ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಬಿಕಿನಿ ಚಿತ್ರ ಪೋಸ್ಟ್‌ ಮಾಡಿದ ಕಿಯಾರಾ: ಅಭಿಮಾನಿಗಳು ಕ್ಲೀನ್‌ ಬೌಲ್ಡ್‌!

Last Updated 30 ಮೇ 2021, 10:59 IST
ಅಕ್ಷರ ಗಾತ್ರ

ಬಾಲಿವುಡ್‌ ಬೆಡಗಿ ಕಿಯಾರಾ ಅಡ್ವಾಣಿ ಹಳೆಯ ಬಿಕಿನಿ ಚಿತ್ರವನ್ನು ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಶಿಷ್ಟ ಭಂಗಿಯ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ವರ್ಷದ ಆರಂಭದಲ್ಲಿ ಕಿಯಾರಾ ತನ್ನ ಗೆಳೆಯ ಸಿದ್ಧಾರ್ಥ್‌ ಮಲ್ಹೋತ್ರ ಜೊತೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಂಡರ್‌ ವಾಟರ್‌ನಲ್ಲಿ ತೆಗೆದ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ಭಾನುವಾರ ಮಧ್ಯಾಹ್ನ ಈ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ನೀರಿನಲ್ಲಿ ಡೈ ಮಾಡುತ್ತಿರುವ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಕಿಯಾರಾ ಬಾಲಿವುಡ್‌ನ ಬಹುಬೇಡಿಕೆ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಚಿತ್ರ ‘ಕಬೀರ್ ಸಿಂಗ್’. ಈ ಚಿತ್ರದ ಮೂಲಕ ಈಕೆ ಬಿಟೌನ್‌ನ ‘ಕ್ರೇಜಿ ಹೀರೊಯಿನ್’ ಎನ್ನಿಸಿಕೊಂಡಿದ್ದಾರೆ. ಸಿನಿಮಾದ ಜೊತೆ ಜೊತೆಗೆಯೇ ‘ಲಸ್ಟ್ ‌ಸ್ಟೋರಿ’, ‘ಗಿಲ್ಟಿ’ ವೆಬ್‌ ಸರಣಿಯಲ್ಲಿ ನಟಿಸುವ ಮೂಲಕ ಅಭಿಮಾನಿ ಬಳಗವನ್ನು ವೃದ್ಧಿಸಿಕೊಂಡಿದ್ದಾರೆ.

ಕಿಯಾರಾ ಇನ್‌ಸ್ಟಾ ಚಿತ್ರಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT