'ದೇವರು ನನಗೆ ಸಿದ್ಧಾರ್ಥ್ ಮಲ್ಹೋತ್ರಾ ನಂತಹ ಒಳ್ಳೆಯ ಜೀವನ ಸಂಗಾತಿಯನ್ನು ನೀಡಿದ್ದಾರೆ' ಎಂದು ನಟಿ ಕಿಯಾರ ಅಡ್ವಾಣಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ರಾಜ್ ಶಮಾನಿ ಅವರು ನಡೆಸಿಕೊಡುವ ಸಂದರ್ಶನದಲ್ಲಿ ಮಾತನಾಡಿರುವ ಕಿಯಾರ, ‘ನನ್ನ ಮಗಳು ಸ್ವತಂತ್ರವಾಗಿ ಅವಳ ಇಚ್ಛೆಯಂತೆ ಬದುಕಬೇಕು. ಅವಳ ಮೇಲೆ ಯಾವ ಒತ್ತಡವನ್ನೂ ಹಾಕುವುದಿಲ್ಲ. ಅವಳಿಗೆ ಏನು ಇಷ್ಟವೋ ಅದನ್ನೇ ಮಾಡಲಿ. ಎಲ್ಲವೂ ಅವಳ ಆಯ್ಕೆಗೆ ಬಿಡುತ್ತೇನೆ. ಯಾವುದೇ ನಿರ್ಧಾರವಿರಲಿ ಅದರಿಂದ ನಾವು ಮಾಡಿದ ತಪ್ಪುಗಳು ನಮಗೆ ಅರಿವಾಗುವಂತಿರಬೇಕು’ ಎಂದಿದ್ದಾರೆ.

ಮಾತು ಮುಂದುವರಿಸಿದ ಅವರು..‘ಯಾರು ಯಾರ ಜೊತೆ ಡೇಟ್ ಮಾಡುತ್ತಾರೋ ಅವರನ್ನೇ ವಿವಾಹ ಆಗುತ್ತಾರೆ ಎಂದೇ ಭಾವಿಸಿದ್ದೆ. ಆದರೆ ಜೀವನ ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ಸಿದ್ಧಾರ್ಥ್ ಮಲ್ಹೋತ್ರಾ ನಂತಹ ಒಳ್ಳೆಯ ಹುಡುಗ ನನಗೆ ಸಿಕ್ಕಿದ್ದಾರೆ ಈ ವಿಷಯಕ್ಕೆ ದೇವರಿಗೆ ಕೃತಜ್ಞತೆ ತಿಳಿಸುತ್ತೇನೆ. ಅವರ ಜೊತೆ ನಾನು ಸಂತೋಷದಿಂದ ಜೀವನ ಮಾಡುತ್ತಿದ್ದೇನೆ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸಂಬಂಧವೂ ಒಂದೊಂದು ಪಾಠವನ್ನು ಕಲಿಸುತ್ತದೆ. ಆ ಪಾಠಗಳೇ ಮುಂದಿನ ಜೀವನಕ್ಕೆ ಮಾರ್ಗದರ್ಶನವಾಗಿರುತ್ತದೆ‘ ಎಂದು ಹೇಳಿಕೊಂಡಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2025ರಲ್ಲಿ ಈ ಜೋಡಿಗೆ ಹೆಣ್ಣು ಮಗು ಜನಿಸಿದ್ದು. ಸರಾಯಾ ಎಂದು ಹೆಸರಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.