ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ʼಬೇರೆಯವರನ್ನು ಚೆನ್ನಾಗಿ ನೋಡಿಕೊಳ್ಳುವ ಭರದಲ್ಲಿ ನನ್ನ ಆರೋಗ್ಯವನ್ನೇ ಮರೆತಿದ್ದೆ. ಆ ಸಂದರ್ಭದಲ್ಲಿ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರು ನನಗೆ ಬೆನ್ನೆಲುಬಾಗಿ ನಿಂತಿದ್ದರುʼ ಎಂದು ಭಾವುಕರಾಗಿದ್ದಾರೆ. ಸದ್ಯ, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಸಂದರ್ಶನದಲ್ಲಿ ಮಾತನಾಡಿರುವ ಅವರು, ʼನಾನು ತಾಯಿಯಾದ ಮೇಲೆ ಸಂಪೂರ್ಣ ಬದಲಾಗಿದ್ದೇನೆ. ಪ್ರತಿಯೊಬ್ಬರ ಜೀವನವೂ ಭಿನ್ನವಾಗಿರುತ್ತದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಬೇರೆ ಬೇರೆ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ನನ್ನ ಮಗು ಜನಿಸುವ ಮುನ್ನ ನಾನು ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದೆ. ಆದರೆ, ನಾನು ಯಾವುದಕ್ಕೂ ಹೆದರುವುದಿಲ್ಲ. ಜೀವನದಲ್ಲಿ ಆಕಸ್ಮಿಕವಾಗಿ ಬರುವ ಘಟನೆಗಳನ್ನು ತಡೆಯಲು ಆಗುವುದಿಲ್ಲ ಎಂಬುವುದು ಗೊತ್ತಾಗಿದೆʼ ಎಂದು ಹೇಳಿಕೊಂಡಿದ್ದಾರೆ.

ಏನೇ ಬಂದರೂ ನಾನು ಎದುರಿಸಿ ಜೀವಿಸಬೇಕು ಎಂದು ನನಗೆ ಅರ್ಥವಾಗಿದೆ. ಒಬ್ಬ ಮಹಿಳೆಗೆ ತಾಯ್ನತನದಿಂದ ಸಹಜ ಸ್ಥಿತಿಗೆ ಬರಲು ಕನಿಷ್ಠ 6 ತಿಂಗಳು ಬೇಕು. ಹೆಣ್ಣು ಮಕ್ಕಳು ತಮಗಾಗಿ ಒಂದಿಷ್ಟು ಸಮಯ ನೀಡಬೇಕು. ಆ ಸಮಯದಲ್ಲಿ ನನ್ನ ಪತಿ ನನಗೆ ಬೆನ್ನಲುಬಾಗಿ ನಿಂತಿದ್ದರುʼ ಎಂದು ಭಾವುಕರಾಗಿದ್ದಾರೆ. ಸದ್ಯ, ಕಿಯಾರಾ ಅಡ್ವಾಣಿ ಅವರು ಯಶ್ ಅವರ ಮುಂಬರುವ ʼಟಾಕ್ಸಿಕ್ʼ ಚಿತ್ರದಲ್ಲಿ ನಟಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.