ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಸೇವಾ ಕೈಂಕರ್ಯ ಮುಂದುವರಿಸಿದ ಕಿಚ್ಚ ಸುದೀಪ್: ಮತ್ತೆ ನಾಲ್ಕು ಶಾಲೆ ದತ್ತು

Last Updated 10 ಆಗಸ್ಟ್ 2020, 7:56 IST
ಅಕ್ಷರ ಗಾತ್ರ

ನಟಕಿಚ್ಚ ಸುದೀಪ್‌ ತಮ್ಮ ಸಾಮಾಜಿಕ ಸೇವಾ ಕೈಂಕರ್ಯ ಮುಂದುವರಿಸಿದ್ದು, ಕಿಚ್ಚ ಸುದೀಪ್‌ ಚಾರಿಟಬಲ್ ಟ್ರಸ್ಟ್‌ನಿಂದ ಮತ್ತೆ ನಾಲ್ಕುಸರ್ಕಾರಿಶಾಲೆಗಳನ್ನು ಅಭಿವೃದ್ಧಿಪಡಿಸಲುದತ್ತುಸ್ವೀಕರಿಸಿದ್ದಾರೆ.

ಈಗ ಶಿವಮೊಗ್ಗ ಜಿಲ್ಲೆಯಸಾಗರ ತಾಲ್ಲೂಕಿನ ಆವಿಗೆ ಗ್ರಾಮದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಳಸಸಿ ಗ್ರಾಮದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಂ.ಎಲ್. ಹಳ್ಳಿಯಸರ್ಕಾರಿ ಪ್ರೌಢಶಾಲೆ ಹಾಗೂಎಸ್.ಎನ್. ನಗರದಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು ‘ಶಾಲೆಗಾಗಿ ನಾವು-ನೀವು ಯೋಜನೆ’ಯಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಅವರ ಸಮ್ಮುಖದಲ್ಲಿಟ್ರಸ್ಟ್ ದತ್ತು ಸ್ವೀಕರಿಸಿದೆ.

ಸರ್ಕಾರಿಶಾಲೆಯಲ್ಲಿ ಕಲಿಯುವ ಬಡಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕೆಂದ ಸುದೀಪ್‌ ಒತ್ತಾಸೆಯಂತೆ, ಈ ಶಾಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದರ ಭಾಗವಾಗಿ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದೆ.ಈ ಶಾಲೆಗಳಲ್ಲಿ ಶಿಕ್ಷಕರ ವೇತನ ಮತ್ತು ವಿದ್ಯಾರ್ಥಿಗಳ ವೇತನ ಹೊರತುಪಡಿಸಿ, ಶಾಲೆಯ ಅಭಿವೃದ್ಧಿ ಚಟುವಟಿಕೆಗಳ ಜವಾಬ್ದಾರಿಯನ್ನು ಈ ಟ್ರಸ್ಟ್ ನಿರ್ವಹಿಸಲಿದೆ.

ಆವಿಗೆಹಳ್ಳಿ ಸಾಗರದಿಂದ 49 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ಶಾಲೆ ಇರುವುದು ದಟ್ಟ ಕಾನನದ ನಡುವೆ. ಕಾಡಿನಲ್ಲಿ ವಾಸವಿರುವ ಗುಡ್ಡಗಾಡಿನ ಕುಣಬಿ ಜನಾಂಗದವರ ಮಕ್ಕಳಿಗಾಗಿ ಸರ್ಕಾರ ಶಾಲೆಯನ್ನು ಕಟ್ಟಿಸಿದೆ. ಶಾಲೆಗೆ ಮುಖ್ಯೋಪಾಧ್ಯಾಯರನ್ನೂ ನೇಮಿಸಿದೆ. ಆದರೆ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರೇ ಇಲ್ಲ. ಇಡೀ ಊರಿನಲ್ಲಿ ಹುಡುಕಿದರೂ ಸಿಗುವುದು ಮೂರೇ ಮೂರುಮಂದಿ ವಿದ್ಯಾವಂತರು. ಒಬ್ಬರು ಪದವಿ, ಇನ್ನಿಬ್ಬರು ಪಿಯುಸಿಯವರೆಗೆ ಓದಿದ್ದಾರೆ. ಈ ಮೂವರಲ್ಲಿ ಭಾಸ್ಕರ ಎಂಬಾತನೇ ಮಕ್ಕಳ ಪಾಲಿಗೆ ಕಾಯಂ ಟೀಚರ್. ಈ ಶಾಲೆಯಮಕ್ಕಳು ಪ್ರತಿ ನಿತ್ಯ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ನಡೆದು ಬರಬೇಕು. ಈ ವಿಷಯ ಗೊತ್ತಾಗಿದ್ದೇ ತಡ ಸುದೀಪ್‌ ತಮ್ಮ ಚಾರಿಟೆಬಲ್‌ ಟ್ರಸ್ಟ್‌ ಸದಸ್ಯರ ತಂಡವನ್ನು ಆವಿಗೆಹಳ್ಳಿಗೆಕಳುಹಿಸಿ, ಶಾಲೆಗೆ ಬೇಕಾದ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕೆಲಸ ಕೈಗೆತ್ತಿಕೊಂಡಿದ್ದಾರೆ. ಶಾಲೆಯ ಅಭಿವೃದ್ಧಿ ಜೊತೆಗೆ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ವ್ಯವಸ್ಥೆ ಮಾಡುವ ಆಲೋಚನೆಯಲ್ಲೂ ಇದ್ದಾರೆ ಎನ್ನುತ್ತಾರೆ ಟ್ರಸ್ಟ್‌ ಸದಸ್ಯರು.

ಕೊರೊನಾ ಲಾಕ್‌ಡೌನ್‌ ವೇಳೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಲ್ಕುಸರ್ಕಾರಿಶಾಲೆಗಳನ್ನುಹಿರಿಯೂರು ಮತ್ತು ಚಳ್ಳಕೆರೆ ಬಿಇಒಗಳ ಸಮ್ಮುಖದಲ್ಲಿಕಿಚ್ಚಸುದೀಪ್‌ ಚಾರಿಟಬಲ್ ಟ್ರಸ್ಟ್ ಇತ್ತೀಚೆಗಷ್ಟೇ ದತ್ತುತೆಗೆದುಕೊಂಡಿತ್ತು.

‘ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್ ಅವರು ಸರ್ಕಾರದ ಜೊತೆ ಕೈ ಜೋಡಿಸಿ ಶಿವಮೊಗ್ಗ ಜಿಲ್ಲೆಯ 4 ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಅವರ ಕಾರ್ಯ ಅತ್ಯಂತ ಸಂತಸದ ವಿಷಯ. ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಟ್ವೀಟ್‌ ಮಾಡಿ, ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT