚ್ಚಿದ ಸಂಭಾವನೆಯ ಕಾರಣದಿಂದ ಅವರ ಜಾಗಕ್ಕೆ ಬೇರೆ ನಟಿಯನ್ನು ಬದಲಿಸುವ ಯೋಚನೆ ಮಾಡುತ್ತಿದ್ದಾರೆ. ಆದರೆ ಸದ್ಯಕ್ಕೆ ಕಿಯಾರ ಈ ಚಿತ್ರತಂಡದ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ.

ಈ ನಡುವೆ ಇಸ್ಮಾರ್ಟ್ ಶಂಕರ್ ಸಿನಿಮಾದ ನಾಯಕಿಯರಾದ ನಭಾ ನಟೇಶ್ ಹಾಗೂ ನಿಧಿ ಅಗರವಾಲ್ ಈ ಸಿನಿಮಾಕ್ಕೆ ನಾಯಕಿಯರಾಗಲಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ವರುಣ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT