ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆ.2ಕ್ಕೆ ‘ಬಿಲ್ಲಾ ರಂಗ ಬಾಷಾ’ ಘೋಷಣೆ

Published : 29 ಆಗಸ್ಟ್ 2024, 8:27 IST
Last Updated : 29 ಆಗಸ್ಟ್ 2024, 8:27 IST
ಫಾಲೋ ಮಾಡಿ
Comments

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ‘ಕಿಚ್ಚ’ ಸುದೀಪ್ ಅವರ ‘ವಿಕ್ರಾಂತ್‌ ರೋಣ’ 2022ರ ಜುಲೈನಲ್ಲಿ ಬಿಡುಗಡೆಯಾಗಿತ್ತು. ಆನಂತರ ಇವರ ನಟನೆಯ ‘ಮ್ಯಾಕ್ಸ್‌‘ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದರೂ ರಿಲೀಸ್‌ ಯಾವಾಗ ಎನ್ನುವುದರ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ನೀಡಿಲ್ಲ. ಇದರ ನಡುವೆ ಅನೂಪ್‌ ಭಂಡಾರಿ ಜೊತೆ ಮತ್ತೊಂದು ಸಿನಿಮಾ ಮಾಡಲು ಸುದೀಪ್‌ ಸಜ್ಜಾಗಿದ್ದಾರೆ. 

ಈ ಹಿಂದೆಯೇ ಘೋಷಣೆಯಾಗಿದ್ದ ‘ಬಿಲ್ಲಾ ರಂಗ ಬಾಷಾ’(BRB) ಸಿನಿಮಾದ ತುಣುಕು ಸೆ.2ರಂದು ಬಿಡುಗಡೆಯಾಗಲಿದೆ. ‘ಮತ್ತೊಮ್ಮೆ ಕಿಚ್ಚ ಸುದೀಪ್‌ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಖುಷಿ ನೀಡಿದೆ. ಸೆ.2ರಂದು ಸುದೀಪ್ ಅವರ ಜನ್ಮದಿನದಂದು ಮತ್ತೆ ಭೇಟಿಯಾಗೋಣ. ಅಂದು ಬೆಳಗ್ಗೆ 10 ಗಂಟೆಗೆ ಬಿಆರ್‌ಬಿ ಸಿನಿಮಾ ಘೋಷಣೆಯಾಗಲಿದೆ’ ಎಂದು ಅನೂಪ್‌ ಭಂಡಾರಿ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. ಈ ಮೂಲಕ ‘ವಿಕ್ರಾಂತ್‌ ರೋಣ’ ಜೋಡಿ ಮತ್ತೊಮ್ಮೆ ತೆರೆ ಮೇಲೆ ಬರಲಿದೆ.  

ಸುದೀಪ್‌ ನಟನೆಯ 46ನೇ ಸಿನಿಮಾ ‘ಮ್ಯಾಕ್ಸ್‌’ ಶೀಘ್ರದಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ. ‘ಮೈ ಆಟೋಗ್ರಾಫ್‌’ ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್‌ ತೊಟ್ಟಿದ್ದ ಸುದೀಪ್‌ ‘ಮಾಣಿಕ್ಯ’ ಸಿನಿಮಾ ಬಳಿಕ ಮತ್ತೊಮ್ಮೆ ನಿರ್ದೇಶನಕ್ಕೆ ಇಳಿಯಲೂ ಸಿದ್ಧತೆ ನಡೆಸಿದ್ದಾರೆ. ತಮ್ಮ ನಟನೆಯ 50ನೇ ಸಿನಿಮಾವನ್ನು ತಾವೇ ನಿರ್ದೇಶಿಸಲಿದ್ದಾರೆ ಕಿಚ್ಚ. ಈ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್‌ನಡಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗಳ ಮಧ್ಯೆ ‘ಬಿಆರ್‌ಬಿ’ ಚಿತ್ರೀಕರಣ ಆರಂಭವಾಗಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT