ಮಂಗಳವಾರ, ಆಗಸ್ಟ್ 20, 2019
24 °C

ಕಾಲಿವುಡ್‌ಗೆ ಕಿಯಾರ

Published:
Updated:
Prajavani

ತಮಿಳು ನಟ ವಿಜಯ್‌ ಅಭಿನಯದ ‘ದಳಪತಿ 64’ ಸಿನಿಮಾ ಘೋಷಣೆಯಾದಗಿನಿಂದಲೂ ಒಂದಲ್ಲ ಒಂದು ಕಾರಣಗಳಿಂದ ಸುದ್ದಿಯಲ್ಲಿದೆ. ‘ಈ ಸಿನಿಮಾದಲ್ಲಿ ವಿಜಯ್‌ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ, ಅವರ ಒಪ್ಪಿಗೆಗಾಗಿ ನಿರ್ದೇಶಕ ಲೋಕೆಶ್‌ ಕನಕರಾಜ್‌ ಕಾಯುತ್ತಿದ್ದಾರೆ’ ಎಂದೆಲ್ಲಾ ಸುದ್ದಿಗಳು ಹರಿದಾಡಿದ್ದವು. 

ಈಗ ಹೊಸ ಸುದ್ದಿ ಹೊರಬಿದ್ದಿದೆ. ನಾಯಕಿ ಸಾಲಿನಲ್ಲಿದ್ದ ರಶ್ಮಿಕಾ ಮಂದಣ್ಣ, ರಾಕುಲ್‌ ಪ್ರೀತ್‌ ಸಿಂಗ್‌, ರಾಶಿ ಖನ್ನಾ ಅವರನ್ನು ಬಿಟ್ಟು ಬಾಲಿವುಡ್‌ ನಟಿ ಕಿಯಾರ ಅಡ್ವಾಣಿ, ಈ ಚಿತ್ರದ ನಾಯಕಿಯಾಗುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರಂತೆ. 

ಈ ಸಿನಿಮಾದಲ್ಲಿ ಕಿಯಾರ, ವಿಜಯ್‌ ನಾಯಕಿಯಾಗಿ ನಟಿಸಲಿದ್ದಾರೆ. ಇದು ಮಾತುಕತೆ ಹಂತದಲ್ಲಿದೆ. ಒಂದು ವೇಳೆ ಕಿಯಾರ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರೆ, ಕಾಲಿವುಡ್‌ನಲ್ಲಿ ಅವರ ಅಭಿನಯದ ಚೊಚ್ಚಲ ಚಿತ್ರ 
ಇದಾಗಲಿದೆ. ಹಾಗೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಎರಡನೇ ಚಿತ್ರ. ಈ ಹಿಂದೆ ಮಹೇಶ್‌ ಬಾಬು ಅಭಿನಯದ ತೆಲುಗು ‘ಭರತ್‌ ಅನೆ ನೇನು’ ಸಿನಿಮಾದಲ್ಲಿ ನಟಿಸಿದ್ದರು. 

ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ರಾಶಿ ಖನ್ನಾ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬಂದಿತ್ತು. 

ಮಲೆಯಾಳಂನಲ್ಲಿ ಹವಾ ಸೃಷ್ಟಿಸಿದ್ದ ‘ಅಂಗಮಾಲಿ ಡೈರೀಸ್’ ಖ್ಯಾತಿಯ ಆಂಟೋನಿ ವರ್ಗೀಸ್  ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಚಿತ್ರಕ್ಕೆ ಕ್ಸೇವಿಯರ್‌ ಬ್ರಿಟ್ಟೊ ಬಂಡವಾಳ ಹೂಡಿದ್ದಾರೆ. ಅನಿರುದ್ಧ್‌ ರವಿಚಂದರ್‌ ಅವರ ಸಂಗೀತ ನಿರ್ದೇಶನ ಹಾಗೂ ಸತ್ಯನ್‌ ಸೂರ್ಯನ್‌ ಸಿನಿಮಾಟೋಗ್ರಾಫಿ ಹಾಗೂ ಫಿಲೊಮಿನಾ ರಾಜ್‌ ಸಂಕಲನ ಈ ಚಿತ್ರಕ್ಕಿದೆ.

Post Comments (+)